spot_img
spot_img

ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕ: ಚಂದ್ರಶೇಖರನಾಥ ಸ್ವಾಮೀಜಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಅಬ್ಬಾಸ್ ಅವರು ನೀಡಿದ ದೂರಿನ ಆಧಾರದ ಮೇಲೆ

ಚಂದ್ರಶೇಖರನಾಥ ಸ್ವಾಮೀಜಿ ಅವರು ನಮ್ಮ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಮತದಾನದ ಹಕ್ಕಿಗೆ ಕೈ ಹಾಕಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಸೈಯ್ಯದ್ ಅಬ್ಬಾಸ್ ದೂರು ನೀಡಿದ್ದರು.

‘ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಡಿಸೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರಿಂದ ನೋಟಿಸ್ ಜಾರಿ ಮಾಡಿದ್ದಾರೆ.

ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸ್ವಾಮೀಜಿ, ‘ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ.

ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು. ಬೇರೆಯವರ ಭೂಮಿಯನ್ನು ಕಸಿದುಕೊಳ್ಳುವುದು ಧರ್ಮವಲ್ಲ. ಮೊದಲು ವಕ್ಫ್ ಬೋರ್ಡ್ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು.

ವಿವಾದ ದೊಡ್ಡದಾಗುತ್ತಿದ್ದಂತೆ ಚಂದ್ರಶೇಖರನಾಥ ಸ್ವಾಮೀಜಿ ಅವರು ವಿಷಾದ ವ್ಯಕ್ತಪಡಿಸಿದ್ದರು. ಅದು ಬಾಯಿ ತಪ್ಪಿ ಆಡಿದ ಮಾತು. ಹಾಗೆ ಹೇಳಬಾರದಾಗಿತ್ತು. ಮುಸ್ಲಿಮರು ಭಾರತೀಯರೇ ಹೊರತು ಬೇರೆ ಯಾರೂ ಅಲ್ಲ. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದರು.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ANCIENT WELL DISCOVERED – ಸಂಭಾಲ್ನಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆ

Sambhal (Uttar Pradesh) News: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆಯುತ್ತಿರುವ 'ರಹಸ್ಯಗಳ' ಉತ್ಖನನದಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆಯಾಗಿದೆ. ಇದು ಯಾತ್ರಾರ್ಥಿಗಳ ದಾಹ ತಣಿಸುತ್ತಿದ್ದ ತೀರ್ಥಗಂಗೆ...

KARNATAKA INVESTMENT PROJECTS – ₹9,823 ಕೋಟಿ ಹೂಡಿಕೆಯ ಯೋಜನೆಗಳಿಗೆ ಸಿಎಂ ಅಸ್ತು

Bangalore News: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು 9,823 ಕೋಟಿ ರೂ ಬಂಡವಾಳ ಹೂಡಿಕೆಯ ಒಂಬತ್ತು ಪ್ರಸ್ತಾವನೆಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಒಪ್ಪಿಗೆ...

YEAR ENDER 2024 – ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗಳು, ಮೇಲಾಟಗಳ ಮೆಲುಕು

Bangalore News: 2024ರಲ್ಲಿ ಲೋಕಸಭೆ ಚುನಾವಣೆ, ನಂತರ ನಡೆದ ಉಪ ಚುನಾವಣೆಗಳಿಂದಾಗಿ ಕರ್ನಾಟಕ ಸಾಕಷ್ಟು ಅಚ್ಚರಿ, ಮೇಲಾಟಗಳನ್ನು ಕಂಡಿದೆ. 2023 ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದ್ದು,...

POOJA TO KUMARAPADA – ಪೂರ್ವಸಂಪ್ರದಾಯದಂತೆ ಕುಮಾರ ಪರ್ವತದಲ್ಲಿ ಕುಮಾರಪಾದಕ್ಕೆ ಪೂಜೆ

Subrahmanya (South Kannada) News: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ...