ಯಾತ್ರಾರ್ಥಿಗಳ ಸೇವೆಗೆ ನಿಯೋಜನೆಗೊಳ್ಳಲಿರುವ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಭಾಗವಾಗಿ ಪೊಲೀಸ್ ಸಿಬ್ಬಂದಿಗಳು ಸಾತ್ವಿಕ ಆಹಾರ, ಮದ್ಯಪಾನವನ್ನು ವರ್ಜನೆ ಮೊರೆ ಹೋಗುತ್ತಿದ್ದಾರೆ.
ಜನವರಿ ತಿಂಗಳಿನಿಂದ ಆರಂಭವಾಗುವ ಕುಂಭಮೇಳಕ್ಕೆ ಸಂಗಮ ನಗರಿ ಪ್ರಯಾಗ್ ರಾಜ್ ಸಜ್ಜುಗೊಳ್ಳುತ್ತಿದೆ.
ಯಾತ್ರಾರ್ಥಿಗಳ ಸೇವೆಗೆ ನಿಯೋಜನೆಗೊಳ್ಳಲಿರುವ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಭಾಗವಾಗಿ ಪೊಲೀಸ್ ಸಿಬ್ಬಂದಿಗಳು ಸಾತ್ವಿಕ ಆಹಾರ, ಮದ್ಯಪಾನವನ್ನು ವರ್ಜನೆ ಮೊರೆ ಹೋಗುತ್ತಿದ್ದಾರೆ.
ಜ.13 ರಿಂದ ಫೆ.26 ವರೆಗೆ ಮಹಾಕುಂಭಮೇಳ ನಡೆಯಲಿದೆ. ಹಿರಿಯ ಪೊಲೀಸ್ ಅಧೀಕ್ಷಕ (ಕುಂಭ) ರಾಜೇಶ್ ದ್ವಿವೇದಿ ಅವರು ಭದ್ರತೆಯನ್ನು ನಿರ್ವಹಿಸುವುದರ ಜೊತೆಗೆ ಯಾತ್ರಾರ್ಥಿಗಳಿಗೆ ಸ್ವಾಗತಾರ್ಹ ವಾತಾವರಣವನ್ನು ಬೆಳೆಸುವುದು ಪೊಲೀಸರ ಪ್ರಾಥಮಿಕ ಗಮನವಾಗಿದೆ ಎಂದು ಹೇಳಿದ್ದಾರೆ.
ಭಕ್ತರಿಗೆ ಆಹ್ಲಾದಕರ ಅನುಭವವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಮತ್ತು ಪೊಲೀಸರು ಆತ್ಮೀಯತೆಯಿಂದ ವರ್ತಿಸುತ್ತಾರೆ– ಕಾನೂನು ಪರಿಪಾಲಕರಾಗಿ ಮಾತ್ರವಲ್ಲದೆ ನಂಬಿಕೆಯ ಸೇವಕರಂತೆ ನಡೆದುಕೊಳ್ಳಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಾಕುಂಭಕ್ಕೆ ನಿಯೋಜನೆಗೊಳ್ಳಲಿರುವ ಪೊಲೀಸ್ ಸಿಬ್ಬಂದಿಗಳು ಮೇಳದ ಪ್ರದೇಶದಲ್ಲಿ ಗೊತ್ತುಪಡಿಸಿದ ಸೌಲಭ್ಯದಲ್ಲಿ ನಡವಳಿಕೆ-ಕೇಂದ್ರಿತ ತರಬೇತಿಯನ್ನು ಪಡೆಯುತ್ತಿದ್ದಾರೆ. ಶಿಷ್ಟಾಚಾರ ಮತ್ತು ಸಾರ್ವಜನಿಕ ಸೇವೆಯಲ್ಲಿ ಪಾಠಗಳನ್ನು ಕಲಿಸಲು ಬಾಹ್ಯ ತರಬೇತುದಾರರನ್ನು ಸಹ ಆಹ್ವಾನಿಸಲಾಗುತ್ತಿದೆ.
ಇಲ್ಲಿಯವರೆಗೆ 1,500 ಪೊಲೀಸ್ ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿದ್ದಾರೆ. ಮೇಳ ಪ್ರಾರಂಭವಾಗುವ ಹೊತ್ತಿಗೆ 40,000 ಸಿಬ್ಬಂದಿ ತರಬೇತಿಯನ್ನು ಪೂರ್ಣಗೊಳಿಸುತ್ತಾರೆ.