spot_img
spot_img

RCB ಕಡಿಮೆ ದುಡ್ಡಲ್ಲಿ ಖರೀದಿ ಮಾಡೋ ಮೂವರು ಸ್ಫೋಟಕ ಆಟಗಾರರು

spot_img
spot_img

Share post:

ಕೆಲವೇ ದಿನಗಳಲ್ಲಿ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಕೆ.ಎಲ್​ ರಾಹುಲ್​​, ರಿಷಬ್​ ಪಂತ್​​, ಶ್ರೇಯಸ್​ ಅಯ್ಯರ್​ ಸೇರಿದಂತೆ ಸ್ಟಾರ್​ ಆಟಗಾರರೇ ಭಾಗವಹಿಸಲಿದ್ದಾರೆ. ಅದರಲ್ಲೂ ಯುವ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಳೆದ ಸೀಸನ್​​ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರೋ ಯುವ ಆಟಗಾರರ ಮೇಲೆ ಐಪಿಎಲ್​ ತಂಡಗಳ ಮಾಲೀಕರು ಕಣ್ಣು ನೆಟ್ಟಿದೆ. ಈ ಹರಾಜಿನಲ್ಲಿ ಯುವ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ಮಾಲೀಕರು ಕೂಡ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಂತೂ ತಂಡದ ದೂರದೃಷ್ಟಿಯಿಂದ ಈ ಯುವ ಆಟಗಾರರಿಗೆ ಮಣೆ ಹಾಕಲಿದೆ.

ಆರ್​​ಸಿಬಿ ಟಾರ್ಗೆಟ್​ ಮಾಡೋ ಯುವ ಆಟಗಾರರು ಇವ್ರೇ!
ಪಂಜಾಬ್‌ ಪರ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ ನೆಹಾಲ್ ವಧೇರಾ.

ಇವರು ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕಳೆದ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್​​ ಪರ ಕಡಿಮೆ ಪಂದ್ಯಗಳನ್ನಾಡಿದ್ರೂ ಸೈ ಎನಿಸಿಕೊಂಡಿದ್ದರು.

ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆರ್​​ಸಿಬಿ ಗಮನ ಸೆಳೆದಿದ್ದಾರೆ.
2024ರ ಐಪಿಎಲ್​ ಸೀಸನ್​​ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರ ಅಶುತೋಷ್‌ ಶರ್ಮಾ. ಇವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರು ಮಾಡಿದವ್ರು. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟ್​ ಬೀಸಬಲ್ಲರು.

17ನೇ ಸೀಸನ್​ನಲ್ಲಿ ತಾನು ಆಡಿದ 10 ಪಂದ್ಯದಲ್ಲಿ 189 ರನ್​ ಚಚ್ಚಿದ್ರು. ಅಶುತೋಷ್‌ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 167.26 ಇದೆ. ಇವರ ಮೇಲೂ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿದೆ.

ಕೆಕೆಆರ್‌ ತಂಡದ 20 ವರ್ಷದ ಯುವ ಬ್ಯಾಟರ್​ ಅಂಗ್‌ಕ್ರಿಶ್ ರಘುವಂಶಿ. ಇವರು ಕೆಕೆಆರ್​ ತಂಡದ ಪರ ತಮಗೆ ಸಿಕ್ಕ ಅವಕಾಶದಲ್ಲಿ 10 ಪಂದ್ಯಗಳನ್ನು ಆಡಿ 163 ರನ್ ಗಳಿಸಿದ್ರು.

ಇವರ ಮೂಲ ಬೆಲೆ 20 ಲಕ್ಷ ರೂ. ಆಗಿದ್ದು, ಅಗ್ರೆಸ್ಸಿವ್​ ಆಗಿ ಬ್ಯಾಟ್​​ ಮಾಡಬಲ್ಲರು. ಹಾಗಾಗಿ ಆರ್​​​ಸಿಬಿ ಈತನ ಮೇಲೆ ಹಣದ ಹೊಳೆಯನ್ನೇ ಹರಿಸಬಹುದು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...