ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಆರ್ಟಿಐ ಕಾರ್ಯಕರ್ತ ಗಂಗರಾಜು ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಯಲ್ಲಿ ಬುಧವಾರ ವಿಚಾರಣೆಗೆ ಹಾಜರಾದರು. ನಂತರ ಸುದ್ದಿಗಾರರ ಜತೆ ಮಾತನಾಡಿ, ಸರ್ಚ್ ವಾರಂಟ್ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್ ಅವರಿಂದ ಮಾಹಿತಿ ಸೋರಿಕೆ ಆಗಿತ್ತು.
ಸಚಿವ ಬೈರತಿ ಸುರೇಶ್ ಅವರು ಮುಡಾದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಮತ್ತು ನಟೇಶ್ಗೆ ಲೋಕಾಯುಕ್ತ ಸರ್ಚ್ ವಾರಂಟ್ ಬಗ್ಗೆ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕಾಗಿ 8 ಕೋಟಿ ರೂಪಾಯಿ ಡೀಲ್ ಕೂಡ ನಡೆದಿದೆ ಎಂದು ತಿಳಿಸಿದ್ದಾರೆ.
ಮುಡಾದಲ್ಲಿ ಶೋಧ ನಡೆಸುವುದಕ್ಕೆ ಲೋಕಾಯುಕ್ತ ಪಡೆದಿದ್ದ ಸರ್ಚ್ ವಾರಂಟ್ ಸೋರಿಕೆಗೆ 8 ಕೋಟಿ ರೂ. ಡೀಲ್ ನಡೆದಿತ್ತು. ಆ ಬಗ್ಗೆ ಮಾಹಿತಿಯ ದಾಖಲೆಯನ್ನು ಇ.ಡಿಗೆ ಸಲ್ಲಿಸಿದ್ದೇನೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ತಿಳಿಸಿದ್ದಾರೆ.ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಯಲ್ಲಿ ಬುಧವಾರ ಅವರು ವಿಚಾರಣೆಗೆ ಹಾಜರಾದರು.
ನಂತರ ಸುದ್ದಿಗಾರರ ಜತೆ ಮಾತನಾಡಿ,”ಸರ್ಚ್ ವಾರಂಟ್ ಬಗ್ಗೆ ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್ ಅವರಿಂದ ಮಾಹಿತಿ ಸೋರಿಕೆಯಾಗಿತ್ತು. ಸಚಿವ ಬೈರತಿ ಸುರೇಶ್ ಅವರು ಮುಡಾದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಮತ್ತು ನಟೇಶ್ಗೆ ಲೋಕಾಯುಕ್ತ ಸರ್ಚ್ ವಾರಂಟ್ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕಾಗಿ 8 ಕೋಟಿ ರೂ. ಡೀಲ್ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ದಾಖಲೆ ನನ್ನ ಬಳಿಯಿದೆ. ಸೋರಿಕೆ ಸಂಬಂಧ ರಾಜ್ಯಪಾಲರಿಗೂ ದೂರು ಕೊಟ್ಟಿದ್ದೇನೆ,” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಹಂಚಿಕೆಯಾಗಿದ್ದ 14 ಬದಲಿ ನಿವೇಶನಗಳ ದಾಖಲೆಗಳು ನಾಪತ್ತೆಯಾಗಿರುವ ಸಂಬಂಧ ದೂರು ಕೊಟ್ಟಿದ್ದ ಗಂಗರಾಜು ಅವರು ಅಕ್ಟೋಬರ್ 28ರಂದು ಇ.ಡಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ ಸುಮಾರು 1,200 ಪುಟಗಳ ದಾಖಲೆ ಸಲ್ಲಿಸಿದ್ದರು. ಆಗ ಇ.ಡಿ. ಅಧಿಕಾರಿಗಳು ಗಂಗರಾಜು ಅವರಿಂದ ಪ್ರಾಥಮಿಕ ಮಾಹಿತಿಯನ್ನಷ್ಟೇ ಸಂಗ್ರಹಿಸಿದ್ದರು. ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿ ನವೆಂಬರ್ 27ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿ ಮಹತ್ವದ ದಾಖಲೆಪತ್ರಗಳ ಸಮೇತ ಹೇಳೀಕೆ ದಾಖಲಿಸಿದರು.