ಕೊಪ್ಪಳ : ಕೂಲಿ ಕೆಲಸ ಮಾಡುತ್ತಿದ್ದವರ ಮಗ ಮಂಜುನಾಥ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಹಾಲವರ್ತಿ ಗ್ರಾಮದ ಮಂಜುನಾಥ ತಂದೆ ರಾಮಪ್ಪ ಭೀಮನೂರ ಎಂಬ ಕಡು ಬಡತನದಲ್ಲಿ ಯುವಕ ಪಿಎಸ್ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾನೆ.
ಬಡತನದ ಯುವಕ ಪರೀಕ್ಷೆಯಲ್ಲಿ 545 ಪಿಎಸ್ಐ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯಲ್ಲಿ ಮಂಜುನಾಥ ಹೆಸರು ಇರುವುದಕ್ಕೆ ಗ್ರಾಮದಲ್ಲಿ ಸಂಭ್ರಮ.
ತಂದೆ -ತಾಯಿ ದಿನಗೂಲಿ ಮಾಡಿ ಓದಿಸಿ ಶ್ರಮಕ್ಕೆ ತಕ್ಕಂತೆ ಮಗ ಇಂದು ಪಿಎಸ್ಐ ಪರೀಕ್ಷೆಯಲ್ಲಿ ಪಾಸ್ ಆಗಿ ಅವರು ಕಂಡಿದ್ದ ಕನಸನ್ನು ನನಸು ಮಾಡಿದ್ದಾನೆ. ಯುವಕರಿಗೆ ಮಾದರಿ ಆಗಿದ್ದಾನೆ.
ಮಗನನ್ನು ಯಾವುದಾದರೂ ಒಂದು ಹಂತಕ್ಕೆ ತರಲೇಬೇಕೆಂದು ಕಷ್ಟ ಗೊತ್ತಿಲ್ಲದಂತೆ ಓಡಿಸಿರುವ ತಂದೆ ತಾಯಂದಿರು.
ಒಬ್ಬ ದಕ್ಷ ಅಧಿಕಾರಿಯಾಗಿ ಹೊರಹೊಮ್ಮಲಿ ಎಂಬುದು ನಮ್ಮ ಗ್ರಾಮದ ಪ್ರತಿಯೊಬ್ಬರ ಆಶಯ.
ಅದೇ ರೀತಿಯಲ್ಲಿ ಹನುಮಸಾಗರದ ಸಮೀಪದ ಮಿಯ್ಯಾಪೂರ ಗ್ರಾಮದ ವೀರುಪಾಕ್ಷಗೌಡ್ರ ಮ್ಯಾಗೇರಿ ಅವರ ತೃತೀಯ ಪುತ್ರಿ ಸುನೀತಾ ಮ್ಯಾಗೇರಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ.
ಒಂದರಿಂದ 5ನೇ ತರಗತಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ. 6ರಿಂದ 10ನೇ ತರಗತಿ ಬೆಣಕಲ್ಲ ಮೊರಾರ್ಜಿ ವಸತಿ ಶಾಲೆಯಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಬಿಇ ಓದಿದ್ದಾರೆ. ಸದ್ಯ ಗುಲಬುರ್ಗಾ ಜಿಲ್ಲೆಯ ಆಳಂದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಾ, ಸಿವಿಲ್ ಪಿಎಸ್ಐ ಪರೀಕ್ಷೆ ಬರೆದಿದ್ದರು. ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.