Lenovo at MWC 2025:
ತಂತ್ರಜ್ಞಾನ ಉದ್ಯಮದ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2025) ಪ್ರಾರಂಭವಾಗಿದೆ. ಪ್ರಪಂಚದಾದ್ಯಂತದ ತಂತ್ರಜ್ಞಾನ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ತಮ್ಮ ಹಲವು ವಿಶಿಷ್ಟ ಮತ್ತು ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿವೆ. ಈ ವರ್ಷದ ಕಾರ್ಯಕ್ರಮದಲ್ಲಿ ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಇತರ ಉತ್ಪನ್ನಗಳ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ಪ್ರದರ್ಶಿಸಿದ ಕಂಪನಿಗಳಲ್ಲಿ ಲೆನೊವೊ ಕೂಡ ಒಂದು. MWC 2025 ರಲ್ಲಿ ಪ್ರದರ್ಶಿಸಲಾದ ಲೆನೊವೊದ ಹೊಸ ಉತ್ಪನ್ನಗಳ .
ವಿವರಗಳು ಇಲ್ಲಿವೆ.
-
Yoga Solar PC Concept (POC);
ಯೋಗ ಸೋಲಾರ್ ಪಿಸಿ ಕಾನ್ಸೆಪ್ಟ್ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2025 ರಲ್ಲಿ ಲೆನೊವೊ ಪರಿಚಯಿಸಿದ ಎಲ್ಲಾ ಉತ್ಪನ್ನಗಳಲ್ಲಿ ಅತ್ಯಂತ ವಿಶಿಷ್ಟವಾಗಿದೆ. ಇದು ಸೂರ್ಯನ ಬೆಳಕಿನಿಂದ ಚಾಲಿತವಾದ ಲ್ಯಾಪ್‌ಟಾಪ್. ಕಂಪನಿಯು ಈ ಪಿಸಿಯನ್ನು ಒಳಾಂಗಣದಲ್ಲಿ ಮಾತ್ರವಲ್ಲದೇ ಮನೆಯ ಹೊರಗೆ, ಉದ್ಯಾನವನದಲ್ಲಿ, ರಸ್ತೆಯಲ್ಲಿ, ನಿಲ್ದಾಣದಲ್ಲಿ ಅಥವಾ ಅಂತಹ ಯಾವುದೇ ತೆರೆದ ಸ್ಥಳದಲ್ಲಿ ಕೆಲಸ ಮಾಡಲು ಬಯಸುವವರಿಗಾಗಿ ವಿಶೇಷವಾಗಿ ಪರಿಚಯಿಸಿದ
ಈ ಪಿಸಿಯು ಸೌರ ಫಲಕವನ್ನು ಹೊಂದಿದ್ದು ಅದು ಶೇಕಡ 24ರಷ್ಟು ಹೆಚ್ಚು ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಪರಿವರ್ತಿಸುತ್ತದೆ. ಇದು ಈ ಲ್ಯಾಪ್‌ಟಾಪ್ ಸೂರ್ಯನ ಬೆಳಕನ್ನು ಬಳಸಿ ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಲೆನೊವೊದ ಈ ಸೌರಶಕ್ತಿ ಚಾಲಿತ ಪಿಸಿ ಕೂಡ ತುಂಬಾ ಹಗುರವಾಗಿದೆ. ಇದರ ತೂಕ ಕೇವಲ 1.22 ಕೆಜಿ. ಇದರ ದಪ್ಪ ಕೇವಲ 15 ಮಿ.ಮೀ. ಈ ಲ್ಯಾಪ್‌ಟಾಪ್ ತುಂಬಾ ಸ್ಲಿಮ್ ಆಗಿದ್ದು, ಹಗುರವಾಗಿರುವುದರಿಂದ ನೀವು ಇದನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು.
-
Yoga Pro 9i Aura Edition (16″, 10):
ಲೆನೊವೊ ಈ ಲ್ಯಾಪ್‌ಟಾಪ್ ಅನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪರಿಚಯಿಸಿತು. ಇದನ್ನು ವಿಶೇಷವಾಗಿ ಹೈ-ಪರ್ಫಾರ್ಮೆನ್ಸ್ ಮೈಂಡ್ ಕ್ರಿಯೆಟರ್ಸ್ ಅನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಇದು ಪ್ರೊಸೆಸರ್‌ಗಾಗಿ ಇಂಟೆಲ್ ಕೋರ್ ಅಲ್ಟ್ರಾ ಚಿಪ್‌ಸೆಟ್ ಮತ್ತು ಗ್ರಾಫಿಕ್ಸ್‌ಗಾಗಿ NVIDIA GeForce RTX 5070 GPU ಅನ್ನು ಹೊಂದಿದೆ. ಇದಕ್ಕೆ ಅಡ್ವಾನ್ಸ್ಡ್ ಎಐ ಕೆಪಾಬಿಲಿಟಿ, ಅದ್ಭುತವಾದ ಡಿಸ್ಪ್ಲೇ ಟಕ್ನಾಲಾಜಿ, ಗ್ರೇಟ್ ಪ್ರೊಸೆಸಿಂಗ್ ಪವರ್ ನೀಡುತ್ತದೆ. ಇದಲ್ಲದೆ, ಕಂಪನಿಯು ಈ ಲ್ಯಾಪ್‌ಟಾಪ್‌ನಲ್ಲಿ 3.2K ರೆಸಲ್ಯೂಶನ್‌ನೊಂದಿಗೆ OLED ಡಿಸ್ಪ್ಲೇಯನ್ನು ಒದಗಿಸಿದೆ. ಇದು ಬಣ್ಣಗಳನ್ನು ಬಹಳ ವಾಸ್ತವಿಕ ರೀತಿಯಲ್ಲಿ ತೋರಿಸುತ್ತದೆ. ಈ ಲ್ಯಾಪ್‌ಟಾಪ್ ಅನ್ನು ಕ್ರಿಯೆಟರ್ಸ್ಗೆ ತುಂಬಾ ವಿಶೇಷವಾಗಿಸುತ್ತದೆ.
