spot_img
spot_img

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾಹನ ಸೌಲಭ್ಯ ಸೇರಿದಂತೆ ವಾರ್ಷಿಕ 29,00,000 ರೂ. ಸಂಬಳ ಪಡೆಯಬಹುದು.
ಆರಂಭಿಕ ನೇಮಕಾತಿಯು ಎರಡು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದ್ದೆ. ನ್ಯಾಷನಲ್ ಹೈವೇಸ್ ಇನ್ವಿಟ್ ಪ್ರಾಜೆಕ್ಟ್ ಮ್ಯಾನೇಜರ್ಸ್ ಪ್ರೈವೇಟ್ ಲಿಮಿಟೆಡ್ (NHIPMPL) ನ ಅವಶ್ಯಕತೆ ಮತ್ತು ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ವಿಸ್ತರಣೆ ಸಾಧ್ಯತೆಯಿದೆ.
ಅರ್ಜಿಯನ್ನು ಭರ್ತಿ ಮಾಡುವಾಗ ಎಚ್ಚರಿಕೆಯಿಂದ ಭರ್ತಿ ಮಾಡಲು ಸೂಚಿಸಲಾಗಿದೆ. ಉದ್ಯೋಗ ವಿವರ, ಅನುಭವ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮತ್ತೆ ನೀಡುವ ಯಾವುದೇ ಸ್ಪಷ್ಟೀಕರಣಗಳನ್ನು ಪರಿಗಣಿಸಲಾಗುವುದಿಲ್ಲ.
ಶೈಕ್ಷಣಿಕ ಅರ್ಹತೆಯನ್ನು ಭಾರತೀಯ ವಿಶ್ವವಿದ್ಯಾನಿಲಯ, ಯುಜಿಸಿ ಅಥವಾ ಎಐಸಿಟಿಇ ಅನ್ವಯವಾಗುವಂತೆ ಗುರುತಿಸಿರುವ ಸಂಸ್ಥೆಗಳಿಂದ ಪಡೆದಿರಬೇಕು. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪೂರ್ಣ ಸಮಯದ, ನಿಯಮಿತ ಬಿ.ಇ./ ಬಿ.ಟೆಕ್ ಪದವಿಯನ್ನು ಪಡೆದಿರಬೇಕು.
ಅಭ್ಯರ್ಥಿಗಳು M/oRTH/IRC ಮಾನದಂಡಗಳಿಗೆ ಅನುಗುಣವಾಗಿ ಸರ್ಕಾರಿ, ಪಿಎಸ್ ಯುಗಳು, ಸ್ವಾಯತ್ತ ಸಂಸ್ಥೆಗಳು ಅಥವಾ ರಸ್ತೆ ವಲಯದೊಳಗಿನ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 20 ವರ್ಷಗಳ ಅನುಭವವನ್ನು ಹೊಂದಿರಬೇಕು.
ಅಭ್ಯರ್ಥಿಗಳ ವಯಸ್ಸು 55 ವರ್ಷಕ್ಕಿಂತ ಹೆಚ್ಚಿರಬಾರದು. ಆದರೆ ನಿವೃತ್ತ ಅಥವಾ ನಿವೃತ್ತಿ ಹೊಂದಿದ ಸರ್ಕಾರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 63 ವರ್ಷ ಹೊಂದಿದವರಾಗಿರಬೇಕು.
ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ, ಮಿತಿಗೊಳಿಸುವ, ವಿಸ್ತರಿಸುವ, ಮಾರ್ಪಡಿಸುವ, ಮತ್ತೆ ತೆರೆಯುವ ಅಥವಾ ಬದಲಾಯಿಸುವ ಹಕ್ಕನ್ನು ನ್ಯಾಷನಲ್ ಹೈವೇಸ್ ಇನ್ವಿಟ್ ಪ್ರಾಜೆಕ್ಟ್ ಮ್ಯಾನೇಜರ್ಸ್ ಪ್ರೈವೇಟ್ ಲಿಮಿಟೆಡ್ ಹೊಂದಿದೆ. ಅಗತ್ಯವಿದ್ದಲ್ಲಿ ಪೂರ್ವ ಸೂಚನೆ ಅಥವಾ ವಿವರಣೆಯಿಲ್ಲದೆ ಸ್ಥಾನ ಬದಲಾವಣೆ ಮಾಡುವ ಅಧಿಕಾರವೂ ಸಂಸ್ಥೆಗೆ ಇದೆ.
ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ nhai.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಆದಷ್ಟು ಬೇಗ ಭಾರತಕ್ಕೆ ಕಾಲಿಡಲಿದೆ ರೆಡ್​ಮಿ ನೋಟ್​ 14 ಸೀರಿಸ್

Redmi Note 14 5G Series: ಆದಷ್ಟು ಬೇಗ ರೆಡ್​ಮಿ ನೋಟ್​ 14 ಸೀರಿಸ್​ ಭಾರತಕ್ಕೆ ಕಾಲಿಡಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ...

ವಾಯು ಮಾಲಿನ್ಯ ರಾಷ್ಟ್ರೀಯ ತುರ್ತು ಪರಿಸ್ಥಿತಿ, ಸಂಸತ್ತಿನಲ್ಲಿ ಚರ್ಚೆಯಾಗಲಿ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ಪ್ರತಿಪಾದಿಸಿದ...

Bigg Boss ಮನೆಯಲ್ಲಿ ಒಂಬತ್ತನೇ ಅದ್ಭುತ: ಮತ್ತೆ ಒಂದಾದ ಮಂಜಣ್ಣ – ತ್ರಿವಿಕ್ರಮ್, ಈ ಬಾರಿ ಹೊಸ ಒಪ್ಪಂದ!

ದಿನಗಳು ಉರುಳಿದಂತೆ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧೆಯ ಕಾವೇರುತ್ತಿದೆ. ಹೀಗಿರುವಾಗಲೇ, ತೊಡೆ ತಟ್ಟಿ ನಿಂತಿದ್ದ ತ್ರಿವಿಕ್ರಮ್ ಹಾಗೂ ಮಂಜು ಕೈಜೋಡಿಸಿಬಿಟ್ಟಿದ್ದಾರೆ. ಹೊಸ ಒಪ್ಪಂದಕ್ಕೆ ನಾಂದಿ...

ರೋಗಗಳಿಂದ ಕಂಗೆಟ್ಟಿದ್ದ ಮಲೆನಾಡಿನ ರೈತರಲ್ಲಿ ಆಶಾಕಿರಣ: ಭರವಸೆ ಮೂಡಿಸಿದ ಮಂಗಳ ಅಡಕೆ

ಶೃಂಗೇರಿ: ಹಳದಿ ಎಲೆ. ಬೇರು ಹುಳ, ಎಲೆ ಚುಕ್ಕಿ ರೋಗ ಹೀಗೆ ಮಲೆನಾಡಿನ ಅಡಕೆ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ರೋಗ...