spot_img
spot_img

ಆಂಧ್ರದಲ್ಲಿ ಓಡಾಡುವ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಶೇ 25 ರಷ್ಟು ರಿಯಾಯಿತಿ ಬಸ್​ ಪ್ರಯಾಣ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಆಂಧ್ರಪ್ರದೇಶ: ದೇಶದ ಯಾವುದೇ ರಾಜ್ಯದ ಹಿರಿಯ ನಾಗರಿಕರಿಗೆ, ಆಂಧ್ರ ಬಸ್​ಗಳಲ್ಲಿ ಪ್ರಯಾಣಿಸಿದರೆ ಅವರಿಗೆ ಶೇ 25 ರಷ್ಟು ರಿಯಾಯಿತಿ ನೀಡುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಘೋಷಿಸಿದೆ. 60 ವರ್ಷ ಪೂರೈಸಿದ ನಾಗರಿಕರು ಸರ್ಕಾರಿ ಸ್ವಾಮ್ಯದ ಸಾರಿಗೆಯ ಎಲ್ಲಾ ರೀತಿಯ ಬಸ್​ಗಳಲ್ಲಿ ಈ ರಿಯಾಯಿತಿ ಪಡೆಯಲಿದ್ದಾರೆ.
ಟಿಕೆಟ್ ನೀಡುವ ಸಮಯದಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರಿಂದ ಅವರ ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ಅಥವಾ ಪಡಿತರ ಚೀಟಿಯನ್ನು ಪರಿಶೀಲಿಸುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ನಿರ್ದೇಶಿಸಲಾಗಿದೆ.
“60 ವರ್ಷ ಪೂರೈಸಿದ ಹಿರಿಯ ನಾಗರಿಕರು ಯಾವುದೇ ರಾಜ್ಯ ಸರ್ಕಾರ ಅಥವಾ ಭಾರತ ಸರ್ಕಾರ ನೀಡಿದ, ಭೌತಿಕ ಅಥವಾ ಡಿಜಿಟಲ್ ರೂಪದಲ್ಲಿರುವ ವಯಸ್ಸಿನ ಯಾವುದೇ ಪುರಾವೆಗಳನ್ನು ಹಾಜರುಪಡಿಸಿ ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆಯಬಹುದು” ಎಂದು ಎಪಿಎಸ್ಆರ್​​ಟಿಸಿ ಆದೇಶದಲ್ಲಿ ತಿಳಿಸಿದೆ. ಆದೇಶದ ಅನುಷ್ಠಾನ ಖಚಿತಪಡಿಸಿಕೊಳ್ಳಲು ಸಂಸ್ಥೆಯು ಎಲ್ಲಾ ಕ್ಷೇತ್ರ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ನಿರ್ದೇಶನ ನೀಡಿದೆ.
ಈ ಮೊದಲು ಆಂಧ್ರಪ್ರದೇಶದ ಹಿರಿಯ ನಾಗರಿಕರಿಗೆ ಮಾತ್ರ ಬಸ್​ಗಳಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ಲಭ್ಯವಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ರಿಯಾಯಿತಿಯನ್ನು 2020 ರಲ್ಲಿ ನಿಲ್ಲಿಸಲಾಗಿತ್ತು. ಸದ್ಯ ಈ ರಿಯಾಯಿತಿಯನ್ನು ಪುನರಾರಂಭಿಸಲಾಗಿದೆ.
ಇದು ಮಾತ್ರವಲ್ಲದೇ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಅದರ ಮಿತ್ರಪಕ್ಷಗಳು ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಕೂಡ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಎಪಿಎಸ್ಆರ್​ಟಿಸಿ ಇಷ್ಟರಲ್ಲೇ ಆರಂಭಿಸುವ ಸಾಧ್ಯತೆಯಿದೆ.
ಎಪಿಎಸ್ಆರ್​ಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವು ‘ಸೂಪರ್ ಸಿಕ್ಸ್’ ಭರವಸೆಗಳ ಅಡಿ ಟಿಡಿಪಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ. ಈ ಯೋಜನೆಗಳನ್ನು ಟಿಡಿಪಿ ಮತ್ತು ಅದರ ಮಿತ್ರ ಪಕ್ಷಗಳಾದ ಜನಸೇನಾ ಮತ್ತು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ರಾಜ್ಯ ಸರ್ಕಾರ ಶೀಘ್ರದಲ್ಲೇ ಈ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...