2025ರಲ್ಲಿ ಜಗತ್ತಿನಾದ್ಯಂತ ಆಚರಿಸುವ ಹಿಂದೂ ಧರ್ಮದ ಅತ್ಯಂತ ಮಹತ್ವದ ಮಹಾ ಮೇಳವಾದ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗರಾಜ್ಗೆ ಭೇಟಿ ನೀಡುತ್ತಾರೆ.
ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. 2025ರ ಜನವರಿ 14 ರಿಂದ ಫೆಬ್ರವರಿ 26 ರವರಿಗೆ ಮಹಾ ಕುಂಭಮೇಳ ನಡೆಯುತ್ತದೆ.
ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳಿಂದ ಮುಕ್ತಿಪಡೆಯುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ.
ಲಕ್ಷಾಂತರ ಮಂದಿ ಭಕ್ತರು ಸೇರುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಅವ್ಯವಸ್ಥೆ, ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಭಾರಿ ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
2025ರ ಜನವರಿ 14 ಮಕರ ಸಂಕ್ರಾಂತಿ (ಮೊದಲ ಶಾಹಿ ಸ್ನಾನ), 2025ರ ಜನವರಿ 29 ಮೌನಿ ಅಮಾವಾಸ್ಯೆ (ಎರಡನೇ ಶಾಹಿ ಸ್ನಾನ) 2025ರ ಫೆಬ್ರವರಿ 3 ಬಸಂತ್ ಪಂಚಮಿ (ಮೂರನೇ ಶಾಹಿ ಸ್ನಾನ), 2025ರ ಜನವರಿ 13 ಪೌಶ್ ಪೂರ್ಣಿಮಾ, 2025ರ ಫೆಬ್ರವರಿ 4 ಅಚಲ ಸಪ್ತಮಿ
2025ರ ಫೆಬ್ರವರಿ 12 ಮಾಘಿ ಪೂರ್ಣಿಮಾ, 2025ರ ಫೆಬ್ರವರಿ 26 ಮಹಾ ಶಿವರಾತ್ರಿ (ಅಂತಿಮ ಸ್ನಾನ)
ಮಹಾ ಕುಂಭ ಮೇಳದಲ್ಲಿ ಈ ದಿನಾಂಕಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಗ್ರಾಜ್ನಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.
12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್ನಲ್ಲಿ ನಡೆಯಲಿದೆ. 2025ರ ಮಹಾ ಕುಂಭಮೇಳ ಪ್ರಯಾಗ್ರಾಜ್ನಲ್ಲಿ ನಡೆಯಲಿದೆ. ಬರೋಬ್ಬರಿ 30 ರಿಂದ 45 ದಿನ ನಡೆಯುತ್ತದೆ.
ಕುಂಭಮೇಳವು ಹಿಂದೂ ಪುರಾಣಗಳಲ್ಲಿ ಪ್ರಾಚೀನ ಬೇರುಗಳನ್ನು ಹೊಂದಿದೆ. ಸಮುದ್ರ ಮಂಥನ ಕಥೆಯಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.
ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಧನ್ವಂತ್ರಿಯ ಕೈಯಲ್ಲಿ ಹೊರಹೊಮ್ಮಿದ ಅಮರತ್ವದ ಮಡಕೆಯನ್ನು ಉಲ್ಲೇಖಿಸಲಾಗಿದೆ. ಕುಂಭ ಪದದ ಅರ್ಥ ಮಡಕೆ ಎಂಬುದಾಗಿದೆ. ಮತ್ತೊಂದು ದಂತಕಥೆಯ ಪ್ರಕಾರ, ದೇವರು ಮತ್ತು ರಾಕ್ಷಸರ ನಡುವಿನ ಹೋರಾಟದ ಸಮಯದಲ್ಲಿ ನಾಲ್ಕು ಸ್ಥಳಗಳಲ್ಲಿ ಅಮೃತ ಮಡಕೆ ಬಿದ್ದಿತ್ತು.
ಈ ಸ್ಥಳಗಳು ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್ ಆಗಿದ್ದು, ಅಂದಿನಿಂದ ಇವು ತೀರ್ಥಯಾತ್ರೆಗೆ ಪವಿತ್ರ ಸ್ಥಳಗಳಾಗಿವೆ. ಅಧ್ಯಾತ್ಮಿಕ ಮೋಕ್ಷವನ್ನು ಆಚರಿಸಲು ಕುಂಭಮೇಳ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now