spot_img
spot_img

Tipu Sultan: ಚಿನ್ನದ ಲೇಪನವಿದ್ದ ಟಿಪ್ಪು ಸುಲ್ತಾನ್ ಖಡ್ಗ ಲಂಡನ್‌ನಲ್ಲಿ ಹರಾಜು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಲಂಡನ್: ಮೈಸೂರಿನಲ್ಲಿ ಆಳ್ವಿಕೆ ನಡೆಸಿದ್ದ ಟಿಪ್ಪು ಸುಲ್ತಾನ್ 1799ರಲ್ಲಿ ಶ್ರೀರಂಗಪಟ್ಟಣ ಕದನದಲ್ಲಿ ಬಳಸಿದ್ದ ಎನ್ನಲಾದ ಖಡ್ಗ ಲಂಡನ್‌ನಲ್ಲಿ 3.4 ಕೋಟಿ ರೂಪಾಯಿಗೆ ಹರಾಜಾಗಿದೆ.

ಯುದ್ದದಲ್ಲಿ ಬ್ರಿಟಿಷ್ ಸೇನೆಗೆ ಕೊಡುಗೆ ನೀಡಿದ್ದ ಕಾರಣಕ್ಕೆ ಕ್ಯಾಪ್ಟನ್ ಜೇಮ್ಸ್ ಆ್ಯಂಡ್ರ ಡಿಕ್ ಎಂಬ ಅಧಿಕಾರಿಗೆ ಬ್ರಿಟಿಷ್ ಸರ್ಕಾರ ಟಿಪ್ಪು ಸುಲ್ತಾನ್ ಬಳಸಿದ್ದ ಈ ಖಡ್ಗವನ್ನು ಉಡುಗೊರೆಯಾಗಿ ನೀಡಿತ್ತು.

2024ರವರೆಗೂ ಈ ಖಡ್ಗವನ್ನು ಡಿಕ್ ಕುಟುಂಬಸ್ಥರು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದೀಗ ಈ ಖಡ್ಗವನ್ನು ಹರಾಜು ಹಾಕಲಾಗಿದೆ.

ಖಡ್ಗವು ವಿಶಿಷ್ಟವಾದ ಡುಬ್ರಿ (ಹುಲಿ ಪಟ್ಟೆ) ವಿನ್ಯಾಸವನ್ನು ಹೊಂದಿದೆ. ಖಡ್ಗದ ಮೇಲೆ ಚಿನ್ನದ ಲೇಪನ ಇದ್ದು, ಅರೇಬಿಕ್ ಭಾಷೆಯಲ್ಲಿ ‘ಹ’ ಎಂದು ಕೆತ್ತಲಾಗಿದೆ. ಇದು ಟಿಪ್ಪು ತಂದೆ ಹೈದರ್ ಅಲಿ ಹೆಸರನ್ನು ಸೂಚಿಸುತ್ತದೆ ಎಂದು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ.

ಕ್ಯಾಪ್ಟನ್ ಜೇಮ್ಸ್ ಆ್ಯಂಡ್ರ ಡಿಕ್ ಶ್ರೀರಂಗಪಟ್ಟಣದ 75ನೇ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದ. ಶತ್ರು ಪಡೆಗಳ ಕೋಟೆಯ ಗೋಡೆಗಳನ್ನು ಭೇದಿಸಿ ಒಳ ನುಗ್ಗುವುದು ಈ ರೆಜಿಮೆಂಟಿನ ಕೆಲಸವಾಗಿತ್ತು.

ಶ್ರೀರಂಗಪಟ್ಟಣದ ಕೋಟೆಯನ್ನು ಭೇದಿಸಿ ಒಳನುಗ್ಗಲು ಬ್ರಿಟಿಷ್ ಸೇನೆಗೆ ಡಿಕ್ ನೇತೃತ್ವದ ಪಡೆ ಅಗತ್ಯ ಸಹಾಯ ಮಾಡಿತ್ತು. ಹೀಗಾಗಿ ಟಿಪ್ಪುವಿನ ಮರಣದ ನಂತರ ಖಡ್ಗವನ್ನು ಡಿಕ್‌ಗೆ ಉಡುಗೊರೆಯಾಗಿ ನೀಡಲಾಗಿತ್ತು.

ಪುರಾತನ ಖಡ್ಗದ ಜತೆಗೆ ಬ್ರಿಟಿಷ್ ಸೇನಾಧಿಕಾರಿ ಪೀಟ‌ರ್ ಚೆರಿಗೆ ನೀಡಲಾಗಿದ್ದ ಬೆಳ್ಳಿಯ ಪದಕವನ್ನೂ ಹರಾಜು ಹಾಕಲಾಗಿತ್ತು. ಈ ಪದಕ 24 ಲಕ್ಷ ರೂಪಾಯಿಗೆ ಹರಾಜಾಗಿದೆ.

ಟಿಪ್ಪು ಸುಲ್ತಾನ್ ಮತ್ತು ನವಾಬರ ನಡುವೆ ಏರ್ಪಟ್ಟಿದ್ದ ಒಪ್ಪಂದದ ಗುಪ್ತ ದಾಖಲೆ 38.6 ಲಕ್ಷ ರೂಪಾಯಿ ಹರಾಜಾಗಿದೆ.

ಉದ್ಯಮಿ ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್‌ ಖಡ್ಗ ಲಂಡನ್‌ನಲ್ಲಿ ಕಳೆದ ವರ್ಷ 143 ಕೋಟಿಗೆ ರೂಪಾಯಿಗೆ ಹರಾಜಾಗಿತ್ತು. ಸಿನಿಮಾ ಬ್ರಿಟಿಷ್ ರಾಜಮನೆತನದ ವಸ್ತುಸಂಗ್ರಹಾಲಯದಲ್ಲಿದ್ದ ಖಡ್ಗವನ್ನು ವಿಜಯ್ ಮಲ್ಯ 2004ರಲ್ಲಿ 1.57 ಕೋಟಿಗೆ ರೂಪಾಯಿಗೆ ಖರೀದಿಸಿದ್ದರು.

1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣ ನಂತರ ಈ ಖಡ್ಗವನ್ನು ಅರಮನೆಯ ಖಾಸಗಿ ಕೋಣೆಯಿಂದ ಪಡೆದುಕೊಳ್ಳಲಾಗಿತ್ತು. ಬಳಿಕ ಅದನ್ನು ಬ್ರಿಟಿಷ್ ಸೇನೆ ಮೇಜರ್ ಜನರಲ್ ಡೇವಿಡ್ ಬೇರ್ಡೆಗೆ ಉಡುಗೊರೆಯಾಗಿ ನೀಡಿತ್ತು.

ಭಾ ಕೇತಾನ್ ಫೌಂಡೇಶನ್ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಖ್ಯಾತ ಇತಿಹಾಸಕಾರ ಡಾ.ವಿಕ್ರಮ್ ಸಂಪತ್ ಅವರ ಟಿಪ್ಪು ಸುಲ್ತಾನ್ ಐತಿಹಾಸಿಕ ಕಾದಂಬರಿಯನ್ನು ಸಂಸದ ತೇಜಸ್ವಿ ಸೂರ್ಯ ಬಿಡಿಗಡೆ ಮಾಡಿದ್ದಾರೆ. ಬಳಿಕ ಮಾತನಾಡಿ, ದೇಶದ ಭವಿಷ್ಯಕ್ಕೆ ಇತಿಹಾಸ ಮುಖ್ಯ.

ಇತಿಹಾಸದ ಸತ್ಯವನ್ನು ಕಥೆ, ಕಾದಂಬರಿಗ ಮೂಲಕ ಮುಂದಿನ ಪೀಳಿಗೆಗೆ ಕೊಡುವ ಕೆಲಸ ಅಗತ್ಯ. ಇದರ ಭಾಗವಾಗಿ ಸುಮಾರು ಸಾವಿರ ಪುಟದ ಟಿಪ್ಪು ಸುಲ್ತಾನ್ ಕಾದಂಬರಿ ಪ್ರಕಟವಾಗಿದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಪೂರಕ ಪೌಷ್ಟಿಕ ಆಹಾರ ವಿತರಣೆ ಎನ್‌ಜಿಒಗಳಿಗೆ ವಹಿಸಿ : ಶಶೀಲ್ ನಮೋಶಿ

ಕಲಬುರಗಿ : ರಾಜ್ಯದ ಎಲ್ಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ನೀಡುತ್ತಿರುವ 'ಪೂರಕ ಪೌಷ್ಟಿಕ ಆಹಾರ ವಿತರಣೆ' ಯೋಜನೆಯನ್ನು ಎನ್‌ಜಿಒಗಳಿಗೆ ವಹಿಸಬೇಕೆಂದು...

ಗಯಾನಾದಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆ: ಪ್ರಧಾನಿ ಮೋದಿ ಸಹಿ

ಜಾರ್ಜ್‍ಟೌನ್ : ಕೆರಿಬಿಯನ್ ರಾಷ್ಟ್ರ ಗಯಾನಾಕ್ಕೆ ಭಾರತವು ತನ್ನ ಔಷಧೀಯ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲಿದೆ ಮತ್ತುಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ...

ರೈತರ ಜಮೀನಿನ ಪಹಣಿ :ವಕ್ಫ್‌ ಹೆಸರು ಬೇಡ

ಬೆಂಗಳೂರು : ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆದುಹಾಕಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ...

ರೈತರ ಕಂಗೆಡಿಸಿದ ಡೀಮ್ಡ್ ಫಾರೆಸ್ಟ್

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕುತ್ತಿದ್ದರು. ಕೃಷಿ ಮಾಡುತ್ತಿದ್ದ ರೈತರೆಲ್ಲ ದಿಕ್ಕೆಟ್ಟು ಕೂತಿದ್ದರು. ಕೆಲವೆಡೆ ಸರಕಾರವೇ...