spot_img
spot_img

ಗೂಗಲ್‌ ಕ್ಯಾಲೆಂಡರ್​ನಲ್ಲಿ ಹೊಸ ಫೀಚರ್

spot_img
spot_img

Share post:

ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ತನ್ನ ಬಳಕೆದಾರರಿಗಾಗಿ ಕಾಲಕಾಲಕ್ಕೆ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇತ್ತೀಚೆಗೆ ಮತ್ತೊಂದು ವೈಶಿಷ್ಟ್ಯವನ್ನು ಹೊರತಂದಿದೆ.
ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್​ ಫೋನ್‌ಗಳಲ್ಲಿನ ಕ್ಯಾಲೆಂಡರ್ ಅಪ್ಲಿಕೇಶನ್‌ಗೆ ಸೇರಿಸಲಾಗಿದೆ. ಇದು ಕಾರ್ಯ ನಿರ್ವಹಣೆಯನ್ನು ಹೆಚ್ಚು ಸುಲಭಗೊಳಿಸುತ್ತದೆ. ಇನ್ನು ಮುಂದೆ ನೀವು ಸುಲಭವಾಗಿ ಕಾರ್ಯಗಳನ್ನು ಸಿದ್ಧಪಡಿಸಬಹುದಾಗಿದೆ. ಅವುಗಳನ್ನು ನೀವು ಎಡಿಟ್​ ಮಾಡಬಹುದು ಮತ್ತು ಸಬ್​ ಟಾಸ್ಕ್​ ಕ್ರಿಯೆಟ್​ ಮಾಡಿಕೊಳ್ಳಬಹುದು. ಅಂದರೆ, ಕಳೆದ ವರ್ಷ ವೆಬ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಫುಲ್ ಸ್ಕ್ರೀನ್ ಆಯ್ಕೆಯನ್ನು ಈಗ ಆಂಡ್ರಾಯ್ಡ್ ಬಳಕೆದಾರರು ಬಳಸಲು ಸಾಧ್ಯವಿದೆ.
Google ಕ್ಯಾಲೆಂಡರ್ ಹೋಂ ಸ್ಕ್ರೀನ್​ನಲ್ಲಿ ಬಳಕೆದಾರರ ಪ್ರೊಫೈಲ್‌ನ ಪಕ್ಕದಲ್ಲಿ ಚೆಕ್‌ಮಾರ್ಕ್ ಹೊಂದಿರುವ ಆಯ್ಕೆ ಇದೆ. ಇದರ ಮೇಲೆ ಕ್ಲಿಕ್ ಮಾಡಿದರೆ My Tasks, Travel, New List ಎಂಬ ಆಯ್ಕೆಗಳು ಗೋಚರಿಸುತ್ತವೆ. ಇದರಲ್ಲಿ ಮಾಡಬೇಕಾದ ಕಾರ್ಯಗಳು, ಪೂರ್ಣಗೊಂಡ ಕಾರ್ಯಗಳು ಮತ್ತು ಹೊಸ ಕಾರ್ಯಗಳ ವಿವರಗಳು ಒಂದೇ ಸ್ಥಳದಲ್ಲಿವೆ.
ಆದರೆ, ಪ್ರಸ್ತುತ ಈ ಸೌಲಭ್ಯವು Google Workspace ಬಳಕೆದಾರರು, Google Workspace ವೈಯಕ್ತಿಕ ಗ್ರಾಹಕರು ಮತ್ತು ವೈಯಕ್ತಿಕ Google ಖಾತೆಗಳನ್ನು ಹೊಂದಿರುವವರಿಗೆ ಮಾತ್ರ ಲಭ್ಯ.
ಈ ಸೌಲಭ್ಯವನ್ನು ಈಗಾಗಲೇ ಹೊರತರಲಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎಂದು ಗೂಗಲ್​ ಹೇಳಿದೆ.
ಇನ್ನು ಗೂಗಲ್​ ಹೊರತರುತ್ತಿರುವ ಹೊಚ್ಚ ಹೊಸ ಫೀಚರ್​ ಬಳಕೆದಾರರಿಗೆ ಬಹಳ ಅನುಕೂಲವಾಗಲಿದೆ. ಇದಕ್ಕೆ​ ‘ಲೈವ್​ ಥ್ರೆಟ್​ ಡಿಟೆಕ್ಷನ್’​ ಎಂದು ಹೆಸರಿಡಲಾಗಿದೆ. ಇದು​ ಬ್ಯಾಕ್​ಗ್ರೌಂಡ್​ನಲ್ಲಿ ಕೆಲಸ ಮಾಡುತ್ತಲೇ ನಿಮ್ಮ ಸಿಸ್ಟಮ್​ ಅಥವಾ ಸಾಧನದಲ್ಲಿ ಯಾವುದೇ ಮಾಲ್​ವೇರ್​ ಪತ್ತೆಯಾದರೆ ರಿಯಲ್​ ಟೈಂನಲ್ಲಿ ಎಚ್ಚರಿಕೆ ನೀಡುತ್ತದೆ. ನಿಮ್ಮ ಸಾಧನ ಅಥವಾ ಸ್ಮಾರ್ಟ್​ಫೋನ್​ಗಳಲ್ಲಿ ವೈರಸ್​ ಅಥವಾ ಮಾಲ್​ವೇರ್​ ಆ್ಯಕ್ಟಿವಿಟಿಯನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡಲು ಗೂಗಲ್ ಈ ಫೀಚರ್​ ಹೊರತರುತ್ತಿದೆ. ಸದ್ಯ ಲೈವ್ ಥ್ರೆಟ್ ಡಿಟೆಕ್ಷನ್ ಫೀಚರ್​ ಪಿಕ್ಸೆಲ್​ 6 ಮತ್ತು ಅದರ ಲೈನ್​ಅಪ್​ ಮಾಡೆಲ್​ಗಳಲ್ಲಿ ಲಭ್ಯ. ಮುಂದಿನ ತಿಂಗಳಲ್ಲಿ ಒನ್‌ಪ್ಲಸ್, ಸ್ಯಾಮ್‌ಸಂಗ್, ಒಪ್ಪೋ ಮತ್ತು ಇತರ ಸ್ಮಾರ್ಟ್​ಫೋನ್​ಗಳಿಗೂ ದೊರೆಯಲಿದೆ ಎಂದು ಗೂಗಲ್​ ಹೇಳಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...