spot_img
spot_img

ಪೋಲಿಸರ ಮುಂದೆ ಚಿಕ್ಕಣ್ಣ ಹೇಳಿದ್ದೇನು..? ದರ್ಶನಗೆ ನಡುಕ ಶುರು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಅದೆಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಅನ್ನೊದು ಈಗಾಗಲೇ ಕೋರ್ಟ್​ಗೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯೇ ಸಾಕ್ಷಿ. ಸಿಕ್ಕ ಒಂದೇ ಒಂದು ಸಾಕ್ಷಿಯನ್ನು ಬಿಡದೆ ಅತ್ಯಂತ ಸೂಕ್ಷ್ಮವಾಗಿ ಹಾಗೂ ಸೂಕ್ತವಾಗಿ ಚಾರ್ಜ್​ಶೀಟ್ ರೆಡಿಮಾಡಿದ್ದಾರೆ. ಈಗ ಚಾರ್ಜ್​ಶೀಟ್​ನಲ್ಲಿ ಚಿಕ್ಕಣ್ಣನಿಂದ ಪಡೆದುಕೊಂಡಿರುವ ಹೇಳಿಕೆಯನ್ನು ಕೂಡ ಉಲ್ಲೇಖಿಸಲಾಗಿದೆ. ನಟ ಚಿಕ್ಕಣ್ಣ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಏನೆಲ್ಲಾ ಇದೆ ಅನ್ನೊದರ ಸಂಪೂರ್ಣ ವರದಿ ಇಲ್ಲಿದೆ.

ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟ ಹಾಗೂ ಹಾಸ್ಯ ನಟನಾಗಿ ವೃತ್ತಿಯನ್ನು ಮಾಡಿಕೊಂಡಿರುತ್ತೇನೆ. ನಾನು 2011 ರಲ್ಲಿ ಸಿನಿಮಾ ರಂಗಕ್ಕೆ ಬಂದಿರುತ್ತೇನೆ. ನನ್ನ ಸ್ವಂತ ಊರು ಮೈಸೂರಿನ ಬಲ್ಲಾಹಳ್ಳಿ ಗ್ರಾಮವಾಗಿರುತ್ತದೆ. ತಂದೆ ಈಗ್ಗೆ 05 ವರ್ಷಗಳ ಹಿಂದೆ ಮರಣಹೊಂದಿರುತ್ತಾರೆ. ನನ್ನ ತಾಯಿ ನಿಂಗಮ್ಮ ಇವರು ಗೃಹಿಣಿಯಾಗಿ ಊರಿನಲ್ಲಿ ವಾಸವಾಗಿದ್ದಾರೆ. ನಮ್ಮ ತಂದೆ ತಾಯಿಗೆ ನಾವುಗಳು 05 ಜನ ಮಕ್ಕಳು ನಾನು ನಾಲ್ಕನೆಯವನಾಗಿರುತ್ತೇನೆ.

ನನಗೆ ಚಿತ್ರ ನಟ ದರ್ಶನ್ ಬುಲ್ ಬುಲ್ ಚಿತ್ರದ ಸಮಯದಿಂದ ಪರಿಚಯವಾಗಿರುತ್ತದೆ. ನಾನು ಅವರೊಂದಿಗೆ ಸುಮಾರು 03 ಚಿತ್ರಗಳಲ್ಲಿ ಹಾಸ್ಯನಟನಾಗಿ ಕೆಲಸ ಮಾಡಿರುತ್ತೇನೆ. ರಾಬರ್ಟ್ ಸಿನಿಮಾದಲ್ಲಿ ಕೆಲಸ ಮಾಡುವಾಗ ನನಗೆ ಹೆಚ್ಚಾಗಿ ದರ್ಶನ್ ರವರೊಂದಿಗೆ ಒಡನಾಟ ಹೊಂದಿರುತ್ತೇನೆ. ದರ್ಶನ್ ರವರಿಗೂ ಪವಿತ್ರಗೌಡ ರವರೊಂದಿಗೆ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ಬಗ್ಗೆ ನನಗೆ ತಿಳಿದು ಬಂದಿರುತ್ತದೆ.

