ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 9ನೇ ವಾರದಲ್ಲಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಲ್ಲಿ ಎಲ್ಲವೂ ಬದಲಾಗಿ ಹೋಗಿದೆ. ಹೌದು 9ನೇ ವಾರದಲ್ಲಿ ಬಿಗ್ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಒಂದು ಕಡೆ ಮಹಾರಾಜ ಮಂಜಣ್ಣ, ಮತ್ತೊಂದು ಕಡೆ ಯುವರಾಣಿ ಮೋಕ್ಷಿತಾ ಆ ಪಟ್ಟಕ್ಕಾಗಿ ಇಬ್ಬರು ಕಿತ್ತಾಡಿಕೊಂಡಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಯುವರಾಣಿ ಮೋಕ್ಷಿತಾ ಅವರನ್ನು ನೋಡಿದಾಗ ಎಲ್ಲ ತಲೆ ಬಾಗಿ ನಮಸ್ಕಾರ ಮಾಡಬೇಕು ಅಂತ ಗೋಲ್ಡ್ ಸುರೇಶ್ ಗೌತಮಿ, ತ್ರಿವಿಕ್ರಮ್, ಧನರಾಜ್ ಮುಂದೆ ಹೇಳುತ್ತಾ ಇರುತ್ತಾರೆ. ಆಗ ಗೌತಮಿ ಆಗೋದಿಲ್ಲ. ಯಾರು ಹತ್ತಿರ ತಲೆ ಬಗ್ಗಿಸಲಿ, ತಲೆ ಬಗ್ಗಿಸಿದ ದಿನ ನಾವು ಅವರನ್ನು ಒಪ್ಪಿಕೊಂಡಂತೆ ಲೆಕ್ಕ ಅಂತ ಹೇಳಿದ್ದಾರೆ.
ಆಗ ಮಂಜಣ್ಣ ನಾಲಿಗೆಗೆ ಮೆತ್ತಿಕೊಂಡು, ನರಿಯ ಕಣ್ಣೀರು ಹಾಕಿ ಆಡಿದ್ದು ಆಟವಲ್ಲ. ನಾನು ಕೊಟ್ಟಿರುವ ಭಿಕ್ಷೆ ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ಮೋಕ್ಷಿತಾ ನೀವು ಕೊಟ್ಟಿದ್ದಲ್ಲ ಬಿಗ್ಬಾಸ್ ಕೊಟ್ಟಿರೋ ಭಿಕ್ಷೆ ಅಂತ ಜೋರಾಗಿ ಕಿರುಚಾಡಿದ್ದಾರೆ. ಸದ್ಯ ಇಂದಿನ ಸಂಚಿಕೆಯಲ್ಲಿ ಈ ಬಗ್ಗೆ ಸಂಪೂರ್ಣವಾಗಿ ತಿಳಿದು ಬರಲಿದೆ.