ಮಂಡ್ಯ: ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ನಡೆದ ಗಲಾಟೆಯಲ್ಲಿ ಭೀಮ್ ರಾಜ್ ಅನ್ನೋರ ಬಟ್ಟೆ ಶೋ ರೂಮ್ ಸುಟ್ಟು ಭಸ್ಮವಾಗಿದೆ. ಗಲಾಟೆ ನಡೆದ ಸ್ಥಳದಲ್ಲಿ ಸಾಧನಾ ಟೆಕ್ಸ್ಸ್ಟೈಲ್ ಎಂಬ ಅಂಗಡಿ ಹಾಕಿಕೊಂಡಿದ್ದರು. ಇವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾರೆ. ಪರಿಣಾಮ ಭೀಮ್ ರಾಜ್ ಅನ್ನೋರಿಗೆ 1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯನ್ನು ಕಳೆದುಕೊಂಡ ಉದ್ಯಮಿ ಭೀಮ್ ರಾಜ್ ಬದುಕು ಬೀದಿಗೆ ಬಿದ್ದಿದ್ದು, ಕಣ್ಣೀರು ಇಡುತ್ತಿದ್ದಾರೆ.
ಭೀಮ್ ರಾಜ್ ಅವರ ಬಟ್ಟೆ ಉದ್ಯಮದಿಂದಲೇ ಅವರ ಜೀವನ ನಡೆಸುತ್ತಿದ್ದರು. ಅವರ ಬಟ್ಟೆ ಅಂಗಡಿ ಬಿಟ್ಟರೆ ಬೇರೇ ಏನೂ ಇಲ್ಲ. ಶೋ ರೂಂಗೆ ಬೆಂಕಿ ಹಾಕಿರುವ ಮಾಹಿತಿ ಪಡೆದು ಸ್ಥಳಕ್ಕೆ ಬಂದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಲು ಬಂದಿದ್ರು. ಆ ವೇಳೆ 200 ಮಂದಿಯ ಗುಂಪು ಅವರ ಮೇಲೆ ಅಟ್ಯಾಕ್ ಮಾಡಿದ್ರು.
ಕೈಯಲ್ಲಿ ಬಾಟಲ್, ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದರು. ಪೊಲೀಸರ ಬಳಿ ಬರುವಂತೆ ಮನವಿ ಮಾಡಿಕೊಂಡರು. ಆದರೆ ಪೊಲೀಸರಿಗೂ ಅವರು ಅಟ್ಯಾಕ್ ಮಾಡಿದ್ದರಿಂದ ಸ್ಥಳಕ್ಕೆ ಬರಲು ಹಿಂದೇಟು ಹಾಕಿದರು. ಕೊನೆಗೆ ಅವರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಲು ಮುಂದೆ ಬಂದರು. ಆಗ ಅವರ ಪ್ರಾಣ ಉಳಿಸಿಕೊಳ್ಳಲು ಚಪ್ಪಲಿ ಬಿಟ್ಟು ಬರಿಗಾಲಲ್ಲೇ ಓಡಿ ಹೋಗಿ ಅವರ ಜೀವ ಉಳಿಸಿಕೊಂಡರು.
ನಾವು ಸಂಪೂರ್ಣ ಬೀದಿಗೆ ಬಂದಿದ್ದೇವೆ. 20 ವರ್ಷ ಹಿಂದಕ್ಕೆ ನಮ್ಮ ಸ್ಥಿತಿ ಹೋಗಿದೆ. ನಮ್ಮ ಶೋ ರೂಂ ನಲ್ಲಿ 7 ಜನ ಕೆಲಸ ಮಾಡುತ್ತಿದ್ದರು. ಈಗ ನಾನೇ ಮತ್ತೊಬ್ಬರ ಬಳಿ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಕನ್ನಡ ನ್ಯೂಸ್ಗಳ ಮುಂದೆ ಕಣ್ಣೀರು ಇಟ್ಟಿದ್ದಾರೆ