2024-25ನೇ ಸಾಲಿನ ಎಸ್‌ಸಿಗಳು ಮತ್ತು ಇತರರ ಮೆಟ್ರಿಕ್‌ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಪರಿಶಿಷ್ಟಜಾತಿಗಳು ಮತ್ತು ಇತರೆ ಅವಕಾಶವಂಚಿತ ಸಮುದಾಯದ ಮಕ್ಕಳಿಗೆ ಶಾಲಾ ಶಿಕ್ಷಣ ಮುಂದುವರೆಸುವಂತೆ ಮನವೊಲಿಸಲು ವಿದ್ಯಾರ್ಥಿವೇತನ ನೀಡುವ ಸಂಬಂಧ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಪ್ರಕಟಣೆ ಹೊರಡಿಸಿಲಾಗಿದೆ..
ಆಸಕ್ತ ಮೆಟ್ರಿಕ್ ಪೂರ್ವ ತರಗತಿಯ ವಿದ್ಯಾರ್ಥಿಗಳು ಅರ್ಹತೆಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಕೊನೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅರ್ಹರು ಆನ್‌ಲೈನ್ ಮೂಲಕ ಈಗಲೇ ಅರ್ಜಿ ಸಲ್ಲಿಸಲು ಆರಂಭಿಸಿ. ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಘಟಕ 1, ಘಟಕ 2 ಎಂದು ಎರಡು ವಿಭಾಗಗಳಲ್ಲಿ ನೀಡುತ್ತಿವೆ. ಆದ್ದರಿಂದ ಅರ್ಹತೆಗಳನ್ನು ಘಟಕವಾರು ತಿಳಿದು ಅರ್ಜಿ ಸಲ್ಲಿಸಬಹುದು.
ಘಟಕ 1 ವಿಭಾಗದಲ್ಲಿ ಎಸ್‌ಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಾಗಿರಬೇಕು. ಪಾಲಕರು/ಪೋಷಕರ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು.
ಮಾನ್ಯತೆಯುಳ್ಳ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು.
ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಅರ್ಜಿಗಳನ್ನು ಪಡೆದು ಪರಿಶೀಲನೆ ನಡೆಸಲಿವೆ. ಕಡುಬಡ ಕುಟುಂಬಗಳಿಗೂ ದೊರೆಯಲಿದೆ ಸೌಲಭ್ಯ. ವಾರ್ಷಿಕವಾಗಿ ರು.3,500 ರಿಂದ 7000ವರೆಗೆ ವಾರ್ಷಿಕ ಶೈಕ್ಷಣಿಕ ಭತ್ಯೆ ನೀಡಲಾಗುತ್ತದೆ.
ದಿವ್ಯಾಂಗ (ವಿಶೇಷಚೇತನ) ವಿದ್ಯಾರ್ಥಿಗಳಿಗೆ ಶೇ.10 ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ.
ಘಟಕ-2 ವಿಭಾಗದಲ್ಲಿ ಈ ಸ್ವಚ್ಛತಾ ಕಾರ್ಯ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ವೃತ್ತಿಯಲ್ಲಿ ತೊಡಗಿಕೊಂಡಿರುವಂಥ ಪಾಲಕರು/ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು. ಯಾವುದೇ ಆದಾಯ ಮಿತಿ ಇರುವುದಿಲ್ಲ.
ಮಾನ್ಯತೆಯುಳ್ಳ ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲನೆ ನಡೆಸಲಿವೆ.
ಕಡುಬಡ ಕುಟುಂಬಗಳಿಗೂ ದೊರೆಯಲಿದೆ ಸೌಲಭ್ಯ. ವಾರ್ಷಿಕವಾಗಿ ರು.3,500 ರಿಂದ 8000 ವರೆಗೆ ವಾರ್ಷಿಕ ಸ್ಕಾಲರ್‌ಶಿಪ್ ಭತ್ಯೆ ನೀಡಲಾಗುತ್ತದೆ.
ದಿವ್ಯಾಂಗ (ವಿಶೇಷಚೇತನ) ವಿದ್ಯಾರ್ಥಿಗಳಿಗೆ ಶೇ.10 ಹೆಚ್ಚುವರಿ ಭತ್ಯೆ ಕೊಡಲಾಗುತ್ತದೆ.
ಈ ವಿದ್ಯಾರ್ಥಿಗಳು ತಾವು ವಾಸವಾಗಿರುವ ರಾಜ್ಯಗಳ ವಿದ್ಯಾರ್ಥಿವೇತನ ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ವಿಳಾಸ https://ssp.postmatric.karnataka.gov.in/ssppre/ ಗೆ ಭೇಟಿ ನೀಡಬೇಕು. ಈ ವಿದ್ಯಾರ್ಥಿಗಳು ಸೂಕ್ತ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ (ಯುಐಡಿ), ಆಧಾರ್ ಜೋಡಣೆಗೊಂಡಿರುವ ಬ್ಯಾಂಕ್ ಖಾತೆ, ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಯೋಜನೆಯ ಮಾರ್ಗಸೂಚಿ ಮತ್ತು ಅರ್ಹತಾ ಮಾನದಂಡದ ವಿಸೃತ ವಿವರಗಳಿಗಾಗಿ http://socialjustice.gov.in ಗೆ ಭೇಟಿ ನೀಡಿರಿ.
ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಶಾಲೆಗೆ ದಾಖಲೆ ಪಡೆದ ಮಾಹಿತಿ ಜನ್ಮ ದಿನಾಂಕ ಪ್ರಮಾಣ ಪತ್ರ ಪಾಸ್‌ಪೋರ್ಟ್ ಅಳತೆ ಭಾವಚಿತ್ರ ರೇಷನ್‌ಕಾರ್ಡ್ ಸ್ಕ್ಯಾನ್ ಕಾಪಿ. ಇತರೆ ಪ್ರತಿಗಳನ್ನು ಹೊಂದಿದವರು ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.