ಬೆಂಗಳೂರು: ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 14ರ ಗುರುವಾರ ನಗರದ ಬಹುತೇಕ ಕಡೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ವೃಷಭಾವತಿ ವಿದ್ಯುತ್ ಸ್ಥಾವರದಿಂದ ತಾತಗುಣಿ ವಿದ್ಯುತ್ ಸ್ಥಾವರದ 220 ಕೆವಿ ವಿದ್ಯುತ್ ಮಾರ್ಗದಲ್ಲಿ ಹಲವು ಪರಿಕರಗಳನ್ನು ತುರ್ತಾಗಿ ಬದಲಾಯಿಸುವ ಕಾರ್ಯ ನಡೆಯಲಿದೆ.
220 ಕೆವಿ ಹೈ ಲೆವೆಲ್ ಬಸ್ ಜಿಓಎಸ್ ಮತ್ತು ಇತರೆ ಪರಿಕರಗಳನ್ನು ತುರ್ತಾಗಿ ತಾತಗುಣಿ 220 ಕೆವಿ ವಿದ್ಯುತ್ ಸ್ಥಾವರದಲ್ಲಿ ಹಾಗೂ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲ ಹಂತಗಳ ಜಲರೇಚಕ ಯಂತ್ರಗಾರಗಳಲ್ಲಿ ಅಳವಡಿಸಲಾಗುತ್ತಿದೆ. ಹೀಗಾಗಿ, ಗುರುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಒಟ್ಟು 2 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ. ಅಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಕಾರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ಅಗತ್ಯ ಇರುವ ನೀರನ್ನು ಶೇಖರಿಸಿಟ್ಟುಕೊಳ್ಳಬೇಕು ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ನೀಡಿದೆ .
ಬೆಸ್ಕಾಂ ತಿಳಿಸಿದೆ ನವೆಂಬರ್ 13ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ 66/11 ಕೆ.ವಿ ಹೆಣ್ಣೂರು ರೋಡ್ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ನಿರ್ವಹಿಸುವುದರಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಮುಖ್ಯವಾಗಿ ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತು ಜಯಂತಿ ಕಾಲೇಜ್, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿ.ಡಿ.ಎಸ್. ಗಾರ್ಡನ್, ಕೊತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿ.ಎಸ್.ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲ ಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಹಾಗೆಯೇ, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿ.ಹೆಚ್.ಕೆ. ಇನ್ಸಸ್ಟ್ರೀಸ್, ಜಾನಕೀ ರಾಮ್ ಲೇಔಟ್, ವಡ್ಡರ ಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾನಗರ, ಬೈರತಿ ಹಳ್ಳಿ, ಕೆ.ಆರ್.ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂದ್ರ ಕಾಲೋನಿ ಮಂಜುನಾಥನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ಟೆಂಪಲ್, ಎ.ಕೆ.ಆರ್ ಸ್ಕೂಲ್, ಹೊಸ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಸ್ಟೀನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now