ಬೆಳಗಾವಿ: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಚಿತ್ರಗೀತೆಗಳ ಸಂಜೆಯ ನೋಟ
ಕಿಕ್ಕಿರಿದು ಸೇರಿದ್ದ ಯುವ ಸಮೂಹದಿಂದ ಹರ್ಷದ ಹೊನಲು, ಸಿಳ್ಳೆ, ಚಪ್ಪಾಳೆ, ಕೇಕೆಗಳ ಭೋರ್ಗರೆತ. ನಿರಂತರವಾಗಿ ಕೇಳಿಬರುತ್ತಿರುವ ಹಾಡುಗಳು
ಬಾಲುವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ ಅವರು ಆಗಮಿಸಿ ‘ನೀನೇ ನೀನೇ ಮನಸೆಲ್ಲಾ ನೀನೆ…’ ಎನ್ನುತ್ತ ಯುವ ಸಮೂಹ ಹರ್ಷದಿಂದ ಕೂಡುವಂತೆ ಮಾಡಿದರು. ‘ಆಕಾಶ್’ ಚಿತ್ರಗೀತೆಯ ಮೂಲಕ ನಟ ಪುನೀತ್ ಅವರನ್ನು ನೆನೆಪಿಸುವಂತ ಸಂದರ್ಭ ಒದಗಿ ಬಂದಿದೆ. ಯುವಜನ ಕುಣಿದು ಕುಪ್ಪಳಿಸಿದರು.
ಜಿಲ್ಲೆಯ ಜನಪದ ಗಾಯಕರು ಆರಂಭಕ್ಕೆ ಜನಪದ ಗೀತೆ, ಭಾವಗೀತೆ, ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ನಂತರ ಬಂದ ಭರತನಾಟ್ಯ ಕಲಾವಿದೆಯರಿಂದ ನೃತ್ಯ.
‘ಆಕ್ಸಿಜನ್’ ನೃತ್ಯ ತಂಡ ಪ್ರದರ್ಶಿಸಿ ಜೈ ಹೋ… ಗೀತೆ ಪ್ರೇಕ್ಷಕರನ್ನು ದೇಶಭಕ್ತಿಗೆ ಎಳೆಯಿತು. ಭರತನಾಟ್ಯ, ಕೂಚುಪುಡಿ, ಯಕ್ಷಗಾನ, ಭಾಂಗಡಿ, ಗುಜರಾತಿ ಹಾಗೂ ಬಂಗಾಳಿ ಶೈಲಿಯ ನೃತ್ಯ ಹೆಚ್ಚು ಸಂತಸವನ್ನು ತಂದಿತು.
‘ಕಾಂತಾರ’ ಚಲನಚಿತ್ರದ ‘ವರಾಹ ರೂಪಂ…’ ಗೀತೆಯ ಜತೆಗೆ ಗೀತ- ಸಂಗೀತ- ನೃತ್ಯದ ಜತೆಗೇ ಬೆಂಕಿಯ ಸಾಹನ ಪ್ರದರ್ಶನ ವಿಶಿಷ್ಟವಾಗಿ ಮೂಡಿಬಂತು.
ತಾಜ್‌ಮಹಲ್’ ಚಿತ್ರದ ‘ಖುಷಿಯಾಗಿದೆ ಏಕೋ ನಿನ್ನಿಂದಲೇ…’ ಹಾಡು ‘ಭಿಗೇ ಹೋಂಟ್ ತೇರೆ…’ ಗೀತೆಗಾಗಿ ಯುವಕರು ಪದೇಪದೇ ಒತ್ತಾಸೆ ವ್ಯಕ್ತಪಡಿಸಿದರು. ‘ಮುಂಗಾರು ಮಳೆ’ ಚಿತ್ರದ ‘ಒಂದೇ ಒಂದು ಸಾರಿ ಕಣ್ಮುಂದೆ ಬಾರೆ…’ ಚಿತ್ರಗೀತೆ ಬಂದಾಗಲಂತೂ ಜನ ಮೈಮರೆತು ಕುಣಿದರು.
ರಾತ್ರಿಗೆ ಸಂಗೀತ ರಸದ ಲೇಪನ ಮಾಡಿದ್ದು ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ತಂಡ. ಒಂದಾದ ನಂತರ ಒಂದು ಪ್ರಸಿದ್ಧ ಗೀತೆಗಳನ್ನು ಹಾಡಿದ ತಂಡ ಉತ್ಸವಕ್ಕೆ ಹೊಸ ಚೈತನ್ಯ ನೀಡಿತು.
ಗಣ್ಯರು ವಿಜಯ ಜ್ಯೋತಿಗೆ ಪೂಜೆ ಸಲ್ಲಿಸಿ, ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಇಲ್ಲಿಂದ ಚೆನ್ನಮ್ಮನ ಜನ್ಮಭೂಮಿ ಕಾಕತಿಗೆ ಜ್ಯೋತಿಯನ್ನು ಬೀಳ್ಕೊಡಲಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now