-
Yoga Pro 7i Aura Edition (14″, 10):
ಈ ಯೋಗ ಪ್ರೊ 7i ಔರಾ ಎಡಿಷನ್ ಡಿಸ್ಪ್ಲೇ ಗಾತ್ರ 14 ಇಂಚುಗಳು. ಇದು 32GB RAM ಮತ್ತು 3K OLED ಡಿಸ್ಪ್ಲೇ ಹೊಂದಿದ್ದು, ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ ಕ್ರಿಕೆಟಿವ್ ಕೆಲಸವನ್ನು ಸುಲಭ ಮತ್ತು ಉತ್ತಮಗೊಳಿಸುತ್ತದೆ ಎಂದು ಲೆನೊವೊ ಹೇಳಿಕೊಂಡಿದೆ. ಕಂಪನಿ ಇದರಲ್ಲಿ ಲೆನೊವೊ ಎಕ್ಸ್ ಪವರ್ ತಂತ್ರಜ್ಞಾನವನ್ನು ಬಳಸಿದೆ. ಇದು ಲ್ಯಾಪ್‌ಟಾಪ್ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ. ಈ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಇದು ತುಂಬಾ ಶಾಂತ ಮತ್ತು ವೇಗವಾಗಿ ಕೆಲಸ ನಡೆಯುತ್ತದೆ.
-
Yoga Pro 7 (14″, 10):
ಲೆನೊವೊ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2025 ರಲ್ಲಿ ಯೋಗ ಪ್ರೊ 7 ಅನ್ನು ಬಿಡುಗಡೆ ಮಾಡಿತು. ಇದರ ಡಿಸ್ಪ್ಲೇ ಗಾತ್ರ 14 ಇಂಚುಗಳು. ಈ ಲ್ಯಾಪ್‌ಟಾಪ್ AMD Ryzen AI ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಬಳಕೆದಾರರಿಗೆ ಎಐ ಕೆಲಸವನ್ನು ವೇಗವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಲ್ಯಾಪ್‌ಟಾಪ್‌ನಲ್ಲಿ ಕಂಪನಿಯು 3K OLED ಡಿಸ್ಪ್ಲೇ ಮತ್ತು 50 TOPS NPU ಗಳನ್ನು ಒದಗಿಸಿದೆ. ಇದು ಕ್ರಿಯೆಟರ್ಸ್ ತಮ್ಮ ಕಲೆಗೆ ಉತ್ತಮ ಬಣ್ಣಗಳು ಮತ್ತು ಶಾರ್ಪ್ನೆಸ್ ಪ್ರದರ್ಶಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯ ಲ್ಯಾಪ್‌ಟಾಪ್ ಅಗತ್ಯವಿರುವವರಿಗೆ ಈ ಲ್ಯಾಪ್‌ಟಾಪ್ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.
-
Yoga Slim 7 (14″, 10):
ಈ ಟೆಕ್ ಇವೆಂಟ್‌ನಲ್ಲಿ ಲೆನೊವೊ ಯೋಗ ಸ್ಲಿಮ್ 7 ಅನ್ನು ಪರಿಚಯಿಸಿತು. ಇದರ ಡಿಸ್ಪ್ಲೇ ಗಾತ್ರ 14 ಇಂಚುಗಳು. ಇದು ಲೈಟ್ವೇಟ್ ಮತ್ತು ಪೋರ್ಟಬಲ್ ಲ್ಯಾಪ್‌ಟಾಪ್ ಆಗಿದೆ. ಕಂಪನಿಯು 22.5 ಗಂಟೆಗಳ ಬ್ಯಾಟರಿ ಲೈಫ್ ಇದೆ ಎಂದು ಹೇಳಿಕೊಳ್ಳುತ್ತದೆ. ಈ ಲ್ಯಾಪ್‌ಟಾಪ್‌ನಲ್ಲಿ ಪ್ರೊಸೆಸರ್‌ಗಾಗಿ ಕಂಪನಿಯು AMD ರೈಜೆನ್ AI ಚಿಪ್‌ಸೆಟ್ ಅನ್ನು ಬಳಸಿದೆ. ಇದಲ್ಲದೆ ಇದು 2.8K ರೆಸಲ್ಯೂಶನ್ ಹೊಂದಿರುವ OLED ಡಿಸ್ಪ್ಲೇಯನ್ನು ಹೊಂದಿದೆ. ಇದು ಸೃಷ್ಟಿಕರ್ತರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಕಂಪನಿಯು ಈ ಲ್ಯಾಪ್‌ಟಾಪ್ ವಿಶೇಷವಾಗಿ ತಮ್ಮ ಕ್ರಿಯೆಟಿವಿಟಿನಿ ತ್ವರಿತವಾಗಿ ಜಗತ್ತಿಗೆ ತರಲು ಬಯಸುವವರಿಗೆ ಎಂದು ಹೇಳುತ್ತದೆ.