spot_img
spot_img

3 ಹೊಸ ಕ್ರಿಮಿನಲ್ ಕಾನೂನುಗಳ ಲೋಕಾರ್ಪಣೆ ಕಾರ್ಯಕ್ರಮ: ಪ್ರಧಾನಿ ಮೋದಿ

spot_img
spot_img

Share post:

ಚಂಡೀಗಢ: ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷರತಾ ಅಧಿನಿಯಮ ಹೆಸರಿನ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮಧ್ಯಾಹ್ನ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳ ಪ್ರಕಾರ ಅಪರಾಧ ಸ್ಥಳದಲ್ಲಿ ಯಾವ ರೀತಿ ತನಿಖೆ ಮಾಡಬೇಕೆಂಬುದನ್ನು ತೋರಿಸುವ 30 ನಿಮಿಷಗಳ ಲೈವ್ ಪ್ರಾತ್ಯಕ್ಷಿಕೆಯನ್ನು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್​ಪಿ)ಯವರು ಪ್ರಧಾನಿಯ ಎದುರು ಪ್ರಸ್ತುತಪಡಿಸಲಿದ್ದಾರೆ. “ಸುರಕ್ಷಿತ ಸಮಾಜ,

ಅಭಿವೃದ್ಧಿ ಹೊಂದಿದ ಭಾರತ: ಶಿಕ್ಷೆಯಿಂದ ನ್ಯಾಯದೆಡೆ” ಎಂಬ ವಿಷಯದ ಮೇಲಿನ ಪ್ರಸ್ತುತಿಯಲ್ಲಿ ಮೂರು ಸನ್ನಿವೇಶಗಳನ್ನು ಪ್ರದರ್ಶಿಸಲಾಗುವುದು. ಈ ಸಮಾರಂಭವು ಚಂಡೀಗಢದ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಪಿಇಸಿ) ನಡೆಯಲಿದೆ.

ಮೊದಲ ಸನ್ನಿವೇಶದಲ್ಲಿ “ಕೊಲೆ ಮತ್ತು ದರೋಡೆ ಪ್ರಕರಣದ” ವರದಿಯ ಬಗ್ಗೆ ಇರಲಿದೆ. ಇಂಥ ಪ್ರಕರಣಗಳಲ್ಲಿ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ (ಸಿಎಫ್ಎಸ್ಎಲ್) ತಂಡ ಮತ್ತು ಹತ್ತಿರದ ಜಿಪಿಎಸ್ ಚಾಲಿತ ಪಿಸಿಆರ್ ವ್ಯಾನ್ ಗಳು ತಕ್ಷಣವೇ ಸ್ಥಳಕ್ಕೆ ಹೇಗೆ ತಲುಪುತ್ತವೆ ಎಂಬುದರ ಮಾಹಿತಿ ನೀಡಲಾಗುವುದು.

ಎರಡನೆಯ ಸನ್ನಿವೇಶದಲ್ಲಿ ಅಪರಾಧ ಸ್ಥಳದಲ್ಲಿ ಚಿತ್ರಗಳು, ವೀಡಿಯೊಗಳು ಮತ್ತು ಟೈಮ್ ಸ್ಟಾಂಪ್ ಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ಇ-ಸಾಕ್ಷ್ಯ ಅಪ್ಲಿಕೇಶನ್ ಮೂಲಕ ಡಿಜಿಟಲ್ ಆಗಿ ಹೇಗೆ ಸೆರೆಹಿಡಿಯಲಾಗುತ್ತದೆ ಮತ್ತು ನೇರವಾಗಿ ನ್ಯಾಯಾಲಯಕ್ಕೆ ಹೇಗೆ ಸಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲಿದೆ. ಈ ಸನ್ನಿವೇಶದಲ್ಲಿ, ವಿಧಿವಿಜ್ಞಾನ ತಂಡವು ಪ್ರಮುಖ ಪುರಾವೆಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಬಲಿಪಶುವಿನ ಮಗಳೊಬ್ಬಳು ತನ್ನ ತಂದೆಯ ದೇಹವನ್ನು ಹೇಗೆ ಗುರುತಿಸುತ್ತಾಳೆ ಎಂಬುದರ ಬಗ್ಗೆ ತಿಳಿಸಲಾಗುವುದು.
ನ್ಯಾಯ ಸೇತು ಆ್ಯಪ್​​ನಲ್ಲಿ ಅಳವಡಿಸಲಾದ ಮುಖ ಗುರುತಿಸುವಿಕೆ ಫೀಚರ್ ಆಗಿರುವ ಚಿತ್ರಖೋಜಿಯನ್ನು

ಮೂರನೇ ಹಂತದಲ್ಲಿ ಪ್ರಧಾನಿಯ ಮುಂದೆ ಪ್ರಸ್ತುತಪಡಿಸಲಾಗುವುದು. ಈ ತಂತ್ರವು ಸಿಸಿಟಿವಿ ದೃಶ್ಯಾವಳಿಗಳಿಂದ ಮುಖದ ಫೋಟೋಗಳನ್ನು 10 ದಶಲಕ್ಷಕ್ಕೂ ಹೆಚ್ಚು ಜನರ ರಾಷ್ಟ್ರೀಯ ಡೇಟಾಬೇಸ್​ನೊಂದಿಗೆ ಹೋಲಿಸುವ ಮೂಲಕ ತನಿಖಾಧಿಕಾರಿಗಳಿಗೆ ತಕ್ಷಣದ ಸುಳಿವುಗಳನ್ನು ನೀಡುತ್ತದೆ.

ಭಾರತದ ಕಾನೂನು ವ್ಯವಸ್ಥೆಯ ದಕ್ಷತೆ, ಪಾರದರ್ಶಕತೆ ಮತ್ತು ಆಧುನಿಕ ಸಮಾಜದ ಅಗತ್ಯಗಳಿಗೆ ಹೊಂದಿಕೊಳ್ಳುವ ಹಾಗೂ ಸಾಮರ್ಥ್ಯವನ್ನು ಸುಧಾರಿಸುವ ಗುರಿಯೊಂದಿಗೆ ಜುಲೈ 1, 2024 ರಂದು ಹೊಸ ಕ್ರಿಮಿನಲ್ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಸಂಘಟಿತ ಅಪರಾಧ, ಸೈಬರ್ ಅಪರಾಧ ಮತ್ತು ವಿವಿಧ ಅಪರಾಧಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತಹ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಹೊಸ ಚೌಕಟ್ಟುಗಳನ್ನು ಪರಿಚಯಿಸುವುದರೊಂದಿಗೆ, ಈ ಐತಿಹಾಸಿಕ ಸುಧಾರಣೆಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತವೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...