spot_img
spot_img

ರೈತರಿಗೆ ವರವಾದ ಕೃಷಿ ಆ್ಯಪ್‌ಗಳು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಿಜಯಪುರ: ರೈತರು ಬಳಕೆ ಮಾಡುವುದರತ್ತ ದಿಟ್ಟ ಹೆಜ್ಜೆ ಇರಿಸಿದ್ದು, ಬಹುತೇಕ ರೈತರು ಸಲೀಸಾಗಿ ಆ್ಯಪ್‌ ಬಳಕೆ ಮಾಡುವುದರಲ್ಲಿ ನಿಪುಣರಾಗುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್‌ ಬಳಕೆಯಲ್ಲಿ ಸುಶಿಕ್ಷಿತರು ಹಿಂದೆ ಬಿದ್ದಿದ್ದರೆ, ಓದು, ಬರಹ ಬಾರದ ರೈತರು ಮಾತ್ರ ಕೃಷಿ ಸಂಬಂಧಿಸಿದ ಮೊಬೈಲ್‌ ಆ್ಯಪ್‌ ಬಳಕೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.ಹೌದು, ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಕೃಷಿಕರಾಗಿದ್ದಾರೆ.

ಕೃಷಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಲ್ಲಿ ಡಜನ್‌ ಆ್ಯಪ್‌ಗಳಿವೆ. ಆದರೆ ಇವೆಲ್ಲಆ್ಯಪ್‌ಗಳನ್ನು ರೈತರು ಬಳಕೆ ಮಾಡುವುದರತ್ತ ದಿಟ್ಟ ಹೆಜ್ಜೆ ಇರಿಸಿದ್ದು, ಬಹುತೇಕ ರೈತರು ಸಲೀಸಾಗಿ ಆ್ಯಪ್‌ ಬಳಕೆ ಮಾಡುವುದರಲ್ಲಿ ನಿಪುಣರಾಗುತ್ತಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ರೈತರೇ ಆಯಾ ಹಂಗಾಮುವಾರು ಸಮೀಕ್ಷೆ ನಡೆಸಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಒದಗಿಸುವುದರ ಮಟ್ಟಿಗೆ ಎಕ್ಸಪರ್ಟ್‌ ಆಗಿದ್ದಾರೆ.

ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಕೃಷಿಕರಾಗಿದ್ದಾರೆ. ಈ ಪೈಕಿ 4 ಲಕ್ಷಕ್ಕೂ ಅಧಿಕ ರೈತರು ಕೃಷಿ ಇಲಾಖೆಯ ನಾನಾ ಆ್ಯಪ್‌ಗಳನ್ನು ಲೀಲಾಜಾಲವಾಗಿ ಬಳಕೆ ಮಾಡುವುದರ ಮೂಲಕ ಅಕ್ಷರಸ್ಥರನ್ನೇ ನಾಚಿಸುವಷ್ಟರ ಮಟ್ಟಿಗೆ ಆನ್‌ಲೈನ್‌ ಚತುರರಾಗಿದ್ದಾರೆ.

ಜಿಪಿಎಸ್‌ ಎಂದರೆ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಈ ವಿಷಯದಲ್ಲಿ ರೈತರು ಪಕ್ಕಾ ಆಗಿದ್ದಾರೆ. ತಮ್ಮ ಜಮೀನು ಒಣ ಇಲ್ಲವೇ ನೀರಾವರಿ ಬೇಸಾಯ ಎಂಬುದನ್ನು ಆಯ್ಕೆ ಮಾಡಿಕೊಂಡು, ಜಿಪಿಎಸ್‌ ಮೂಲಕ ಎಷ್ಟು ಎಕರೆ ಹಿಡುವಳಿಯಲ್ಲಿ ಯಾವ ಬೆಳೆ ಬೆಳೆದಿದ್ದೇನೆ ಎಂಬುದನ್ನು ಬೆಳೆದರ್ಶಕ ಆ್ಯಪ್‌ನಲ್ಲಿ ದಾಖಲಿಸುತ್ತಿದ್ದಾರೆ.

