ಸ್ಟಾರ್ಟಪ್ ಆರಂಭಿಸಿ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಸ್ಟಾರ್ಟಪ್ ಪರಿಣಿತರು ತಮ್ಮ ಬುದ್ದಿವಂತಿಕೆ, ಕಠಿಣ ಪರಿಶ್ರಮದಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಮೋಘ ಸಾಧನೆ ತೋರಿದ್ದಾರೆ. ಅಂಥವರಲ್ಲಿ ಭಾರತದ ದಕ್ಷಿಣದ ನೆಲ್ಲೂರಿನ ಸಂಜಿತ್ ಕೊಂಡ BBA ಕೋರ್ಸ್ ಡ್ರಾಪ್ಔಟ್ ಮಾಡಿ ಬಿಸಿನೆಸ್ ಮ್ಯಾನ್ ಆಗಿದ್ದಾರೆ.
ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದ ಸಂಜಿತ್ ಕೊಂಡ ಅಲ್ಲಿ BBA ಕೋರ್ಸ್‌ಗೆ ಸೇರಿದ್ದರು. ಆದರೆ ಕಾರಣಾಂತರಗಳಿಂದ BBA ಕೋರ್ಸ್ ಅನ್ನು ಅರ್ಧದಲ್ಲೇ ತ್ಯಜಿಸಿ ಇಂದು ಡ್ರಾಪೌಟ್ ಚಾಯ್‌ವಾಲಾ’ ಎಂಬ ಯಶಸ್ವಿ ಸಂಸ್ಥೆಯನ್ನು ರೂಪಿಸಿ, ಮಿಲಿಯನ್ ಡಾಲರ್ ವ್ಯವಹಾರ ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ‘ಡ್ರಾಪೌಟ್ ಚಾಯ್‌ವಾಲಾ’ ಎಂಬ ಉದ್ಯಮ ಸ್ಥಾಪಿಸಿ ಇಂದು ನಗರದೆಲ್ಲೆಡೆ ಮನೆಮಾತಾಗಿದ್ದಾರೆ.
ಚಹಾವನ್ನು ಕುಡಿಯಲು ನಗರದೆಲ್ಲೆಡೆಯಿಂದ ಆಗಮಿಸುತ್ತಿದ್ದಾರೆ ಎಂಬುದು ಕೂಡ ಗಮನಾರ್ಹ ಸಂಗತಿ.
ಉನ್ನತ ಶಿಕ್ಷಣವನ್ನು ಅರಸಿ ದೂರದ ಮೆಲ್ಬೊರ್ನ್‌ಗೆ ಸಂಜಿತ್ ತೆರಳಿದ್ದರೂ ಮೆಲ್ಬೋರ್ನ್‌ನ ಲಾ ಟ್ರೋಬ್ ವಿಶ್ವವಿದ್ಯಾಲಯದಲ್ಲಿ ತಾನು ವಿದ್ಯಾರ್ಜನೆ ಮಾಡುತ್ತಿದ್ದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಅವರ ಜೀವನದಲ್ಲಿ ಮಹತ್ತರ ತಿರುವನ್ನು ನೀಡಿತು. ಈ ಹಿನ್ನೆಲೆಯಲ್ಲಿ ಅಸ್ರಾರ್‌ನಲ್ಲಿ ಒಬ್ಬ ಸಮರ್ಥ ಹೂಡಿಕೆದಾರರನ್ನು ಪಡೆದುಕೊಂಡ ಸಂಜಿತ್ ಅವರು ಮೆಲ್ಬೊರ್ನ್‌ನಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿದರು.
ಕಾಫಿ ಸಂಸ್ಕೃತಿಗೆ ಹೆಸರುವಾಸಿಯಾದ ನಗರವಾದ ಜಗತ್ತಿನ ಸುಂದರ ನಗರಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದಾರೆ.