ದಿನಾಂಕ 08/06/2024 ರಂದು ನಾನು ವಿಶ್ವೇಶ್ವರಯ್ಯ ಲೇಔಟ್‌ನಲ್ಲಿರುವ ಸಿನಿಮಾ ನಿರ್ಮಾಪಕರಾದ ಎ.ಪಿ ಅರ್ಜುನ್  ಕಛೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಸ್ಕ್ರೀನ್ ಪ್ಲೇ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ನಟ ಯಶಸ್ ನನಗೆ ಕರೆ ಮಾಡಿದರು. ದರ್ಶನ್ ರವರು ಮದ್ಯಾಹ್ನ 01-30 ಗಂಟೆಗೆ ರಾಜರಾಜೇಶ್ವರಿನಗರದ ಸ್ಟೋನಿ ಬ್ರೂಕ್ ರೆಸ್ಟೋಬಾರ್‌ನಲ್ಲಿ ಊಟಕ್ಕೆ ಏರ್ಪಾಡು ಮಾಡಿದ್ದಾರೆ, ನಿನಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿರುತ್ತಾರೆ ಎಂದರು. ನೀನು 01-30 ಗಂಟೆಗೆ ನೇರವಾಗಿ ಸ್ಟೋನಿ ಬ್ರೂಕ್ ರೆಸ್ಪೋಬಾರ್‌ಗೆ ಬರುವಂತೆ ತಿಳಿಸಿರುತ್ತಾರೆ.

ನಾನು ಎ.ಪಿ ಅರ್ಜುನ್ ರವರ ಕಛೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಸ್ಟೀನ್ ಪ್ಲೇ ಬಗ್ಗೆ ಚರ್ಚೆ ಮಾಡುತ್ತಿದ್ದು ಎಷ್ಟು ಗಂಟೆಗೆ ಮುಗಿಯುವುದೋ ಗೊತ್ತಿಲ್ಲ ಬರಲು ಟ್ರೈ ಮಾಡುತ್ತೇನೆಂದು ಯಶಸ್‌ಗೆ ತಿಳಿಸಿದೆ. ಸುಮಾರು 10 ನಿಮಿಷಗಳ ನಂತರ ದರ್ಶನ್ ಕರೆ ಮಾಡಿ 01-30 ಗಂಟೆಗೆ ಸ್ಟೋನಿ ಬ್ರೂಕ್ ರೆಸೋಬಾರ್‌ಗೆ ಬರುವಂತೆ ತಿಳಿಸಿದರು.

ಅದರಂತೆ ನಾನು ಮನೆಗೆ ಬಂದು ಬಟ್ಟೆಗಳನ್ನು ಬದಲಾಯಿಸಿಕೊಂಡು ಸುಮಾರು ಮದ್ಯಾಹ್ನ 02-45 ಗಂಟೆಗೆ ನನ್ನ ಖಾಸಗಿ ವಾಹನದಲ್ಲಿ ಡ್ರೈವರ್ ಸಿದ್ದು ಜೊತೆಯಲ್ಲಿ ಸ್ಟೋನಿ ಬ್ರೂಕ್ ರೆಸ್ಟೋಬಾರ್‌ಗೆ ಹೋದೆ. ನಾನು ಸಿದ್ದುನನ್ನು ವಾಹನದಲ್ಲಿಯೇ ಇರಿಸಿ ಮೊದಲನೇ ಮಹಡಿಯಲ್ಲಿರುವ ಡಿ ಬಾಸ್ ಸಪಾರಿ ಎಂಬ ಲಾಂಜ್‌ಗೆ ತೆರಳಿದೆ. ಅಲ್ಲಿ ದರ್ಶನ್, ವಿನಯ್, ಪ್ರದೂಷ್, ಯಶಸ್, ನಾಗರಾಜು, ರವರುಗಳು ಟೇಬಲ್‌ನಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದರು.

ನಾನು ಟೇಬಲ್‌ನಲ್ಲಿ ಚೇರ್ ಹಾಕಿಕೊಂಡು ಕುಳಿತುಕೊಂಡಿದ್ದು ನನ್ನ ಮುಂದಿನ ಚಿತ್ರದ ಬಗ್ಗೆ ಮಾತನಾಡಿದೆ. ನಾನು ಸಹ ಅವರುಗಳೊಂದಿಗೆ ಮಾತನಾಡಿಕೊಂಡು ಊಟ ಮಾಡುತ್ತಿರುವ ಸಮಯದಲ್ಲಿ ನನಗೆ ಗೊತ್ತಿದ್ದ ಹಾಗೂ ದರ್ಶನ್ ರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್, ದರ್ಶನ್ ರವರ ಬಳಿಗೆ ಬಂದು ಕಿವಿಯಲ್ಲಿ ಯಾವುದೋ ವಿಚಾರವನ್ನು ತಿಳಿಸಿರುತ್ತಾನೆ.

