ಇಂದು ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಇದೇ ವರ್ಷದ ಕಳೆದ ಜೂನ್ ತಿಂಗಳಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರಿಗೆ 2 ರೂಪಾಯಿ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ಹಾಲಿನ ದರವನ್ನು ಹೆಚ್ಚಿಸುವ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತನಾಡಿದ್ದಾರೆ.
ಇಂದು ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಈ ಹೆಚ್ಚಳ ಮಾಡಿದ ಹಾಲಿನ ದರ ನೇರವಾಗಿ ರೈತರಿಗೆ ಹೋಗಬೇಕು ಎಂದರು.
ನಂದಿನ ಹಾಲಿನ ದರವನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಹಾಲಿನ ದರ ಹೆಚ್ಚಳ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿ ಹೆಚ್ಚಳ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಹಾಲಿನ ದರ ಹೆಚ್ಚಳ ಮಾಡಿದಾಗ ಟೀಕಿಸುವ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, “ನೀವು(ಜೆಡಿಎಸ್ ನಾಯಕರು) ರೈತರ ಮಕ್ಕಳು ಎಂದು ಹೇಳಿಕೊಳ್ಳುತ್ತೀರಿ. ಆದರೆ, ನೀವು ಯಾರಾದರೂ ರೈತರಿಗೆ ಏನಾದರೂ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಏನೂ ಮಾಡದೇ ನಾವು ರೈತರ ಮಕ್ಕಳು ಅಂತ ಹೇಳಿಕೊಳ್ಳುತ್ತೀರಿ. ನಾವು ಹಾಲಿನ ದರ 3 ರೂ. ಹೆಚ್ಚಳ ಮಾಡಿ ಅದರ ಲಾಭವನ್ನು ರೈತರಿಗೆ ವರ್ಗಾಯಿಸಲು ಮುಂದಾದರೆ ಅದನ್ನು ವಿರೋಧಿಸುತ್ತೀರಿ” ಎಂದು ಟೀಕಿಸಿದರು.
ಇದನ್ನೂ ಓದಿ:IIMB Recruitment 2024; ನಮ್ಮ ರಾಜ್ಯದಾನಿಯಲ್ಲಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನ.!.
ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ್ದು ನಮ್ಮ ಸರ್ಕಾರ. ಬಹಳಷ್ಟು ಒಕ್ಕಲಿಗ ನಾಯಕರು ಅನಿಸಿಕೊಂಡವರು ಮಾಡಲಿಲ್ಲ ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರಿ ಸಿಎಂ ಟಾಂಗ್ ನೀಡಿದರು.
ನಂದಿನ ಹಾಲಿನ ದರ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಯಥಾ ಪ್ರಕಾರ ಮತ್ತೆ ಹಳೇ ಡೈಲಾಗ್ ಹೊಡೆದ ಸಿಎಂ, ಜೆಡಿಎಸ್ ಟೀಕಿಸುತ್ತಾ ಹೆಚ್ಚಳ ಮಾಡುವ ದರ ರೈತರಿಗೆ ವರ್ಗಾಯಿಸುವ ಮಾತ್ನಾಡಿದ್ದಾರೆ. ಸಿದ್ದು ಈ ಮಾತಿಗೆ ಕೆರಳಿದ ಶಿವಮೊಗ್ಗ ಸಂಸದ ರಾಘವೇಂದ್ರ, ಈ ಹಿಂದೆಯೂ ಇದೇ ಕಥೆ ಹೇಳಿದ್ರಿ, ಈಗಲೂ ಅದೇ ರಿಪೀಟ್ ಮಾಡ್ತಿದ್ದೀರಿ. ಇದನ್ನ ಯಾವುದೇ ಕಾರಣಕ್ಕೋ ಒಪ್ಪಲ್ಲ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಮಾರುತಿ ಸುಜುಕಿ ಕಾರು ಒಂದು ಬಾರಿ ಚಾರ್ಜ್ ಮಾಡಿದ್ರೆ 500km ಚಲಿಸುತ್ತೆ .! ಹೊಸ ಎಲೆಕ್ಟ್ರಿ ವಾಹನ.
ಇದೇ ಜೂನ್ ತಿಂಗಳಲ್ಲಿ ಹಾಲಿನ ದರವನ್ನು 2 ರೂ.ಗಳಿಗೆ ಸರ್ಕಾರ ಹೆಚ್ಚಳ ಮಾಡಿತ್ತು. ಅಲ್ಲಿಗೆ, ಪ್ರತಿ 1 ಲೀಟರ್ ಹಾಲಿನ ಬೆಲೆ 22 ರೂ.ಗಳಿಂದ 24 ರೂ.ಗಳಿಗೆ ಹೆಚ್ಚಾಗಿತ್ತು. ಆಗ ವ್ಯಾಪಾರಿ ಜಾಣ್ಮೆ ಪ್ರದರ್ಶನ ಮಾಡಿದ್ದ ಸರ್ಕಾರ, ಲೀಟರ್ ಪ್ಯಾಕ್ ಮೇಲೆ 50 ಮಿ.ಲೀಟರ್ ಹೆಚ್ಚುವರಿ ನೀಡಿ 2 ರೂ. ಹೇರಿಕೆ ಮಾಡಿತ್ತು.