spot_img
spot_img

ಭಾರತದ ಸೌರ ಶಕ್ತಿಗೆ ಆನೆ ಬಲ ನೀಡುವ ಖಾವ್ಡಾದ ಸ್ಥಾವರ

spot_img
spot_img

Share post:

ಗುಜರಾತ್​: ಗುಜರಾತ್​ನ ಖಾವ್ಡಾದಲ್ಲಿ 538 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ಈ ಅತ್ಯಂತ ಬೃಹತ್​​ ಸೌರ ಘಟಕದಲ್ಲಿ 60 ಮಿಲಿಯನ್​ ಸೌರ ಫಲಕ ಹಾಗೂ 770 ಗಾಳಿ ಟರ್ಬೈನ್​ಗಳಿವೆ. ಈ ಸ್ಥಾವರದ ಗಾತ್ರ ಮೆಗಾಸಿಟಿ ಮುಂಬೈನಷ್ಟಿದೆ.

ಪಾಕಿಸ್ತಾನದ ಗಡಿಗೆ ಹೊಂದಿಕೊಂಡು ನಿರ್ಮಾಣ ಆಗಿರುವ ಜಗತ್ತಿನ ಅತ್ಯಂತ ದೊಡ್ಡ ನವೀಕರಿಸಬಹುದಾದ ಶಕ್ತಿ ಘಟಕ ಭಾರತದ ಪಶ್ಚಿಮ ಬಯಲಿನಲ್ಲಿದೆ. ಈ ಪ್ರದೇಶದಲ್ಲಿ ಪ್ರಜ್ವಲಿಸುವ ಸೂರ್ಯ, ದೊಡ್ಡದಾದ ಗಾಳಿಯನ್ನು ಶಕ್ತಿಯಾಗಿ ರೂಪಿಸುವ ಸೌರ ಫಲಿಕಗಳು ಗಾಳಿ ಟರ್ಬೈನ್​ಗಳನ್ನು ನಿರ್ಮಾಣ ಮಾಡಲಾಗಿದೆ. ಈ ನವೀಕರಿಸಬಹುದಾದ ಸೌರ ಶಕ್ತಿ ಬಳಕೆಗೆ ಉತ್ತೇಜಿಸಲಾಗುತ್ತಿದೆ.

ಗುಜರಾತ್​ನ ಖಾವ್ಡಾದಲ್ಲಿ 538 ಚದರ ಕಿ.ಮೀ ವಿಸ್ತರ್ಣದಲ್ಲಿ ಹರಡಿರುವ ಈ ಅತ್ಯಂತ ಬೃಹತ್​​ ಸೌರ ಘಟಕದಲ್ಲಿ 60 ಮಿಲಿಯನ್​ ಸೌರ ಫಲಕ ಹಾಗೂ 770 ಗಾಳಿ ಟರ್ಬೈನ್​ಗಳಿವೆ. ಇದರ ಗಾತ್ರ ಮೆಗಾಸಿಟಿ ಮುಂಬೈನಷ್ಟಿದೆ.

ಒಳ್ಳೆಯ ಬೆಳವಣಿಗೆ ಎಂಬ ಘೋಷ ವಾಕ್ಯದಲ್ಲಿ ಕೆಲವರು ಇದರ ನಿರ್ವಹಣೆ, ಮೇಲ್ವಿಚಾರಣೆ ನಡೆಸುತ್ತಾರೆ. ಈ ನವೀಕರಿಸಬಹುದಾದ ಶಕ್ತಿ ಮೂಲದಿಂದಾಗಿ ಇಂದು ಇಂದು, ನಾವು 11 ಗಿಗಾವ್ಯಾಟ್‌ಗಳವರೆಗೆ ವಿದ್ಯುತ್ ಉತ್ಪಾದಿಸಬಹುದು. ಇದು ಫ್ರಾನ್ಸ್‌ನ ಟೋಟಲ್ ಎನರ್ಜಿಸ್ ಶೇ20 ರಷ್ಟು ಪಾಲನ್ನು ಹೊಂದಿದೆ ಎಂದು ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿಯ ಉಪಾಧ್ಯಕ್ಷ ಮಣಿಂದರ್ ಸಿಂಗ್ ಪೆಂತಲ್​ ತಿಳಿಸಿದ್ದಾರೆ.