ಒಂದು ವೇಳೆ ಕೃಷಿ ಇಲಾಖೆ ಪರವಾಗಿ ಆಯಾ ಗ್ರಾಮದ ಖಾಸಗಿ ನಿವಾಸಿಗಳು ಈ ಆ್ಯಪ್‌ನಲ್ಲಿ ತಪ್ಪಾಗಿ ನಮೂದಿಸಿದ್ದರೆ, ಈ ಆ್ಯಪ್‌ ಮೂಲಕ ರೈತರು ಆಕ್ಷೇಪ ಸಲ್ಲಿಸುವುಷ್ಟರ ಮಟ್ಟಿಗೆ ಆನ್‌ಲೈನ್‌ ಚತುರರಾಗಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಜನಪ್ರಿಯ ಯೋಜನೆಯಾಗಿರುವ ಪಿಎಂ ಕಿಸಾನ್‌ ಪಬ್ಲಿಕ್‌ ಪೋರ್ಟಲ್‌ ಬಳಸುವುದರಲ್ಲಿ ಬಹುತೇಕ ರೈತರು ನಿಪುಣರಾಗಿದ್ದಾರೆ. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂ. ದಂತೆ ವರ್ಷಕ್ಕೆ 6 ಸಾವಿರ ರೂ. ರೈತರ ಬ್ಯಾಂಕ್‌ ಖಾತೆಗೆ ದೇಶಾದ್ಯಂತ ಡಿಬಿಟಿ ಮೂಲಕ ನೇರವಾಗಿ ಜಮೆಯಾಗುವ ಮೊತ್ತವನ್ನು ಪರಿಶೀಲಿಸಿಕೊಳ್ಳುತ್ತಿದ್ದಾರೆ.

ಕೃಷಿ ಇಲಾಖೆಯ ಮತ್ತೊಂದು ಜನಪ್ರಿಯ ಯೋಜನೆ ಈ ಫಸಲ್‌ ಬಿಮಾ ಯೋಜನೆ ಆ್ಯಪ್‌ ಬಳಸುವುದರಲ್ಲಿರೈತರು ಮುಂದಿದ್ದಾರೆ. ಈ ಯೋಜನೆಯಡಿ ಪ್ರಿಮಿಯಂ ಹಣ ಕಟ್ಟಿದ್ದು, ನಂತರ ಸರಕಾರದಿಂದ ಜಮೆಯಾಗಿದ್ದನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಎನ್ ಡಿ ಎ ಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸಲಿದೆ : ಪ್ರಧಾನಿ ಮೋದಿ

ಹೊಸದಿಲ್ಲಿ : ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟದ ಜಯವು ಉತ್ತಮ ಆಡಳಿತಕ್ಕೆ, ಅಭಿವೃದ್ಧಿಗೆ ಸಂದ ಜಯ. ಎನ್ ಡಿ ಎ ಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸಲಿದೆ...

ಅಹಿಂದ ಮತಗಳ ದೃಢಿಕರಣ ಶಿಗ್ಗಾವಿ ಗೆಲುವಿಗೆ ನೆರವಾಯ್ತು: ಸತೀಶ್ ಜಾರಕಿಹೊಳಿ

ಬೆಳಗಾವಿ: ಉಪಚುನಾವಣೆ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಸರಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ...

3 ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಜಯಭೇರಿ

ಬೆಂಗಳೂರು: ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೂರು ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಆ ಮೂಲಕ...

ಭಾರತದ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನೀವು ಈ 7 ದೇಶಗಳಲ್ಲಿ ವಾಹನ ಚಲಾಯಿಸಬಹುದು

ಯಾವುದೇ ದೇಶಕ್ಕೆ ಹೋಗಿ ನೆಲೆಸಲೆಂದೊ ಅಥವಾ ವಿದ್ಯಾಭ್ಯಾಸಕ್ಕೆಂದು ಹೋದಾಗ ಅಲ್ಲಿ ವಾಹನ ಓಡಿಸಬೇಕಾದಲ್ಲಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾಗುತ್ತದೆ. ಅದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿ...