ದೇಶವ್ಯಾಪಿ ಅಭಿಯಾನ ಪ್ರಾರಂಭಿಸಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸುರಕ್ಷಿತ ಡಿಜಿಟಲ್ ಪಾವತಿಗಾಗಿ ಟೈಮ್ಸ್ ಆಫ್ ಇಂಡಿಯಾ (ಟಿಒಐ)ದೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ.
ಈ ಅಭಿಯಾನದಲ್ಲಿ ಜನರಿಗೆ ಡಿಜಿಟಲ್ ಪಾವತಿ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲಿದೆ.
ಖ್ಯಾತ ಕಾರ್ಟೂನ್ ಪಾತ್ರಗಳಲ್ಲಿ ಒಂದಾದ ಆರ್‌ಕೆ ಲಕ್ಷ್ಮಣ್ ಅವರ ಐಕಾನಿಕ್ ‘ಕಾಮನ್ ಮ್ಯಾನ್’ ಅನ್ನು ಬಳಸಿಕೊಳ್ಳಲಿದೆ.
ಮುಗ್ಧತೆ, ಹಾಸ್ಯದ ಮೂಲಕ ಶ್ರೀಸಾಮಾನ್ಯ ಭಾರತೀಯನಿಗೆ ಸುರಕ್ಷಿತ ಡಿಜಿಟಲ್ ಪಾವತಿಯ ಪಾಠ ಮಾಡಲಿದ್ದಾನೆ.
ಕಾಮನ್ ಮ್ಯಾನ್ ಪ್ರಾಯೋಗಿಕ ಸಲಹೆಗಳ ಮೂಲಕ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲಿದ್ದಾನೆ.
ಯುಪಿಐ ಮೂಲಕ ಸುರಕ್ಷಿತ ವಹಿವಾಟುಗಳನ್ನು ನಡೆಸಲು ಅಗತ್ಯವಿರುವ ಜ್ಞಾನವನ್ನು ದೇಶದ ಎಲ್ಲಾ ಭಾಗಗಳ ಜನರಿಗೆ ನೀಡಲಿದೆ.
ಕಾಮನ್ ಮ್ಯಾನ್ ಜೊತೆ ಭಾರತೀಯರು ಹೊಂದಿರುವ ಭಾವನಾತ್ಮಕ ಸಂಬಂಧ ಮತ್ತು ನಂಬಿಕೆಯನ್ನು ಬಳಸಿಕೊಂಡು ಡಿಜಿಟಲ್ ಪಾವತಿ ಸುರಕ್ಷತೆಯ ಸಂದೇಶವನ್ನು ಪ್ರಭಾವಶಾಲಿಯಾಗಿ ದಾಟಿಸಲು ಎನ್‌ಪಿಸಿಐ ಉದ್ದೇಶಿಸಿದೆ.
ಡಿಜಿಟಲ್ ವಹಿವಾಟುಗಳು ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವಾಗ ಅಪಾಯಗಳು ಮತ್ತು ಸುರಕ್ಷಿತ ಪಾವತಿಯ ಉತ್ತಮ ಅಭ್ಯಾಸಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವುದು ಬಹಳ ಮುಖ್ಯ.
ಈ ಅಭಿಯಾನವು ವಂಚನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರಿಗೆ ಸರಳವಾಗಿ ಮಾಹಿತಿ ನೀಡಲಿದೆ,” ಎಂದು ತಿಳಿಸಿದ್ದಾರೆ.
ಹಾಸ್ಯದೊಂದಿಗೆ ಎಚ್ಚರಿಕೆಯ ಸಂದೇಶವನ್ನು ಇದು ನೀಡಲಿದ್ದು, ಸುರಕ್ಷಿತ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯತ್ತ ಹೆಜ್ಜೆ ಹಾಕಲು ಭಾರತಕ್ಕೆ ಸಹಾಯ ಮಾಡಲಿದೆ.
2008ರಲ್ಲಿ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅನ್ನು ಪ್ರಾರಂಭಿಸಲಾಗಿದ್ದು, ದೇಶದಲ್ಲಿ ಚಿಲ್ಲರೆ ಪಾವತಿ ವ್ಯವಸ್ಥೆಗಳನ್ನು ನಿರ್ವಹಿಸುವ ಸಂಸ್ಥೆ ಇದಾಗಿದೆ.
ರುಪೇ ಕಾರ್ಡ್, ಐಎಂಪಿಎಸ್, ಯುಪಿಐ, ಭೀಮ್, ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್(ಎಇಪಿಎಸ್), ಎನ್‌ಇಟಿಸಿ, ಭಾರತ್ ಪೇನಂತಹ ಚಿಲ್ಲರೆ ಪಾವತಿ ಉತ್ಪನ್ನಗಳ ಮೂಲಕ ಭಾರತದಲ್ಲಿ ಪಾವತಿಗಳನ್ನು ಮಾಡುವ ವಿಧಾನವನ್ನೇ ಇದು ಬದಲಾಯಿಸಿದೆ. ಭಾರತವನ್ನು ಡಿಜಿಟಲ್ ಆರ್ಥಿಕತೆಯಾಗಿ ಪರಿವರ್ತಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂದು ತಿಳಿಸಲಾಗಿದೆ.