ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಇತ್ತೀಚೆಗೆ ಚಂದಾದಾರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಸರ್ಕಾರಿ ಟೆಲಿಕಾಂ ಕಂಪನಿಯಾದ ಇದು ಏರ್ಟೆಲ್, ಜಿಯೋ ಗ್ರಾಹಕರನ್ನು ತನ್ನಡೆಗೆ ಬರಮಾಡಿಕೊಳ್ಳಲು ಹಲವಾರು ಹೊಸ ಹೊಸ ಪ್ಲಾನ್ಗಳನ್ನು ಪರಿಚಯಿಸುತ್ತಿದೆ. ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಪ್ಲಾನ್ ಪರಿಚಯ ಮಾಡಿದೆ.
ತಿಂಗಳಿಗೆ 1200 GB ಡೇಟಾ ಬಳಸಿದರೆ ಡೇಟಾ ವೇಗ 4 ಎಂಬಿಪಿಎಸ್ಗೆ ಕಡಿಮೆ ಆಗುತ್ತದೆ. ಈ ಹೊಸ ಬ್ರಾಡ್‌ಬ್ಯಾಂಡ್ ಡೀಲ್ ಈಗ ಎಲ್ಲೆಡೆಯು ಬಳಕೆಯಲ್ಲಿದೆ. ನೀವು ಬಿಎಸ್ಎನ್ಎಲ್ ಗ್ರಾಹಕರು ಆಗಿದ್ದರೇ ಇದನ್ನು ಉಪಯೋಗಿಸಿಕೊಳ್ಳಬಹುದು. ಆ್ಯಪ್ನಲ್ಲೂ ಈ ಆಫರ್ ಲಭ್ಯ ಇದೆ. ಇದು ಅಲ್ಲದೇ 1800-4444ಗೆ ಕರೆ ಮಾಡುವ ಮೂಲಕ ಲಾಭ ಪಡೆಯಬಹುದು.
ಇಂಟರ್ನೆಟ್ ಉಪಯೋಗಿಸುವರಿಗಾಗಿ ಬಿಎಸ್ಎನ್ಎಲ್ 999 ರೂಪಾಯಿಯ ಹೊಸ ಪ್ಲಾನ್ ಪರಿಚಯಿಸಿದೆ. ಇದನ್ನು ಗ್ರಾಹಕರು ರಿಚಾರ್ಜ್ ಮಾಡಿಕೊಂಡರೇ 3 ತಿಂಗಳವರೆಗೆ ಇಂಟರ್ನೆಟ್ ಸಿಗುತ್ತದೆ. ಇದು ಒಟ್ಟು 3600 GB ಡೇಟಾವನ್ನು ಒಳಗೊಂಡಿರುತ್ತದೆ, ಅಂದರೆ ನೀವು ಪ್ರತಿ ತಿಂಗಳು 1200 GB ಡೇಟಾವನ್ನು ಬಳಕೆ ಮಾಡಬಹುದು. ಈ ಇಂಟರ್ನೆಟ್ 25 ಎಂಬಿಪಿಎಸ್ ವೇಗದಲ್ಲಿರುತ್ತದೆ. ಇದರ ಜೊತೆಗೆ ಅನಿಯಮಿತ ಕರೆಗಳನ್ನು ಆನಂದಿಸಬಹುದು.
ಬಿಎಸ್ಎನ್ಎಲ್ ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದು ಇದಕ್ಕಾಗಿ ಇತ್ತೀಚೆಗೆ, ಸುಮಾರು 51,000 ಹೊಸ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದ್ದಾರೆ. ಇದು ಅವರ ಬಳಕೆದಾರರಿಗೆ ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕವನ್ನು ಒದಗಿಸಲು ಸಹಾಯವಾಗುತ್ತಿದೆ. ಹೀಗಾಗಿ ಹೆಚ್ಚಿನವರು ಬಿಎಸ್ಎನ್ಎಲ್ ಕಡೆಗೆ ಹೋಗುತ್ತಿದ್ದಾರೆ.