spot_img
spot_img

ಡಿಸೆಂಬರ್‌ 5ಕ್ಕೆ ಹುಬ್ಬಳ್ಳಿಯಲ್ಲಿ ಬೃಹತ್‌ ಉದ್ಯೋಗ ಮೇಳ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹುಬ್ಬಳ್ಳಿ – ಧಾರವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಗುಡ್‌ನ್ಯೂಸ್‌ ಇದೆ. ಹುಬ್ಬಳ್ಳಿಯಲ್ಲಿ ಬೃಹತ್‌ ಉದ್ಯೋಗ ಮೇಳ ನಡೆಯಲಿದ್ದು, ನಿರುದ್ಯೋಗಿಗಳು ಹಾಗೂ ಉದ್ಯೋಗವನ್ನು ಹುಡುಕುತ್ತಿರುವವರು ಈ ಬೃಹತ್‌ ಉದ್ಯೋಗ ಮೇಳದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಹುಬ್ಬಳ್ಳಿಯಲ್ಲಿ ಎಲ್ಲಿ ಉದ್ಯೋಗ ಮೇಳ ನಡೆಯುತ್ತಿದೆ, ಯಾರೆಲ್ಲ ಭಾಗವಹಿಸಬಹುದು ಹಾಗೂ ಇದಕ್ಕೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಹುಬ್ಬಳ್ಳಿಯಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಇದರಿಂದ ನೂರಾರು ಜನ ಉದ್ಯೋಗಾಕ್ಷಿಗಳಿಗೆ ಸಹಾಯವಾಗಲಿದೆ. ಈ ಭಾಗದಲ್ಲಿ ಉದ್ಯೋಗ ಹುಡುಕುತ್ತಿರುವವರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಇನ್ನು ಈ ಉದ್ಯೋಗ ಮೇಳವು ಡಿಸೆಂಬರ್ 5ಕ್ಕೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಧಾರವಾಡದ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಉದ್ಯೋಗ ಮೇಳದಲ್ಲಿ ನೂರಾರು ಜನ ಅಭ್ಯರ್ಥಿಗಳು ಭಾಗವಹಿಸುವ ಸಾಧ್ಯತೆ ಇದೆ.

ಈ ಬೃಹತ್‌ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿ ಹಾಗೂ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡದ ಸಹಯೋಗದಲ್ಲಿ ನಡೆಯುತ್ತಿದೆ.

ಡಿಸೆಂಬರ್‌ 5ರಂದು ನಡೆಯಲಿರುವ ಈ ಬೃಹತ್‌ ಉದ್ಯೋಗ ಮೇಳದಲ್ಲಿ ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್ ಹಾಗೂ ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರುವವರು ಭಾಗವಹಿಸಬಹುದಾಗಿದೆ. ಅಲ್ಲದೇ 18 ರಿಂದ 35 ವರ್ಷ ವಯೋಮಿತಿಯ ಅಭ್ಯರ್ಥಿಗಳು ಈ ಸಂದರ್ಶನಕ್ಕೆ ಹಾಜರಾಗಬಹುದು.

ಇನ್ನು ಈ ಉದ್ಯೋಗ ಮೇಳದಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಖಾಸಗಿ ವಲಯದ ಕಂಪನಿಗಳು ಭಾಗವಹಿಸುತ್ತಿವೆ. ಈ ಕಂಪನಿಗಳ ಮಾಲೀಕರು ಸಹ ಭಾಗವಹಿಸಲಿದ್ದು, ಈ ಸಂಸ್ಥೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಅಲ್ಲದೇ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲು https://forms.gle/qdtkEhLjQsdC1GD68 ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗುವುದಕ್ಕೆ ಅವಕಾಶ ನೀಡಲಾಗಿದೆ.

ಇನ್ನು ಉದ್ಯೋಗದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಕೊನೆಯ ದಿನದ ವರೆಗೆ ಕಾಯದ ಈಗಲೇ ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳಿ ಇದರಿಂದ ಕೊನೆಯ ಕ್ಷಣದಲ್ಲಿ ಆಗಬಹುದಾದ ಗೊಂದಲಗಳನ್ನು ತಪ್ಪಿಸಬಹುದಾಗಿದೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ರೆಸ್ಯೂಮ್ ಪ್ರತಿಗಳನ್ನು ಹೆಚ್ಚು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು, ತಮ್ಮ ಆಧಾರ್‌ ಕಾರ್ಡ್‌, ಬಯೋಡೆಟಾ (ರೆಸ್ಯೂಮ್‌) ಗಳ ಹೆಚ್ಚಿನ ಪ್ರತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮೇಳದಲ್ಲಿ ಭಾಗವಹಿಸಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9535360259, 8453208555, 9806905751, 7353307657 ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PM MODI SPEECH : SC, ST, OBC ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಹೆಚ್ಚಳ

New Delhi News: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿಂದು ಪ್ರPM MODI SPEECH. ಸರ್ಕಾರದ ಸಾಧನೆಗಳ ಕುರಿತು ಸುದೀರ್ಘ ಭಾಷಣ ಮಾಡಿದ ಅವರು,...

PM MODI PRAYAGRAJ VISIT : ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಲಿರುವ ಪ್ರಧಾನಿ

Prayagraj, Uttar Pradesh News: ಮಹಾಕುಂಭ ಮೇಳದಲ್ಲಿ ಭಾಗಿಯಾಲು PM MODI PRAYAGRAJ VISIT ನೀಡುತ್ತಿದ್ದಾರೆ. ಈ ವೇಳೆ ಅವರು ಭದ್ರತೆಯ ನಡುವೆ ಸಾಧು -...

ICC CHAMPIONS TROPHY 2025 : 1.8 ಲಕ್ಷ ರೂಪಾಯಿ ಬೆಲೆಯ ಟಿಕೆಟ್ಗಳೂ ಖಾಲಿ!

India vs Pakistan, ICC Champions Trophy-2025: 2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳು ಎದುರುಬದುರಾಗಿದ್ದವು. ಇದೀಗ 15 ತಿಂಗಳ ನಂತರ ಎರಡೂ...

IPL 2025 RCB CAPTAIN : RCB ಮುಂದಿನ ನಾಯಕ ಯಾರು ಗೊತ್ತಾ?

IPL 2025 RCB Captain: IPL 2025 RCB CAPTAIN ಇತ್ತೀಚೆಗೆ ಜೆಡ್ಡಾದಲ್ಲಿ 18ನೇ ಆವೃತ್ತಿ ಹಿನ್ನೆಲೆ ಆಟಗಾರರ ಮೆಗಾ ಹರಾಜು ನಡೆದಿತ್ತು. ಇದರಲ್ಲಿ ಎಲ್ಲಾ...