2029ರಲ್ಲಿ ನಾವು 30 ಗಿಗಾವ್ಯಾಟ್​ ಉತ್ಪಾದನೆ ಮಾಡುತ್ತೇವೆ. ಈ ಹೊತ್ತಿನಲ್ಲಿ ಭಾರತವೂ ಮತ್ತೊಂದು ದಾಖಲೆ ಮುರಿಯಲಿದೆ. ಅಂದೇಂದರೆ, ಚೀನಾದ 18 ಗಿಗಾವ್ಯಾಟ್​ನ ಮೂರು ಗೋರ್ಜಸ್ ಜಲವಿದ್ಯುತ್ ಅಣೆಕಟ್ಟನ್ನು ಮೀರಿದ ವಿಶ್ವದ ಅತ್ಯಂತ ಶಕ್ತಿಶಾಲಿ ವಿದ್ಯುತ್ ಉತ್ಪಾದನಾ ತಾಣವಾಗಿ ಖಾವ್ಡಾ ರೂಪುಗೊಳ್ಳಲಿದೆ ಎಂದರು.

ಅಂತಾರಾಷ್ಟ್ರೀಯ ಶಕ್ತಿ ಏಜೆನ್ಸಿಯ ಈ ವರ್ಷದ ವರದಿ ಅನುಸಾರ, ಭಾರತದ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯ 2022ಕ್ಕೆ ಹೋಲಿಕೆ ಮಾಡಿದರೆ 2030ಕ್ಕೆ ಮೂರು ಪಟ್ಟು ಹೆಚ್ಚಲಿದ್ದು, ಅತ್ಯಂತ ಬೃಹತ್​ ನವೀಕರಣ ಶಕ್ತಿ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಕಾಯ್ದುಕೊಳ್ಳಲಿದೆ.

ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ 2070ರ ಹೊತ್ತಿಗೆ ಇಂಗಾಲದ ತಟಸ್ಥವಾಗಿರಲು ಪ್ರತಿಜ್ಞೆ ಮಾಡಲಿದೆ. ಈ ಸ್ಥಾವರದಿಂದ 2030ಕ್ಕೆ 500ಗಿಗಾ ವ್ಯಾಟ್​ ಶಕ್ತಿ ಉತ್ಪಾದನೆಯಾಗಲಿದ್ದು, ಸೌರ ಶಕ್ತಿಯಿಂದಲೇ 300 ಗಿಗಾ ವ್ಯಾಟ್​ ಶಕ್ತಿ ಲಭಿಸಲಿದೆ.

ಜಗತ್ತಿನಲ್ಲಿ ವೇಗವಾಗಿ ವಿಸ್ತರಣೆಯಾಗುತ್ತಿರುವ ಜನಸಂಖ್ಯೆ, ಆರ್ಥಿಕ ಬೆಳವಣಿಗೆ ಮತ್ತು ಕ್ಷಿಪ್ರ ನಗರೀಕರಣದ 2000ನೇ ಇಸ್ವಿಯಿಂದ ಇಂಧನದ ಬೇಡಿಕೆ ಹೆಚ್ಚಿದ್ದು, ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇದರ ಬೇಡಿಕೆ ಹೆಚ್ಚಿದೆ.

ದೇಶಾದ್ಯಂತ ಸೌರ ಕ್ರಾಂತಿಗೆ ಮುಂದಾಗುವಂತೆ, ಮನೆಗಳ ಮೇಲೆ ಸೌರಫಲಕ ಅಳವಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದು ನಮ್ಮ ಉತ್ಪಾದನೆಗೆ ಸಹಾಯಕವಾಯಿತು. ಏಕೆಂದರೆ, ಸಣ್ಣ ಘಟಕಗಳಿಗಿಂತ ದೊಡ್ಡ ಘಟಕಗಳೊಂದಿಗೆ ದೇಶದ ಬೇಸ್‌ಲೋಡ್ ಉತ್ಪಾದನೆ ಗಾತ್ರ ಸುಲಭ ಮತ್ತು ಶೀಘ್ರವಾಯಿತು ಎಂದು ಅದಾನಿ ಗ್ರೀನ್ ಎನರ್ಜಿ ಸಿಇಒ ಸಾಗರ್ ಅದಾನಿ ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಈ ಸ್ಥಾವರದ ಮೇಲೆ ಅಮೆರಿಕ ದೋಷಾರೋಪಣೆ ಹೊರೆಸಿದ್ದು, ಸಮಸ್ಯೆ ಹೆಚ್ಚಿಸಿದೆ. ಉದ್ಯಮಿ ಸಂಸ್ಥಾಪಕ ಗೌತಮ್ ಅದಾನಿ ಮತ್ತು ಅವರ ಅಧಿನ ಅಧಿಕಾರಗಳ ಮೇಲೆ ವಂಚನೆ ಆರೋಪದ ಬಳಿಕ ಟೋಟಲ್ ಎನರ್ಜಿಸ್ ಸಂಸ್ಥೆಯಲ್ಲಿನ ಎಲ್ಲ ಹೊಸ ಹೂಡಿಕೆಗಳನ್ನು ಸ್ಥಗಿತಗೊಂಡಿದೆ. ಆದರೆ, ಸಂಸ್ಥೆ ಇದನ್ನು ನಿರಾಕರಿಸಿದ್ದು, ಸೌರ ಶಕ್ತಿಯ ಮತ್ತಷ್ಟು ಉತ್ತೇಜನವನ್ನು ಮುಂದುವರೆಸಿದೆ.

ನವೀಕರಣ ಶಕ್ತಿ ಉತ್ಪಾದನೆಗೆ ಅತಿ ದೊಡ್ಡ ಪ್ರಮಾಣದ ಕೇಂದ್ರೀಕೃತ ದೊಡ್ಡ ಸ್ಥಳಗಳ ಅಗತ್ಯವಿದೆ. 200 ಯೋಜನೆಗಳ ಮೂಲಕ ತಲಾ 50 ಮೆಗಾವ್ಯಾಟ್‌ ಉತ್ಪಾದನೆ ಮಾಡಬಹುದು. ಅದರಿಂದ ಭಾರತಕ್ಕೆ ಏನೂ ಆಗದು. ಈ ಹಿನ್ನೆಲೆ ಅದಾನಿ 2030 ರ ವೇಳೆಗೆ 35 ಬಿಲಿಯನ್​ ಡಾಲರ್​ ಶಕ್ತಿ ಉತ್ಪಾದನೆಯ ಪ್ರತಿಜ್ಞೆ ಮಾಡಿದೆ.

ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಮಾರುಕಟ್ಟೆ ವಿಶ್ಲೇಷಕರೊಬ್ಬರು, ಇದು ಪ್ರಾಮಾಣಿಕ ಆಟಗಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಜೊತೆಗೆ ಇದು ಅದಾನಿ ನಿಧಿ ಸಂಗ್ರಹಿಸವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಸಮೂಹವು ಆಂಧ್ರಪ್ರದೇಶ ರಾಜ್ಯದಲ್ಲಿ 10 ಗಿಗಾವ್ಯಾಟ್​ ಸೌರ ಫಲಕಗಳಿಗೆ 10 ಬಿಲಿಯನೇರ್​ ಡಾಲರ್​​ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದೆ.

ಸೌರ ಶಕ್ತಿಯ ವೆಚ್ಚವು ಕಲ್ಲಿದ್ದಲು ಆಧಾರಿತ ಸ್ಥಾವರಗಳಿಗಿಂತ ಸ್ಪರ್ಧಾತ್ಮಕವಾಗಿ ಇಳಿದಿದೆ. ಇದು ಭಾರತದ ಶೇ70ರಷ್ಟು ವಿದ್ಯುತ್ ಉತ್ಪಾದಿಸುತ್ತದೆ. ಇದು ಒಳ್ಳೆಯ ಬೆಳವಣಿಗೆ ಎಂದು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ನಿರ್ದೇಶಕ ಅಜಯ್ ಮಾಥುರ್ ತಿಳಿಸಿದ್ದಾರೆ.

ಸೌರ ಫಲಕಗಳ ಮೇಲಿನ ಆರಂಭಿಕ ಹೂಡಿಕೆ ಹೆಚ್ಚಾದರೂ, ಪ್ರತಿ ಕಿಲೋವ್ಯಾಟ್ ಗಂಟೆಗೆ ವಿದ್ಯುತ್ ಬೆಲೆಗಳು ಕಲ್ಲಿದ್ದಲು ಸ್ಥಾವರಗಳಿಗಿಂತ ಒಂದೇ ಅಥವಾ ಕಡಿಮೆಯಾಗಿದೆ. ಇದು ಪರಿವರ್ತನೆಯ ಭಾಗವಾಗುವುದು. ಆದರೆ, ಇದರಲ್ಲೂ ಕೆಲವು ಅಡಚಣೆಗಳಿವೆ ಎಂದು ಭಾರತ್​​ ಲೈಟ್​ ಅಂಡ್​ ಪವರ್​ನ ತೇಜ್​ಪ್ರೀತ್​ ಚೋಪ್ರಾ ತಿಳಿಸಿದ್ದಾರೆ.

ಇಂಧನ ವೆಚ್ಚ ಕಡಿಮೆಯಾದಾಗ, ಆರ್ಥಿಕ ಲಾಭವು ಹೆಚ್ಚು ಕಷ್ಟಕರವಾಗಿರುತ್ತದೆ ಬಂಡವಾಳ, ಹೂಡಿಕೆ ಮತ್ತು ತಂತ್ರಜ್ಞಾನವನ್ನು ಹೇಗೆ ಆಕರ್ಷಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಆರ್ಥಿಕ ಉಪಕ್ರಮದಲ್ಲಿ ಜನರಿಗೆ ಶಕ್ತಿ ಉತ್ಪಾದನೆಯ ಸ್ವರೂಪವನ್ನು ಬದಲಾವಣೆ ನಡೆಸುವಂತೆ ಪ್ರೋತ್ಸಾಹಿಸಿದೆ. ಅಮೆರಿಕ ಬ್ರಾಂಡ್​ಗಾಗಿ ಜುಬಿಲಂಟ್ ಫುಡ್ ವರ್ಕ್ಸ್ ಕಾರ್ಖಾನೆಯು 500 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಇದಕ್ಕಾಗಿ 4,400 ಚದರ ಮಿ ಮೇಲ್ಚಾವಣಿ ಇದ್ದು, ಇಲ್ಲಿಯೇ 800 ಸೋಲಾರ್​ ಫಲಕ ಅಳವಡಿಸಿ, ಶೇ 14ರಷ್ಟು ವಿದ್ಯುತ್​ ಉತ್ಪಾದಿಸುವಂತೆ ಸೂಚಿಸಿದೆ. ಅದು ಗ್ರೀಡ್​ಗಿಂತ ಕಡಿಮೆ ವೆಚ್ಚದಲ್ಲಿ.
ಸೌರ ಶಕ್ತಿ ಪ್ರತಿ ಘಟಕಕ್ಕೆ ಅವರಿಗೆ 4.3 ರೂಪಾಯಿ ಬಿಲ್ ಮಾಡುತ್ತಿದ್ದೇವೆ, ಆದರೆ ಗ್ರಿಡ್ ವೆಚ್ಚ ಏಳು ರೂಪಾಯಿಗಳಾಗಿದೆ ಎಂದು ಸನ್​ಸೋರ್ಸ್​ ಎನರ್ಜಿಯ ಪ್ರವೀಣ್​ ಕುಮೆ ತಿಳಿಸಿದ್ದಾರೆ.

ಕಾರ್ಖಾನೆಯ ವ್ಯವಸ್ಥಾಪಕ ಅನಿಲ್ ಚಾಂಡೆಲ್ ಅವರು ಶೇ50ರಷ್ಟು ವಿದ್ಯುತ್ ಅಗತ್ಯಗಳನ್ನು ಪೂರೈಸಲು ವಿಸ್ತರಿಸುವ ಗುರಿಯನ್ನು ಹೊಂದಿದ್ದು ಇದು ಉತ್ತಮ ಒಪ್ಪಂದ. ಇದರ ನಿರ್ವಹಣೆ ಮಾಡುವ ತಲೆನೋವು ನಮಗೆ ಇರುವುದಿಲ್ಲ. 10 ಮಿಲಿಯನ್ ಮನೆಗಳಿಗೆ ಫಲಕಗಳನ್ನು ಬೆಂಬಲಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ವಿದ್ಯುತ್ ಬೇಡಿಕೆಗಳು ವೇಗವಾಗಿ ಹೆಚ್ಚುತ್ತಿದ್ದು, 2030ರ ಹೊತ್ತಿಗೆ ಶೇ 50ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಸೌರಶಕ್ತಿಯು ಕಲ್ಲಿದ್ದಲಿಗಿಂತ ಉತ್ತಮವಾಗಿದೆ, ಆದರೆ ಇದನ್ನೂ ಕಣ್ಮುಚ್ಚಿ ಬಳಸಲಾಗುವುದಿಲ್ಲ. ಜನರು ಕೂಡ ವಿದ್ಯುತ್ ಬೇಡಿಕೆಯನ್ನು ಸಹ ನಿಯಂತ್ರಿಸಬೇಕು. ನಾವು ಇಂಧನ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಚೋಪ್ರಾ ತಿಳಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...