ಜನಪ್ರಿಯವಾದ ‘ಬಾಂಬೆ ಕಟಿಂಗ್’ ಮತ್ತು ‘ಮಸಾಲಾ ಚಾಯ್’ ಸೇರಿದಂತೆ ವಿವಿಧ ರೀತಿಯ ಚಹಾವನ್ನು ನೀಡುವುದರ ಜೊತೆಗೆ ಸಮೋಸಾಗಳ ರುಚಿಯನ್ನು ಕೂಡ ಮೆಲ್ಬೊರ್ನ್ ಜನತೆಗೆ ಉಣಬಡಿಸಲಾಯಿತು. ಮುಖ್ಯವಾಗಿ ಭಾರತೀಯ ಸಮುದಾಯವು ಹೆಚ್ಚಾಗಿ ʻಬಾಂಬೆ ಕಟಿಂಗ್’ ಮೇಲೆ ಹೆಚ್ಚಿನ ವ್ಯಾಮೋಹ ತೋರಿಸಿದರೆ ಆಸ್ಟ್ರೇಲಿಯನ್ನರು ಮಸಾಲೆ ಚಹಾದತ್ತ ಹೆಚ್ಚು ಆಕರ್ಷಣೆಗೊಳಗಾಗಿದ್ದಾರೆ. ಈ ಸಾಂಸ್ಕೃತಿಕ ಸಮ್ಮಿಳನವು ಗ್ರಾಹಕರ ನೆಲೆಯನ್ನು ವಿಸ್ತರಿಸಿದೆ. ಅಲ್ಲದೆ ಬ್ರ್ಯಾಂಡ್ ಸುತ್ತಲೂ ವಿಶೇಷ ವಾತಾವರಣ ಸೃಷ್ಟಿಸಿದೆ. ಇನ್ನು ʻಡ್ರಾಪೌಟ್ ಚಾಯ್‌ವಾಲಾ’ ವಿಸ್ತರಿಸಿದಂತೆ ಸಂಸ್ಥೆಯು ಭಾರತದಿಂದ ನೇರವಾಗಿ ಚಹಾವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಈ ಮೂಲಕ ನೈಜತೆಯ ರುಚಿಯನ್ನು ಮತ್ತಷ್ಟು ಬಲಪಡಿಸಿತು.
ಒಂದು ಕಾಲದಲ್ಲಿ ಕಾಲೇಜಿನಿಂದ ಡ್ರಾಪ್ ಔಟ್ ಆಗಿ ಸಂಕಷ್ಟದಲ್ಲಿದ್ದ ಸಂಜಿತ್ ಇಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಅನೇಕರಿಗೆ ಅರೆಕಾಲಿಕ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಶಿಕ್ಷಣದ ಜೊತೆ ಅರೆಕಾಲಿಕ ಉದ್ಯೋಗ ನಿರ್ವಹಿಸುವ ಅನೇಕ ಭಾರತೀಯರ ಪಾಲಿಗೆ ಆರ್ಥಿಕವಾಗಿ ನೆರವಾಗುತ್ತಿದ್ದಾರೆ.
ತೆರಿಗೆಗಳು ಮತ್ತು ಓವರ್‌ಹೆಡ್ ವೆಚ್ಚಗಳನ್ನು ಲೆಕ್ಕಹಾಕಿದ ನಂತರವೂ ಕಂಪನಿಯ ಆದಾಯವು ಮುಂದಿನ ತಿಂಗಳು ಸರಿಸುಮಾರು ಸುಮಾರು ರೂ 5.2 ಕೋಟಿ ತಲುಪುವ ವಿಶ್ವಾಸವನ್ನು ಸಂಜತ್ ಅವರು ನಿರೀಕ್ಷಿಸಿದ್ದಾರೆ. ಹಾಗಾಗಿ ಉದ್ಯಮವು ಭಾರೀ ದೊಡ್ಡ ಯಶಸ್ವಿನತ್ತ ಸಾಗುತ್ತಿದೆ. ಈ ಕ್ಷಿಪ್ರ ಬೆಳವಣಿಗೆಯು ಸಂಜಿತ್ ಮತ್ತು ಅವರ ತಂಡವು ವ್ಯಾಪಾರದಲ್ಲಿ ಹೂಡಿಕೆ ಮಾಡಿರುವ ಉದ್ಯಮಶೀಲತಾ ಮನೋಭಾವ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ
ಭಾರತದ ನೈಜ ಕಾಫಿ, ಚಹಾ ಕುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಗ್ರಾಹಕರು ಆಗಮಿಸುತ್ತಾರೆ. ಇದರ ಜೊತೆ ಭಾರತದ ಕಾಫಿ, ಚಹಾದ ಟೇಸ್ಟ್ ನೋಡಲು ಕೂಡ ವಿದೇಶಿಗರ ಆಗಮನವಾಗುತ್ತಿದ್ದು, ಉದ್ಯಮ ಹೆಚ್ಚಿನ ಲಾಭದೆಡೆಗೆ ಸಾಗಿತು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now