ಹೈದರಾಬಾದ್: ದೀಪಾವಳಿಗೆ ಮುನ್ನ ಮಾರಾಟಕ್ಕಾಗಿ ಅಂಗಡಿಯಲ್ಲಿ ಶೇಖರಿಸಿಡಲಾಗಿರುವ ಪಟಾಕಿಗಳಿಗೆ ಬೆಂಕಿ ತಗುಲಿ ಅಂಗಡಿ ಭಸ್ಮವಾಗಿದೆ.
ತೆಲಂಗಾಣ ರಾಜದಾನಿ ಹೈದರಾಬಾದ್ ನಲ್ಲಿ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಭಾನುವಾರ ರಾತ್ರಿ ಹೈದರಾಬಾದ್‌ನ ರಾಮ್‌ಕೋಟೆಯಲ್ಲಿರುವ ಪಟಾಕಿ ಅಂಗಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶದ ಹಲವಾರು ವ್ಯಾಪಾರಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಅಂಗಡಿಯೊಳಗೆ ಪಟಾಕಿಗಳು ಬೆಂಕಿ ತಗುಲಿ ಸಿಡಿದಿದ್ದು, ಭಯಭೀತರಾದ ಗ್ರಾಹಕರು ಗಾಬರಿಯಿಂದ ಹೊರಗೆ ಓಡಿಹೋಗಿದ್ದಾರೆ.
ಅನೇಕರು ಅಂಗಡಿಯಿಂದ ಹೊರಗೆ ಓಡಿಬಂದಿದ್ದು, ಆದರೆ ಕೆಲವರು ಬೆಂಕಿ ಜ್ವಾಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅಂಗಡಿಯಿಂದ ದಟ್ಟವಾದ ಹೊಗೆ ಬರುತ್ತಿರುವ ಆತಂಕಕಾರಿ ದೃಶ್ಯದಿಂದ ಅಕ್ಕ ಪಕ್ಕ ಜನರು ಬೆಚ್ಚಿ ಬಿದ್ದಿದಾರೆ.
ಪಟಾಕಿಗಳು ಸಿಡಿಯುತ್ತಲೇ ಇದ್ದುದರಿಂದ ಪರಿಸ್ಥಿತಿ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿಗೂ ಸವಾಲಾಗಿತ್ತು. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲವರಿಗೆ ಸುಟ್ಟಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘“ಅಂಗಡಿಗೆ ಯಾವುದೇ ಪ್ರಮಾಣಪತ್ರವಿಲ್ಲ. ಅದೊಂದು ಅಕ್ರಮ ಅಂಗಡಿಯಾಗಿತ್ತು. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸುಲ್ತಾನ್ ಬಜಾರ್‌ನ ಸಹಾಯಕ ಪೊಲೀಸ್ ಆಯುಕ್ತ ಕೆ ಶಂಕರ್ ಹೇಳಿದ್ದಾರೆ.
ಈ ಅಂಗಡಿಯಲ್ಲಿ ಪಟಾಕಿ ಮಾರಾಟಕ್ಕೆ ಯಾವುದೇ ರೀತಿಯ ಪರವಾನಗಿ ಇರಲಿಲ್ಲ ಎಂದು ಹೇಳಲಾಗಿದೆ. ಪರವಾನಗಿ ಇಲ್ಲದೆ ಅಕ್ರಮವಾಗಿ ಅಂಗಡಿ ನಡೆಸಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now