spot_img
spot_img

ಪೋಷಕರೇ ಹುಷಾರ್. ಮಕ್ಕಳ ಆರೋಗ್ಯದ ಮೇಲೆ ಗಮನ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಾನವರಲ್ಲಿ ಹೆಚ್ಚುತ್ತಿರುವ ಅಧಿಕ ತೂಕ, ಸ್ಥೂಲಕಾಯತೆ, ಮಧುಮೇಹ ಹಾಗೂ ಕ್ಯಾನ್ಸರ್‌ಗಳಂತ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಎದುರಿಸಲು ಎಲ್ಲಾ ರಾಷ್ಟ್ರಗಳು ಮುಂದಾಗಬೇಕು. ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪಾಲಿಸಿಗಳನ್ನು ಬಲಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಹೆಚ್​ಒ) ಎಲ್ಲಾ ದೇಶಗಳಿಗೆ ಕರೆ ನೀಡಿದೆ.

ಇದನ್ನೂ ಓದಿ : Bigg Boss ವಿಡಿಯೋ ಬಿಡುಗಡೆ : ಹೊಸ ಅಧ್ಯಾಯದ ಹವಾ ಜೋರಾಗಿದೆ..!

ಆಗ್ನೇಯ ಏಷ್ಯಾದಲ್ಲಿ ಇತ್ತೀಚೆಗೆ ಮಕ್ಕಳು ವಯಸ್ಸಿಗೂ ಮೀರಿ ದಪ್ಪವಾಗುತ್ತಿದ್ದಾರೆ. ಇದರಿಂದ ಅವರಲ್ಲಿ ಚಯಾಪಚಯ ಸಮಸ್ಯೆ ಕಾಡುತ್ತಿವೆ. ವಯಸ್ಕರಲ್ಲಿಯೂ ಇದು ಸಾಮಾನ್ಯವಾಗಿದ್ದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇವುಗಳಿಂದ ದೇಹದಲ್ಲಿ ಹೃದಯದ ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆ, ಮಧುಮೇಹ, ಕ್ಯಾನ್ಸರ್​ ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿವೆ. ಮಾನವರು ಸಾವನ್ನಪ್ಪಿದ್ದರೆ ಅದರಲ್ಲಿ ಮೂರನೇ ಎರಡರಷ್ಟು ಈ ಕಾಯಿಲೆಗಳೇ ಕಾರಣವಾಗಿವೆ ಎಂದು ಡಬ್ಲುಹೆಚ್​ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಸೈಮಾ ವಾಝೆದ್ ತಿಳಿಸಿದ್ದಾರೆ.

 

 

ಕೇವಲ 5 ವರ್ಷದ ಒಳಗಿನ ಸುಮಾರು 50 ಲಕ್ಷ ಮಕ್ಕಳು ಅಧಿಕ ತೂಕ ಹೊಂದಿರುವುದು ಆಘಾತಕಾರಿ ಸಂಗತಿಯಾಗಿದೆ. ಇತ್ತೀಚೆಗೆ ಕ್ಷಿಪ್ರ ನಗರೀಕರಣ ಜೊತೆಗೆ ಜನಸಂಖ್ಯೆ ಹೆಚ್ಚುತ್ತಿದೆ. ಫಾಸ್ಟ್​ಫುಡ್​ನಂತ ಅನಾರೋಗ್ಯಕರ ಆಹಾರಗಳು ತಿಂದು ದೈಹಿಕ ಚಟುವಟಿಕೆ ಕಡೆ ಗಮನ ಹರಿಸದಿರುವುದು. ಈ ಎಲ್ಲ ಕಾರಣಗಳಿಂದ ಮಕ್ಕಳು ಹಾಗೂ ವಯಸ್ಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಿಂದ 2030ರ ವೇಳೆಗೆ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ ;ಮಿಸ್ ಮಾಡ್ಕೋಬೇಡಿ ವಿಶ್ವ ಸಿನಿಮಾ ದಿನಾಚರಣೆ 99 ರೂಪಾಯಿಗೆ ಮಲ್ಟಿಫ್ಲೆಕ್ಸ್​ನಲ್ಲಿ ಸಿನಿಮಾ ನೋಡಿ!

ಇವುಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲ ದೇಶಗಳು ತೆಗೆದುಕೊಂಡರೇ 2030ರ ವೇಳೆಗೆ ಇದರಲ್ಲಿ ಯಶಸ್ಸನ್ನು ಗಳಿಸಬಹುದು. ಈ ಕಾಯಿಲೆಗಳಿಂದ ಸಾವನ್ನಪ್ಪುವವರನ್ನು 3ನೇ ಒಂದರಷ್ಟು ಕಡಿಮೆ ಮಾಡಬಹುದು. ಇದಕ್ಕೆ ಆರೋಗ್ಯಕರ ಆಹಾರ ಹಾಗೂ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ದೈಹಿಕ ಚಟುವಟಿಕೆಗಳಿಗೆ ಬೇಕಾದ ಪೂರಕ ಪರಿಸರವನ್ನು ನಿರ್ಮಾಣ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಭತ್ತದ ಬೆಲೆ ಭಾರಿ ಕುಸಿತ: ರೈತರಿಗೆ ಆಘಾತ

ಕಾರಟಗಿ : ಈ ಬಾರಿ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ತುಂಬಿದ ಪರಿಣಾಮ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣಾಘಾತವಾಗಿದೆ.ಒಂದು ಕಡೆ ಮಳೆಯಾಗಿ ಬೆಳೆದ...

ಶಾಂತಿ ಇಲ್ಲದೆ ಸಂಬಂಧ ಸಹಜವಾಗಿರಲು ಸಾಧ್ಯವಿಲ್ಲ: ಜೈಶಂಕರ್

ನವದೆಹಲಿ: ಗಡಿ ವಿವಾದವನ್ನು ಅಂತ್ಯಗೊಳಿಸಲು ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಒಪ್ಪಂದಕ್ಕೆಬರಲು ಚೀನಾದೊಂದಿಗೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ...

ಉಡುಪಿಯಲ್ಲೂ ಕೂಡ ಮಳೆಯ ಅಬ್ಬರ

ಉಡುಪಿ: ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತ ಪರಿಣಾಮ ಬೀರಿದ್ದು, ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಕೆಲವೆಡೆ...

ವಿದ್ಯಾರ್ಥಿಗಳಿಗೆ ಸಂವಿಧಾನ ಬೋಧಿಸಿದ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಒಂದು ಗಂಟೆ ಮೇಷ್ಟ್ರಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಪಾಠ ಮಾಡಿದರು. ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ...