ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ (TV) ದೂರದರ್ಶನಗಾಗಿ ಮಾಡುತ್ತಿರುವ ಕಿರಿಕಿರಿ ಮಾಡುತ್ತಿರುವುದಕ್ಕೆ ಜೈಲು ಅಧಿಕಾರಿಗಳು ದರ್ಶನ್ಗೆ ಖಡಕ್ ಎಚ್ಚರಿಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸೆಲ್ನ ಕಸ ಗುಡಿಸಿ, ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : 2025 ರ ಜೂನ್ ವೇಳೆಗೆ ಅಯೋಧ್ಯೆಯ ರಾಮ ಮಂದಿರ ಸಂಕೀರ್ಣ ನಿರ್ಮಾಣ ಕಾರ್ಯ ಪೂರ್ಣ ̤̤.!
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ (TV) ದೂರದರ್ಶನ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಜೈಲಿನ ಅಧಿಕಾರಿಗಳಿಂದ ಎಚ್ಚರಿಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹೌದು.. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಟಿವಿಗಾಗಿ ಮಾಡುತ್ತಿರುವ ಕಿರಿಕಿರಿ ಮಾಡುತ್ತಿರುವುದಕ್ಕೆ ಜೈಲು ಅಧಿಕಾರಿಗಳು ದರ್ಶನ್ಗೆ ಖಡಕ್ ವಾರ್ನಿಂಗ್ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸೆಲ್ನ ಕಸ ಗುಡಿಸಿ, ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : 95 ರೂಪಾಯಿಗೆ ಮಾತ್ರ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್ ಪ್ಲಾನ್ಗಳಿವು…!
ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು, ‘ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ನಿಜವಾದ ಸೆರೆವಾಸ ಹೇಗಿರುತ್ತದೆ ಎಂಬ ಅನುಭವ ಆಗುತ್ತಿದ್ದು, ಸೆಲ್ನಲ್ಲಿ ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಶೌಚಾಲಯ ಸ್ವಚ್ಛತೆ ಎಲ್ಲವನ್ನೂ ಅವರೇ ಮಾಡಿಕೊಳ್ಳುತ್ತಿದ್ದಾರೆ. ಜೈಲಿನ ನಿಯಮದ ಪ್ರಕಾರ ಶೌಚಾಲಯವನ್ನು ವಾರಕ್ಕೊಮ್ಮೆ ಜೈಲಿನ ಸ್ವಚ್ಛತಾ ಕೆಲಸಗಾರರು ಬಂದು ಕ್ಲೀನ್ ಮಾಡುತ್ತಾರೆ.
ಉಳಿದ ದಿನ ಸೆಲ್ನಲ್ಲಿರುವ ಆರೋಪಿಗಳೇ ಸ್ವಚ್ಛ ಮಾಡಿಕೊಳ್ಳಬೇಕು. ಹಾಗಾಗಿ ದರ್ಶನ್ ತಮ್ಮ ಸೆಲ್ನಲ್ಲಿ ತಾವೇ ಕಸ ಗುಡಿಸಿಕೊಂಡು ಸ್ವಚ್ಛತಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಜೈಲರ್ ಖಡಕ್ ವಾರ್ನಿಂಗ್
ಜೈಲಿನಲ್ಲಿ (TV) ದೂರದರ್ಶನ ಕೊಡುವಂತೆ ಕಿರಿಕಿರಿ ಮಾಡುತ್ತ ಅಸಭ್ಯ ವರ್ತನೆ ತೋರಿರುವ ದರ್ಶನ್ಗೆ ಜೈಲಿನ ಅಧಿಕಾರಿಗಳಿ ಖಡಕ್ ವಾರ್ನಿಂಗ್ ನೀಡಿ ಪಾಠ ಹೇಳಿದ್ದಾರೆ. ‘ಇದು ಜೈಲು ಇರುವಷ್ಟು ದಿನ ಜೈಲಿನ ನಿಯಮ ಪಾಲನೆ ಮಾಡಿ’ ಎಂದು ದರ್ಶನ್ಗೆ ಜೈಲು ಅಧಿಕಾರಿಗಳು ತಮ್ಮದೇ ಶೈಲಿನಲ್ಲಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಆರೋಪ: ಮೂವರ ಯುವಕರ ಬಂಧನ!
‘ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ. ಇದು ಸರಿಯಲ್ಲ.. ಜೈಲು ನಿಯಮಾವಳಿ ಪ್ರಕಾರ ಏನು ಫೆಸಿಲಿಟಿ ಕೊಡಲು ಸಾಧ್ಯವೋ ಅದನ್ನು ಒದಗಿಸುತ್ತೇವೆ, ಹೆಚ್ಚಿನ ಸೌಲಭ್ಯ ಬೇಕು ಎಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಸುಮ್ಮನೆ ಅದು ಕೊಡಿ ಇದು ಕೊಡಿ ಎಂದು ಕಿರಿಕಿರಿ ಮಾಡಬೇಡಿ ಎಂದು ಜೈಲರ್ ದರ್ಶನ್ಗೆ ಖಡಕ್ ಆಗಿಯೇ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
(TV) ದೂರದರ್ಶನಗಾಗಿ ಕೋರ್ಟ್ ಮೊರೆ ಹೋಗಿದ್ದ ದಾಸ
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್, ಟಿವಿ ಕೊಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಜೈಲು ಅಧಿಕಾರಿಗಳು ಹೊಸ ಟಿವಿ ಇಲ್ಲದ ಕಾರಣ ಹಳೆಯ ಟಿವಿಯನ್ನೇ ದುರಸ್ಥಿ ಮಾಡಿ ಕೊಟ್ಟಿದ್ದರು. ಆ ಟಿವಿ ಸರಿಯಿಲ್ಲ ತೆಗೆದುಕೊಂಡು ಹೋಗಿ ಎಂದು ದರ್ಶನ್ ಕಿರಿಕಿರಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.