spot_img
spot_img

ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಿಸಿ : ಪ್ರತಿಭಟನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಮುಂಭಾಗ ಲೈನ್ ಮ್ಯಾನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಬೇಕೆಂದು ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ.
ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. 10 ನೇ ತರಗತಿಯ ಫಲಿತಾಂಶದ ಮೇಲೆ ನೇಮಕಾತಿಗನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕೂಡಾ ಉದ್ಯೋಗ ದೊರೆಯುತ್ತಿಲ್ಲ.
ಕೋವಿಡ್‌ ಸಂದರ್ಭ 95% ಅಂಕ ಪಡೆದವರು 5 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ದಯವಿಟ್ಟು ಈ ನೇಮಕಾತಿಯನ್ನು ಪರೀಕ್ಷೆ ಮೂಲಕವೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಡವರ ಹುದ್ದೆಯಾದ ಲೈನ್ ಮ್ಯಾನ್ ಹುದ್ದೆಯು ಸ್ಪರ್ಧಾತ್ಮಕ ಪರೀಕ್ಷೆ ಬರೆಸಿಯೇ ನೇಮಕಾತಿ ಮಾಡಬೇಕು ಎಂದು ಮನವಿ ಸಲ್ಲಿಸಿದರು ಪ್ರತಿಕ್ರಿಯಿಸುತ್ತಿಲ್ಲ.
ಅಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸದೆ ಈ ರೀತಿ ನಮ್ಮನ್ನು ಕಚೇರಿಯಿಂದ ಹೊರಗಡೆ ನಿಲ್ಲಿಸಿ, ಈ ರೀತಿ ವರ್ತಿಸಿದರೆ ಇಡೀ ಕರ್ನಾಟಕಕ್ಕೆ ಧಕ್ಕೆ ಉಂಟಾಗುತ್ತಿದೆ.
ನೀವು ಮಾಡುವ ಕೆಲಸಗಳನ್ನು ವಿದ್ಯಾರ್ಥಿಗಳ ಪರವಾಗಿಯೇ ಮಾಡಬೇಕು. ಏಕೆಂದರೆ ಇದು ನಿಮ್ಮ ಮನೆಯ ಕೆಲಸ ಅಲ್ಲ, ಸರ್ಕಾರದ ಕೆಲಸ ಎಂದು ಕಿಡಿಕಾರಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನೋಡಿ ಮಾಡಿದರೆ ಸರಿಯಲ್ಲ. ಏಕೆಂದರೆ ಕೋವಿಡ್‌ ಸಂದರ್ಭ ಮೂರು ಮೂರು ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಅವರು 99% ಪಡೆದಿದ್ದರೂ ಅವರಿಗೆ ಏನೂ ಗೊತ್ತಿಲ್ಲ. ಅದೇ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಫೇಲ್‌ ಆಗಿದ್ದಾರೆ. ಅವರಿಗೆ 50% ತೆಗೆದುಕೊಳ್ಳಲು ಆಗುತ್ತಿಲ್ಲ. ಅವರನ್ನು ತೆಗೆದುಕೊಂಡು ನೇರ ನೇಮಕಾತಿ ಮಾಡಿದರೆ ಸರಿಯಲ್ಲ. ಒಂದೇ ತಿಂಗಳಲ್ಲಿ ಕಾಂಪಿಟೇಟಿವ್‌ ಎಕ್ಸಾಮ್‌ ಮೂಲಕ ಒಂದೇ ತಿಂಗಳಿನಲ್ಲಿ ನೇಮಕಾತಿ ಮಾಡಿಕೊಳ್ಳಿ.
ಈ ಮನವಿಗೆ ಸ್ಪಂದಿಸದೇ ಹೋದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ನ. ೨೬ ರ ಸಂವಿಧಾನ ದಿನಾಚರಣೆ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆ ಮತ್ತು ನವೆಂಬರ್- 260 ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕ‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ರಾಜ್ಯ...

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರಗಳು ಒಂದಾಗಿ 1985ರ ನವೆಂಬರ್ 1ರಿಂದ ರಾಜ್ಯದಲ್ಲಿರುವ ಕನ್ನಡ ಬಾರದ...

ನ.25 ರಿಂದ ಚಳಿಗಾಲ ಸಂಸತ್​ ಅಧಿವೇಶನ : ವಕ್ಫ್​ ತಿದ್ದುಪಡಿ

ನವದೆಹಲಿ: ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಮುಸಲ್ಮಾನ್​ ವಕ್ಫ್(ತಿದ್ದುಪಡಿ) ವಿಧೇಯಕ-2024 ಇದೇ ತಿಂಗಳ 25ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಗೆ ಬರಲಿದೆ ಎಂದು...

ಗೂಗಲ್​ ಮ್ಯಾಪ್ ಎಡವಟ್ಟು : ಮಿನಿ ಬಸ್​ ಅಪಘಾತ

ಕಣ್ಣೂರು: ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್​ವೊಂದು ಕಣ್ಣೂರಿನ ಸಮೀಪದ ಕೆಲಕಮ್​ ಬಳಿ ಅಪಘಾತಕ್ಕೆ ಒಳಗಾಗಿದ್ದಾರೆ. ಮಿನಿ ಬಸ್​ ಚಾಲಕ ಗೂಗಲ್ ಮ್ಯಾಪ್​ ಸಹಾಯದಿಂದ...