ಗೋಕಾಕ : ತಾಲೂಕಿನ ಗ್ರಾಮೀಣ ಭಾಗದ ಹುಡುಗರು ಸೇರಿಕೊಂಡು ಕಿರುಚಿತ್ರ ಮಾಡುವ ಪ್ರಯತ್ನಕ್ಕೆ ಹಾಕಿ ಯಶಸನ್ನ ಕಾಣುತ್ತಿದ್ದಾರೆ, ಹೌದು, ಸಮಯಾ, ನನ್ನೊಂದಿಗೆ ಎನ್ನುವ ಹೆಸರಿನ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಶಾರ್ಟ್ ಫಿಲ್ಮ್ ಅಭಿಮಾನಿಗಳಲ್ಲಿ ಪೋಸ್ಟರ್ ನೋಡಿ ಕುತೂಹಲ ಸೃಷ್ಠಿ ಆಗಿದೆ, ಹೀರೋ ಪಾತ್ರದಲ್ಲಿ ಮೋಹನ್ ನಂದಿ ಅಭಿನಯಿಸಿದ್ದು ನಾಯಕಿಯಾಗಿ ರೇವತಿ ಶಿರಹಟ್ಟಿ ಅವರು ನಟಿಸಿದ್ದಾರೆ, ಚಿತ್ರಕ್ಕೆ ಬಸು ಬಂಡಿ ಎನ್ನುವವರು ಬಂಡವಾಳ ಹೂಡಿಕೆ ಮಾಡಿದ್ದು ಕಿರುಚಿತ್ರ ಯಶಸ್ಸನ್ನಾ ಗಳಿಸಲಿ ಎನ್ನುವುದು ಎಲ್ಲರ ಆಶಯವಾಗಿದೆ.