ನವದೆಹಲಿ: ಆರ್ಥಿಕ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿರುವ ಸಂಸ್ಥೆಗಳು-ಸಮೃದ್ಧಿ ಅಧ್ಯಯನಕ್ಕಾಗಿ ಮೂವರಿಗೆ ಪ್ರಶಸ್ತಿ ದೊರೆಯಲಿದೆ. ಆಲ್ಫ್ರೆಡ್ ನೊಬೆಲ್ ನೆನಪಿನಲ್ಲಿ ನೊಬೆಲ್ ಪ್ರಶಸ್ತಿಯನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನಿಂದ ಕೊಡ ಮಾಡಲಾಗುತ್ತಿದೆ.
ಮೂವರು ಯುಎಸ್ ಮೂಲದ ಅರ್ಥಶಾಸ್ತ್ರಜ್ಞರು “ದೇಶದ ಏಳಿಗೆಗಾಗಿ ಸಾಮಾಜಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಪ್ರದರ್ಶಿಸಿದ್ದಾರೆ” ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ನೊಬೆಲ್ ಸಮಿತಿ ಹೇಳಿದೆ. ಡರೋನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ. ರಾಬಿನ್ಸನ್ ಗೆ ಆರ್ಥಿಕ ವಿಭಾಗದ ನೊಬೆಲ್ ಪ್ರಶಸ್ತಿ ಒಲಿದಿದೆ.
ಕಳಪೆ ಕಾನೂನಿನ ನಿಯಮವನ್ನು ಹೊಂದಿರುವ ಸಮಾಜಗಳು ಮತ್ತು ಜನಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಂಸ್ಥೆಗಳು ಬೆಳವಣಿಗೆಯನ್ನು ಉಂಟುಮಾಡುವುದಿಲ್ಲ ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಶಸ್ತಿ ವಿಜೇತರ ಸಂಶೋಧನೆ ನಮಗೆ ಸಹಾಯ ಮಾಡುತ್ತದೆ.