ಒಟ್ಟಾವಾ: ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿನ ಹಿಂಸಾಚಾರದಲ್ಲಿ ಭಾರತ ಸರ್ಕಾರದೊಂದಿಗೆ ಕೈವಾಡದ ಆರೋಪ ಕುರಿತು ವಿಚಾರಣೆ ಮುಂದುವರೆದಿರುವುದರಿಂದ ಸಿಖ್ ಸಮುದಾಯ ಮಾತನಾಡುವಂತೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಮುಖ್ಯಸ್ಥ ಒತ್ತಾಯಿಸಿದ್ದಾರೆ.
ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಮತ್ತು ಕಾನ್ಸುಲರ್ ಅಧಿಕಾರಿಗಳು ಕೆನಡಿಯನ್ನರು ಮತ್ತು ಕೆನಡಾದಲ್ಲಿ ವಾಸಿಸುವ ಜನರ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆಯಂತಹ ಕೃತ್ಯಗಳಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಡುಹೆಮ್ ಆರೋಪಿಸಿದ್ದಾರೆ.
ಕೆನಡಾದಲ್ಲಿ ನರಹತ್ಯೆ ಸೇರಿದಂತೆ ವ್ಯಾಪಕ” ಹಿಂಸಾಚಾರದಲ್ಲಿ ಭಾರತ ಸರ್ಕಾರದ “ಏಜೆಂಟರು” ಪಾತ್ರ ವಹಿಸಿದ್ದಾರೆ ಎಂದು ಸೋಮವಾರ ಡುಹೆಮ್ ಸಾರ್ವಜನಿಕವಾಗಿ ಆರೋಪಿಸಿದ್ದರು.
ಒಂದು ವೇಳೆ ಜನರು ಮುಂದೆ ಬಂದರೆ ಅವರಿಗೆ ನೆರವು ನೀಡಬಹುದು. ಅವರು ಮುಂದೆ ಬರುವಂತೆ ಹೇಳುತ್ತಿದ್ದೇನೆ ಎಂದು ರೇಡಿಯೊ ಕೆನಡಾ ಸಂದರ್ಶದಲ್ಲಿ ಅವರು ಹೇಳಿದರು.
ಭಾರತ ಸರ್ಕಾರದೊಂದಿಗೆ ನಂಟಿನ ಆರೋಪ ಕುರಿತು ಸಿಖ್ ಸಮುದಾಯ ಮಾತನಾಡಬೇಕು ಎಂದು ಅವರು ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಇಲ್ಲಿನ ಅನಿವಾಸಿ ಭಾರತೀಯರು ಪೊಲೀಸರಲ್ಲಿ ನಂಬಿಕೆ ಮತ್ತು ವಿಶ್ವಾಸ ಹೊಂದಿರುವುದಾಗಿ ಭಾವಿಸುತ್ತೇನೆ. ಜನರು ಸುರಕ್ಷಿತೆ ಮತ್ತು ಉದ್ಯೋಗಕ್ಕೆ ಕೆನಡಾಕ್ಕೆ ಬರುತ್ತಾರೆ ಎಂದು ತಿಳಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ಭಾರತ ಸರ್ಕಾರದ ಏಜೆಂಟ್” ಗಳೊಂದಿಗೆ ಸಂಪರ್ಕ ಹೊಂದಿದೆ. ಇದು ದಕ್ಷಿಣ ಏಷ್ಯಾದ ಸಮುದಾಯವನ್ನು ನಿರ್ದಿಷ್ಟವಾಗಿ ದೇಶದಲ್ಲಿ “ಖಾಲಿಸ್ತಾನಿ ಪರ ಅಂಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು RCMP ಆರೋಪಿಸಿದ್ದಾರೆ.
ಸೋಮವಾರ ನಿಜ್ಜರ್ ಹತ್ಯೆಯಲ್ಲಿ ರಾಯಭಾರಿಯ ನಂಟು ಕುರಿತು ಕೆನಡಾದ ಆರೋಪಗಳನ್ನು ತಳ್ಳಿಹಾಕಿದ ನಂತರ ಭಾರತ ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತು ಮತ್ತು ಕೆನಡಾದಿಂದ ತನ್ನ ಹೈಕಮಿಷನರ್ ಅವರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿತು.