ಇಂಡಿಯನ್ ಪ್ರಿಮೀಯರ್ ಲೀಗ್ನ ಬಿಗ್ ಬಿಲಿಯನ್ ಡೇಗೆ ಕೌಂಟ್ಡೌನ್ ಶುರುವಾಗಿದೆ. ಮೆಗಾ ಹರಾಜಿನ ಕಣದಲ್ಲಿ 574 ಆಟಗಾರರು ಕಾಣಿಸಿಕೊಂಡಿದ್ದಾರೆ. ಸ್ಟಾರ್ ಆಟಗಾರರಾದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ಗೆ ಟೆನ್ಶನ್ ಶುರುವಾಗಿದೆ.
2025ರ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 24, 25ರಂದು ನಡೆಯಲಿರುವ ಈ ಮೆಗಾ ಹರಾಜಿನ ಬಗ್ಗೆ ಅಭಿಮಾನಿಗಳಲ್ಲಿ ಕೂತುಹಲ ಮನೆ ಮಾಡಿದೆ. 574 ಆಟಗಾರರು ಪೈಕಿ ಹರಾಜಿನ ಕಣದಲ್ಲಿ ಸೇಲಾಗುವ 204 ಆಟಗಾರರು ಯಾರು ಅನ್ನೋ ನಿರೀಕ್ಷೆ ಗರಿಗೆದರಿದೆ.
2 ಸೆಟ್ನಲ್ಲಿರುವ 12 ಮಾರ್ಕ್ಯೂ ಆಟಗಾರರ ಪೈಕಿ ಮೂವರ ಎದೆಯಲ್ಲಿ ನಡುಕ ಶುರುವಾಗಿದೆ. ಬಿಗ್ ಅಮೌಂಟ್ಗೆ ಸೇಲ್ ಆಗ್ತೀವಾ ಇಲ್ವಾ ಅನ್ನೋ ಭಯ ಕಾಡಲಾರಂಭಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ಜೊತೆಗಿನ ವಿವಾದ ಮಾಡಿಕೊಂಡಿರುವ ಕೆ.ಎಲ್.ರಾಹುಲ್, ಮಾರ್ಕ್ಯೂ ಆಟಗಾರರ ಲಿಸ್ಟ್ನಲ್ಲಿದ್ದಾರೆ. ಲಕ್ನೋ ಮಾಲೀಕರ ಜೊತೆಗಿನ ವಾಗ್ವಾದ ಹಾಗೂ ಸ್ಟ್ರೈಕ್ರೇಟ್ ಸೆಟ್ ಬ್ಯಾಕ್ ಆಗಿತ್ತು.
ಆದ್ರೀಗ ಇದೇ ರಾಹುಲ್ಗೆ ಮೆಗಾ ಹರಾಜಿನಲ್ಲಿ ಹಿನ್ನಡೆಯಾಗಿ ಕಾಡುತ್ತಾ ಎಂಬ ಅನುಮಾನ ಹುಟ್ಟಿಹಾಕಿದೆ.
ಕೆ.ಎಲ್.ರಾಹುಲ್ ಹಾರ್ಡ್ ಹಿಟ್ಟರ್ ಅಲ್ಲ. ಇನ್ನಿಂಗ್ಸ್ ಬಿಲ್ಡ್ ಮಾಡೋಕೆ ಸಮಯ ತೆಗೆದುಕೊಳ್ಳುವ ರಾಹುಲ್, ಮಾಡ್ರನ್ ಡೇ ಟಿ20 ಕ್ರಿಕೆಟ್ ಸ್ಟ್ರೈಲ್ಗೆ ಸೆಟ್ ಆಗಲ್ಲ.