ಆತನು ಬಂದು ಕಿವಿಯಲ್ಲಿ ವಿಷಯವನ್ನು ತಿಳಿಸಿದ ನಂತರ ದರ್ಶನ್ ಮುಖಭಾವ ಬದಲಾವಣೆಯಾಗಿರುತ್ತದೆ. ನಂತರ ಅವರು ಯಾರಿಗೋ ಕರೆ ಮಾಡಿ ಗಂಭೀರವಾಗಿ ಯಾವುದೋ ವಿಚಾರದ ಬಗ್ಗೆ ಚರ್ಚೆ ಮಾಡಿದರು. ನಂತರ ಚಿಕ್ಕಣ್ಣ ನೀನು ಹೊರಡು ನಮಗೆ ಬೇರೆ ಕೆಲಸ ಇದೆ ಎಂದು ದರ್ಶನ್ ತಿಳಿಸಿದರು. ನಂತರ ಎಲ್ಲರೂ ಒಟ್ಟಿಗೆ ಕೆಳಗೆ ಬಂದಿದ್ದು, ನಾನು ನನ್ನ ಕಾರ್ ಡ್ರೈವರ್ ಸಿದ್ದುಗೆ ಕರೆ ಮಾಡಿ ಬರಲು ತಿಳಿಸಿದೆ. ನನ್ನ ಕಾರಿನಿಂದ ಹೊರಟಾಗ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದರ್ಶನ್, ಪ್ರದೂಷ್, ವಿನಯ್ ರವರುಗಳು ಹಾಗೂ ನಾಗರಾಜು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನಲ್ಲಿ ಅಲ್ಲಿಂದ ಹೊರಟಿರುತ್ತಾರೆ. ನಂತರ ನಾನು ನನ್ನ ಕಾರಿನಲ್ಲಿ ಮನೆಗೆ ಹೋಗಿರುತ್ತೇನೆ.

ಇದಾದ ನಂತರ ದಿನಾಂಕ 10/06/2024 ರಂದು ನನಗೆ ಪರಿಚಯವಿದ್ದ ಮೈಸೂರಿನ ನನ್ನ ಸ್ನೇಹಿತ ನಾಗೇಂದ್ರ ಎಂಬುವನು ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದು ತಿಳಿಸಿದ್ದು ನಂತರ ಸುದ್ದಿ ಮಾದ್ಯಮಗಳಲ್ಲಿ ದರ್ಶನ್ ಹಾಗೂ ಪವಿತ್ರಗೌಡ ಹಾಗೂ ಇತರರು ಅರೆಸ್ಟ್ ಆಗಿರುವ ಬಗ್ಗೆ ಪ್ರಸಾರವಾಗುತ್ತಿರುವುದನ್ನು ನೋಡಿರುತ್ತೇನೆ.

ಚಿತ್ರದುರ್ಗದ ವಾಸಿ ರೇಣುಕಾಸ್ವಾಮಿ ಎಂಬುವನು ಇನ್‌ ಸ್ಟಾಗ್ರಾಂನಲ್ಲಿ ಪವಿತ್ರಗೌಡ ರವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದ ಆತನನ್ನು ದರ್ಶನ್ ರವರು ತನ್ನ ಸಹಚರರೊಂದಿಗೆ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಸಿ ಆ‌ರ್.ಆ‌ರ್ ನಗರದ ಜಯಣ್ಣ ಗೋಡೋನ್‌ಗೆ ಕರೆಸಿ ಆತನಿಗೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿಸಿ ಮೃತದೇಹವನ್ನು ಸುಮ್ಮನಹಳ್ಳಿಯ ಮೋರಿ ಹತ್ತಿರ ಎಸೆದಿರುವುದಾಗಿ ತಿಳಿದು ಬಂದಿರುತ್ತದೆ. ನಾನು ಸ್ಟೋನಿಬ್ರೂಕ್ ರೆಸ್ಟೋಬಾರ್‌ನಲ್ಲಿ ಇದ್ದಾಗ ದರ್ಶನ್ ರವರ ಕಿವಿಯಲ್ಲಿ ಬಂದು ಯಾವುದೋ ವಿಚಾರವನ್ನು ಹೇಳಿದ್ದ ಪವನ್ ಎಂಬುವನನ್ನು ಸಹ ಕೇಸಿನಲ್ಲಿ ಪೊಲೀಸರು ಬಂದಿಸಿರುವುದು ಕಂಡು ತಿಳಿದು ಬಂದಿರುತ್ತದೆ ಎಂದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...