ಮುಂಬೈ: ಹಿರಿಯ ಬಿಜೆಪಿ ನಾಯಕ ಕಾಳಿದಾಸ್ ಕೊಲಂಬ್ಕರ್ ಅವರ ಅಧ್ಯಕ್ಷತೆಯಲ್ಲಿ ಮೂರು ದಿನದ ವಿಶೇಷ ವಿಧಾನಸಭಾ ಅಧಿವೇಶನ ನಡೆಯಲಿದೆ.
ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆಯ ಮೂರು ದಿನದ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಈ ವೇಳೆ ನೂತನವಾಗಿ ಆಯ್ಕೆಯಾದ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸದ್ಯ ಮಹಾರಾಷ್ಟ್ರ ವಿಧಾನಸಭೆಗೆ ಕಾಳಿದಾಸ್ ಕೊಲಂಬ್ಕರ್ ಅವನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಎರಡನೇ ಅವಧಿಯ ಮಹಾಯುತಿ ಮೈತ್ರಿ ಸರ್ಕಾರದ ಮೊದಲ ಅಧಿವೇಶನ ಇದಾಗಿದ್ದು, ಇದು ಶಾಸಕಾಂಗ ಅವಧಿಯ ಔಪಚಾರಿಕ ಆರಂಭವಾಗಿದೆ.
ಈ ಅಧಿವೇಶನದ ಮಹತ್ವ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಪರಾಗ್ ಅಲವನಿ, ಮಹಾರಾಷ್ಟ್ರ ಜನರು ಮೈತ್ರಿ ಸರ್ಕಾರಕ್ಕೆ ದೊಡ್ಡ ಬಹುಮತ ನೀಡಿದ್ದಾರೆ. ಮುಂದಿನ ಮೂರು ದಿನ ಶಾಸಕರ ಪ್ರಮಾಣವಚನ ನಡೆಯಲಿದ್ದು, ಕೆಲ ನೂತನ ಶಾಸಕರು ಸದನಕ್ಕೆ ಪ್ರವೇಶ ಮಾಡಲಿದ್ದಾರೆ ಎಂದರು.
ಈಗಾಗಲೇ 9 ಬಾರಿ ಶಾಸಕರಾಗಿರುವ ಹಿರಿಯ ಬಿಜೆಪಿ ನಾಯಕ ಕಾಳಿದಾಸ್ ಕೊಲಂಬ್ಕರ್ ಅವರ ಅಧ್ಯಕ್ಷತೆಯಲ್ಲಿ ಈ ಮೂರು ದಿನದ ವಿಶೇಷ ವಿಧಾನಸಭಾ ಅಧಿವೇಶನ ನಡೆಯಲಿದೆ. ಈ ಅಧಿವೇಶನವು ಡಿಸೆಂಬರ್ 7ರಿಂದ 9ರ ವರೆಗೆ ಸಾಗಲಿದ್ದು, ಈ ಮೂರು ದಿನದಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದ 288 ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಇದರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಅಮೊಲ್ ಖಟಳ್ ತಮ್ಮ ಉತ್ಸಾಹ ವ್ಯಕ್ತಪಡಿಸಿ ಮಾತನಾಡಿದ್ದು, ‘ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ ಅಗಾಧವಾಗಿದೆ. ಮತದಾರರು, ಮಾಧ್ಯಮ ಮತ್ತು ಸಹೋದ್ಯೋಗಿಗಳು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಇದು ತೋರಿಸುತ್ತದೆ. ಇದು ಕೇವಲ ನನಗೆ ಸಿಕ್ಕ ಗೌರವಲ್ಲ, ನನ್ನ ಮತದಾರರು ಮತ್ತು ತಾಲೂಕಿಗೆ ಸಿಕ್ಕ ಗೌರವವಾಗಿದೆ’ ಎಂದರು.
ಅಧಿವೇಶನವೂ ಮುಂದಿನ ದಿನದಲ್ಲಿ ನೂತನ ಸ್ಪೀಕರನ್ನು ಕಾಣಲಿದ್ದು, ಕಾರ್ಯಸೂಚಿಯನ್ನು ಮತ್ತಷ್ಟು ಬಲಪಡಿಸುತ್ತದೆ.
ಶಿವಸೇನಾ ಶಾಸಕ ಅಮಶ್ಯ ಪಡ್ವಿ ಮಾತನಾಡಿ, ‘ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಒತ್ತಿ ಹೇಳಿದರು. ನಾವು ಅಭಿವೃದ್ಧಿಯ ಭರವಸೆಯಿಂದ ಆಯ್ಕೆಯಾಗಿದ್ದೇವೆ. ಇದನ್ನು ಈಡೇರಿಸುವಲ್ಲಿ ಹಿಂದಿನ ಶಾಸಕರು ವಿಫಲರಾಗಿದ್ದರು. ಇದೇ ಕಾರಣಕ್ಕೆ ಕೆಲಸ ಮಾಡುವ ಬದ್ಧತೆ ಮೇರೆಗೆ ನನ್ನ ಆಯ್ಕೆ ಮಾಡಲಾಗಿದೆ’ ಎಂದರು.
ಮತ್ತೋರ್ವ ಹೊಸ ಶಾಸಕರಾದ ನೆಹಾ ದುಬೆ ಮಾತನಾಡಿ, ಮೊದಲ ಬಾರಿಗೆ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now