spot_img
spot_img

ಗೂಗಲ್​ ಮ್ಯಾಪ್ ಎಡವಟ್ಟು : ಮಿನಿ ಬಸ್​ ಅಪಘಾತ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕಣ್ಣೂರು: ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್​ವೊಂದು ಕಣ್ಣೂರಿನ ಸಮೀಪದ ಕೆಲಕಮ್​ ಬಳಿ ಅಪಘಾತಕ್ಕೆ ಒಳಗಾಗಿದ್ದಾರೆ. ಮಿನಿ ಬಸ್​ ಚಾಲಕ ಗೂಗಲ್ ಮ್ಯಾಪ್​ ಸಹಾಯದಿಂದ ಬಸ್​ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್​ ಸಾವನ್ನಪ್ಪಿದ್ದಾರೆ. ಈ ಇಬ್ಬರು ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಮಿನಿ ಬಸ್​ ಚಾಲಕ ಗೂಗಲ್ ಮ್ಯಾಪ್​ ಸಹಾಯದಿಂದ ಬಸ್​ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅನಾಹುತ ನಡೆದಿದೆ. ಶುಕ್ರವಾರ ಬೆಳಗ್ಗೆ 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಯಂಕುಮಂ ದೇವ ಕಮ್ಯೂನಿಕೇಷನ್​ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್​ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್​ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್​ ಟೌನ್​ ರಸ್ತೆ ಮಾರ್ಗವಾಗಿ ಕೆಲಕಮ್​ ಪರ್ಯಾಯ ಮಾರ್ಗವನ್ನು ಮ್ಯಾಪ್​ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್​ ತಿರುಗಳಿಂದಾಗಿ ಮಿನಿ ಬಸ್​ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್​, ಸುರೇಶ್​ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್​ನ ಚೆಲ್ಲಪ್ಪನ್​ ಮತ್ತು ಕೊಲ್ಲಂನ ಶ್ಯಾಮ್​ ಹಾಗೂ ಅಥಿರುಂಗಲ್​ನ ಸುಭಾಶ್​ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಪೂರಕ ಪೌಷ್ಟಿಕ ಆಹಾರ ವಿತರಣೆ ಎನ್‌ಜಿಒಗಳಿಗೆ ವಹಿಸಿ : ಶಶೀಲ್ ನಮೋಶಿ

ಕಲಬುರಗಿ : ರಾಜ್ಯದ ಎಲ್ಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ನೀಡುತ್ತಿರುವ 'ಪೂರಕ ಪೌಷ್ಟಿಕ ಆಹಾರ ವಿತರಣೆ' ಯೋಜನೆಯನ್ನು ಎನ್‌ಜಿಒಗಳಿಗೆ ವಹಿಸಬೇಕೆಂದು...

ಗಯಾನಾದಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆ: ಪ್ರಧಾನಿ ಮೋದಿ ಸಹಿ

ಜಾರ್ಜ್‍ಟೌನ್ : ಕೆರಿಬಿಯನ್ ರಾಷ್ಟ್ರ ಗಯಾನಾಕ್ಕೆ ಭಾರತವು ತನ್ನ ಔಷಧೀಯ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲಿದೆ ಮತ್ತುಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ...

ರೈತರ ಜಮೀನಿನ ಪಹಣಿ :ವಕ್ಫ್‌ ಹೆಸರು ಬೇಡ

ಬೆಂಗಳೂರು : ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆದುಹಾಕಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ...

ರೈತರ ಕಂಗೆಡಿಸಿದ ಡೀಮ್ಡ್ ಫಾರೆಸ್ಟ್

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕುತ್ತಿದ್ದರು. ಕೃಷಿ ಮಾಡುತ್ತಿದ್ದ ರೈತರೆಲ್ಲ ದಿಕ್ಕೆಟ್ಟು ಕೂತಿದ್ದರು. ಕೆಲವೆಡೆ ಸರಕಾರವೇ...