ಅಂಡರ್ ಫ್ರೆಷರ್ನಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದಾರೆ. ಇದೇ ಕಾರಣಕ್ಕೆ ಲಕ್ನೋ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ. ಈ ಅಂಶಗಳೇ ಐಪಿಎಲ್ ಫ್ರಾಂಚೈಸಿಗಳು ಕೆ.ಎಲ್.ರಾಹುಲ್ ಖರೀದಿಗೆ ಮನ್ಸು ಮಾಡುತ್ತಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಟೀಮ್ ಕ್ಯಾಪ್ಟನ್, ರಿಟೈನ್ ಆಗಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೇ ಉಳಿಸಿಕೊಳ್ಳುವ ಯತ್ನ ಮಾಡಿದ್ರು. ಮೆಗಾ ಹರಾಜಿನ ಕಣಕ್ಕೆ ಶ್ರೇಯಸ್ ಅಯ್ಯರ್ ದುಮುಕಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೆಣಗಾಡ್ತಿರುವ ಶ್ರೇಯಸ್ ಅಯ್ಯರ್, ಬಿಸಿಸಿಐನ ಸೆಂಟ್ರಲ್ ಕಾಂಟ್ರಾಕ್ಟ್ನಲ್ಲೂ ಇಲ್ಲ.
ಸದ್ಯ ಏಕದಿನ ತಂಡದ ಸದಸ್ಯನಾಗಿ ಮಾತ್ರವೇ ಉಳಿದಿರುವ ಅಯ್ಯರ್ಗೆ, ಟಿ20ಯಲ್ಲಿ ಹೇಳಿಕೊಳ್ಳುವ ಶ್ರೇಯಸ್ಸು ಸಿಕ್ಕಿಲ್ಲ. 2024ರ ಕ್ಯಾಲೆಂಡರ್ನಲ್ಲಿ ಐಪಿಎಲ್ ಬಿಟ್ರೆ, ಟಿ20 ಮ್ಯಾಚ್ಗಳನ್ನೇ ಆಡದ ಶ್ರೇಯಸ್ ಟಾಪ್ ಆರ್ಡರ್ಗೆ ಮಾತ್ರವೇ ಸಿಮೀತ. ಹೀಗಾಗಿ ಶ್ರೇಯಸ್ ಮೆಗಾ ಹರಾಜಿನಲ್ಲಿ ಬಂಪರ್ ಪ್ರೈಸ್ ಸಿಗುತ್ತಾ ಎಂಬ ಪ್ರಶ್ನೆ ಇದೆ.
ಮೊಹಮ್ಮದ್ ಸಿರಾಜ್.. ಟೀಮ್ ಇಂಡಿಯಾ ಖಾಯಂ ಆಟಗಾರ. ಸದ್ಯ 3 ಫಾರ್ಮೆಟ್ನಲ್ಲಿ ಆಡ್ತಿರುವ ಸಿರಾಜ್, ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಲು ಪರದಾಡ್ತಿದ್ದಾರೆ.
ಆರ್ಸಿಬಿ ಹಾಗೂ ಟೀಮ್ ಇಂಡಿಯಾ ಪರ ವರ್ಷದಿಂದ ಹೇಳಿಕೊಳ್ಳುವ ಆಟವಾಡಿಲ್ಲ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು ಸ್ಪೀಡ್ಸ್ಟರ್ ಮೊಹಮ್ಮದ್ ಶಮಿಯ ಮೇಲೆ ಬಿಗ್ ಅಮೌಂಟ್ ಸುರಿಸುವುದು ಡೌಟೇ..
ಒಟ್ನಲ್ಲಿ, ಸ್ವಯಃ ಕೃತ ಅಪರಾಧ, ತಂಡದೊಂದಿಗಿನ ವಾಗ್ವಾದ.. ಆತ್ಮಗೌರವ, ಹಣದಾಸೆ ಸೇರಿದಂತೆ ಇನ್ನಿತರ ಕಾರಣಕ್ಕೆ ಈ ತ್ರಿಮೂರ್ತಿಗಳು, ಮೆಗಾ ಹರಾಜಿನ ಕಣದಲ್ಲಿ ಕಾಣಿಸಿಕೊಳ್ತಿದ್ದಾರೆ.
ಈ ತ್ರಿಮೂರ್ತಿಗಳಿಗೆ ಅವರದ್ದೇ ಆಟ ಸೆಟ್ ಬ್ಯಾಕ್ ಆಗುವ ಫಿಯರ್ ಕಾಡ್ತಿದ್ದು, ಮೆಗಾ ಹರಾಜಿನಲ್ಲಿ ಎಷ್ಟಕ್ಕೆ ಬಿಕರಿಯಾಗ್ತಾರೆ ಅನ್ನೋದು ಕಾದುನೋಡಬೇಕಿದೆ.