ಬೆಂಗಳೂರು: ಈ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲ. ವಾಕ್ ಇನ್ ಸಂದರ್ಶನದ ಮೂಲಕ ಹುದ್ದೆ ಆಯ್ಕೆ ನಡೆಸಲಾಗುವುದು. ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ವೈದ್ಯಕೀಯ ಅಧ್ಯಯನದ ಸಹಾಯಕ್ಕಾಗಿ ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆರಂಭಿಕ ಆರು ತಿಂಗಳ ಹುದ್ದೆಗೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳ ಸಾಮರ್ಥ್ಯದ ಮೇಲೆ ಹುದ್ದೆಯ ಅವಧಿಯನ್ನು ವಿಸ್ತರಿಸಲಾಗುವುದು.
40 ಫೀಲ್ಡ್ ಡೇಟಾ ಕಲೆಕ್ಟರ್ ಒಟ್ಟು ಹುದ್ದೆಗಳು ಇವೆ.
ಪಿಯುಸಿ, ಐಟಿಐ ಅಥವಾ ಮನಶಾಸ್ತ್ರ, ಸಮಾಜ ಶಾಸ್ತ್ರ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿಯಲ್ಲಿ ಪದವಿ ಪೂರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅಭ್ಯರ್ಥಿಗಳು ಅಂತರವ್ಯಕ್ತಿ ಕೌಶಲ್ಯ ಹೊಂದಿದ್ದು, ಸಮುದಾಯಾಧಾರಿತ ದತ್ತಾಂಶ ಸಂಗ್ರಹಿಸಬೇಕು. ಕನ್ನಡ ಚೆನ್ನಾಗಿ ಓದಲು, ಬರೆಯಲು ಬರಬೇಕು. ಗರಿಷ್ಠ 40 ವರ್ಷ ವಯೋಮಿತಿ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.ಮಾಸಿಕ 15,000 ರೂ ಗೌರವಧನ ನೀಡುತ್ತಾರೆ.
ಈ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲ. ವಾಕ್ ಇನ್ ಸಂದರ್ಶನದ ಮೂಲಕ ಹುದ್ದೆ ಆಯ್ಕೆ ನಡೆಸಲಾಗುವುದು. ಆಸಕ್ತ ಮತ್ತು ಅರ್ಹರು ತಮ್ಮ ಶೈಕ್ಷಣಿಕ ಪ್ರಮಾಣ ಪತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಹಾಜರಾಗಬೇಕು. ಡಿಸೆಂಬರ್ 13ರಂದು ಬೆಳಗ್ಗೆ 10ಕ್ಕೆ ವಾಕ್ ಇನ್ ಸಂದರ್ಶನ ನಡೆಯಲಿದೆ.
ಬೋರ್ಡ್ ರೂಮ್, 4ನೇ ಹಂತ, ಎನ್ಬಿಆರ್ಸಿ ಕಟ್ಟಡ, ಬಿಲ್ಡಿಂಗ್, ಬೆಂಗಳೂರು- 560029 ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು nimhans.ac.in ವೆಬ್ ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now