ಇದು ತಂತ್ರಜ್ಞಾನದ ಯುಗ. ಹಳ್ಳಿ ಹಳ್ಳಿಗಳಿಗೂ ಈಗ ಅಂತರ್ಜಾಲ ಹರಡಿಕೊಂಡಿದೆ. ಅಂಗೈನಲ್ಲಿಯೇ ಈಗ ಜಗತ್ತು ಬಂದು ಕೂತಿದೆ. ಎಐ ಎಂಬ ಅತ್ಯಾಧುನಿಕ ತಂತ್ರಜ್ಞಾನ ಇಂದು ಜಗತ್ತನ್ನು ಆಳಲು ಮುಂದಡಿ ಇಟ್ಟಿದೆ. ಎಲ್ಲದಕ್ಕೂ ಮನುಷ್ಯ ಈಗ ಮೊಬೈಲ್ ಹಾಗೂ ಇಂಟರ್ನೆಟ್ ಮೇಲೆ ಅವಲಂಬಿತನಗಿದ್ದಾನೆ.
ಇಂಟರ್ನೆಟ್,ಮೊಬೈಲ್ ಇಲ್ಲದ ಊರು ಅಂದ್ರೆ ಅದು ಯಾವುದೋ ಗುಡ್ಡುಗಾಡು ಪ್ರದೇಶಗಳಲ್ಲಿ ತೀರ ಹಿಂದಿನ ಬುಡಕಟ್ಟು ಜನಾಂಗದವರು ಸೇರಿದ ಪ್ರದೇಶ ಇರಬೇಕು ಎಂಬ ಭಾವನೆಯೂ ಗಟ್ಟಿಯಾಗಿ ಕುಳಿತಿದೆ. ಆದ್ರೆ ನೆನಪಿರಲಿ ಅಮೆರಿಕಾದ ಈ ಒಂದು ಪಟ್ಟಣದಲ್ಲಿ ಒಂದೇ ಒಂದು ಮೊಬೈಲ್ ಫೋನ್ ರಿಂಗಣಿಸುವುದಿಲ್ಲ.
ವಾಷಿಂಗ್ಟನ್ ಡಿಸಿಯಿಂದ ಕೇವಲ 4 ಗಂಟೆ ಪ್ರಯಾಯಣದಲ್ಲಿ ತಲುಪುವ ಈ ಒಂದು ನಗರದಲ್ಲಿ ಇಂದಿಗೂ ಕೂಡ ಅಲ್ಲಿ ಒಂದೇ ಒಂದು ಫೋನಿನ ಕರೆಗಂಟೆ. ಇಂಟರ್ನೆಟ್ನ ಜಾಲ ಇದ್ಯಾವುದು ಕಂಡು ಬರುವುದಿಲ್ಲ.
ಅಮೆರಿಕಾ ಅಂದರೇನೆ ತಂತ್ರಜ್ಞಾನಕ್ಕೆ ಆಧುನಿಕತೆಗೆ, ಹೊಸ ಆವಿಷ್ಕಾರಗಳಿಗೆ ಇನ್ನೊಂದು ಹೆಸರು.
ಅಂತಹ ದೇಶದ ಒಂದು ನಗರದಲ್ಲಿ ಈ ಮೇಲೆ ಹೇಳಿದ ಯಾವ ವ್ಯವಸ್ಥೆಯೂ ಇಲ್ಲ. ಆ ನಗರದ ಹೆಸರು ಪಶ್ಚಿಮ ವರ್ಜಿನಿಯಾದ ಗ್ರೀನ್ ಬ್ಯಾಂಕ್. ಈ ಗ್ರೀನ್ ಬ್ಯಾಂಕ್ನಲ್ಲಿ ಇಂದಿನವರೆಗೂ ಅಂತರ್ಜಾಲ ವ್ಯವಸ್ಥೆಯಿಲ್ಲ, ಇಲ್ಲಿ ಮೈಕ್ರೋವೇವ್ ಬಳಸುವಂತಿಲ್ಲ. ಮೊಬೈಲ್ನ್ನು ಬಳಸುವಂತೆಯೇ ಇಲ್ಲ ಇಲ್ಲಿಗೆ ಭೇಟಿ ನೀಡುವ ಯಾವುದೇ ಪ್ರವಾಸಿಗರು ಅದರ ಪರಂಪರೆಯನ್ನು ಪಾಲನೆ ಮಾಡಲೇಬೇಕು.
ಈ ಒಂದು ಪಟ್ಟಣ ಎರಡು ಚರ್ಚಗಳನ್ನು ಹೊಂದಿದೆ, ಒಂದು ಪ್ರೈಮರಿ ಸ್ಕೂಲ್, ಒಂದು ಲೈಬ್ರರಿ ಹಾಗೂ ವಿಶ್ವದ ಅತಿದೊಡ್ಡ ಸ್ಟೇರೆಬಲ್ ರೆಡಿಯೋ ಟೆಲಿಸ್ಕೋಪವನ್ನು ಹೊಂದಿದೆ. ಇದೇ ಕಾರಣದಿಂದ ಇಲ್ಲಿ ಇಂಟರ್ನೆಟ್ನ್ನು ಬಳಸುವುದಿಲ್ಲ
ಗ್ರೀನ್ ಬ್ಯಾಂಕ್ ಯುನೈಟೆಡ್ ಸ್ಟೇಟ್ಸ್ನ ಒಂದು ಪಟ್ಟಣ 1958ರಲ್ಲಿ ಈ ಒಂದು ನಗರಿ33 ಸಾವಿರ ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೃಷ್ಟಿಯಾಯ್ತು. ಇದನ್ನು ರಾಷ್ಟ್ರೀಯ ರೆಡಿಯೋ ನಿಶ್ಯಬ್ದ ವಲಯ (NRQZ) ಎಂದು ಗುರುತಿಸಲಾಯ್ತು. ಈ ಒಂದು ಕಾರಣಕ್ಕಾಗಿ ಟೆಲಿಸ್ಕೋಪ್ ಆಪರೇಷನ್ಗಳಿಗೆ ಯಾವುದೇ ಅಡ್ಡಿಯಾಗಬಾರದು ಎಂದು ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳನ್ನು ಸೃಷ್ಟಿಸುವ ವೈಫೈ, ಇಂಟರ್ನೆಟ್, ಮೊಬೈಲ್ ಮೈಕ್ರೋವೇವ್ ಓವನ್ಸ್ ಇವೆಲ್ಲವುಗಳಿಗೆ ಇಲ್ಲಿ ನಿಷೇಧವಿದೆ.
ಇಡೀ ಗ್ರೀನ್ ಬ್ಯಾಂಕ್ನ್ನೇ ರೇಡಿಯೋ ಬಾಹ್ಯಾಕಾಶದಿಂದ ಬರುವ ರೇಡಿಯೋ ತರಂಗಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿಯೇ ಸೃಷ್ಟಿಸಲಾಗಿದೆ. ವೈಫೈ, ಸೆಲ್ಫೋನ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್ಗಳು ಟೆಲಿಸ್ಕೋಪ್ ಕಾರ್ಯಕ್ಷಮತೆಗೆ ದಕ್ಕೆ ತರುವ ಸಾಧ್ಯತೆ ಹೆಚ್ಚು ಹೀಗಾಗಿಯೇ ಇಲ್ಲಿ ಮೊಬೈಲ್ ಫೋನ್ಗಳು, ಮೈಕ್ರೋವೇವ್ ಹಾಗೂ ಕೆಲವು ವಾಹನಗಳಿಗೂ ಕೂಡ ನಿಷೇಧವಿದೆ.