ಕೆಕೆಆರ್‌ಟಿಸಿ 100 ಡ್ರೈವರ್ ಹುದ್ದೆಗಳು ಹಾಗೂ 50 ಟೆಕ್ನಿಕಲ್ ಅಸಿಸ್ಟಂಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು, ಅರ್ಹರು ಮತ್ತು ಆಸಕ್ತರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳಲ್ಲ. ಬದಲಾಗಿ ತುರ್ತಾಗಿ ನೇಮಕ ಮಾಡುತ್ತಿರುವ ಅಗತ್ಯ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ. ಆಸಕ್ತರು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದ ವಿವಿಧ ಘಟಕಗಳಲ್ಲಿ ತುರ್ತಾಗಿ ಅಗತ್ಯ ಇರುವ ಚಾಲಕರ ಹುದ್ದೆಗಳು ಹಾಗೂ ತಾಂತ್ರಿಕ ಸಹಾಯಕರ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ.
ಆಸಕ್ತರು ಈ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಚಾಲಕರ ಹುದ್ದೆಗಳನ್ನು ಬೀದರ್-1, ಬೀದರ್-2, ಭಾಲ್ಕಿ, ಔರಾದ್, ಬಸವಕಲ್ಯಾಣ ಮತ್ತು ಹುಮನಾಬಾದ್ ಘಟಕಗಳ ಬಸ್ ಚಾಲನೆಗೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ.
ಈ ಮೇಲಿನ ಸದರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನವನ್ನು ಕೆಳಗಿನ ದಿನಾಂಕಗಳನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ 02 ರಿಂದ 04 ರವರೆಗೆ ಚಾಲಕ ಹುದ್ದೆಗೆ ನೇರ ಸಂದರ್ಶನ.
ಡಿಸೆಂಬರ್ 06 ರಿಂದ 07 ರವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ನೇರ ಸಂದರ್ಶನ.
ಅರ್ಹರು ಮತ್ತು ಆಸಕ್ತರು ಈ ಮೇಲಿನ ದಿನಾಂಕಗಳಂದು ವಿಳಾಸ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ಹಳೆ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯ ಸಮಯದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.
ಅರ್ಹತೆಗಳು
– ಚಾಲಕ ಹುದ್ದೆಗೆ SSLC ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಮುಕ್ತ ವಿವಿಯಿಂದ ಪಡೆದ ಎಸ್‌ಎಸ್‌ಸಿ 500 ಅಂಕಗಳ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.
– ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು.
– ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್ ಹೊಂದಿರಬೇಕು.
ಐಟಿಐ ಅಥವಾ ಡಿಪ್ಲೊಮ ಶಿಕ್ಷಣವನ್ನು ಮೆಕ್ಯಾನಿಕಲ್ ಬ್ರ್ಯಾಂಚ್‌ನಲ್ಲಿ ಪಡೆದಿದ್ದು, ಮೆಕ್ಯಾನಿಕ್ ಕೆಲಸದ ಅನುಭವ ಇರುವವರನ್ನು ನೇಮಿಸಿಕೊಳ್ಳಲಾಗುತ್ತದೆ.
ನೇರ ಸಂದರ್ಶನಕ್ಕೆ ಹಾಜರಾಗುವವರು ಹುದ್ದೆಗಳಿಗೆ ಅರ್ಹತೆಯ ಪ್ರಮಾಣಪತ್ರಗಳು, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ (HTV) ಚಾಲನಾ ಪರವಾನಿಗೆ, ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್, ಮೆಡಿಕಲ್ ಸರ್ಟಿಫಿಕೇಟ್ ಅನ್ನು ತೆಗೆದುಕೊಂಡು ಹಾಜರಾಗುವುದು.