spot_img
spot_img

ನ್ಯಾ.ಹೇಮಾ ಸಮಿತಿಯ ನೀಡಿರುವ ವರದಿ ಮುಚ್ಚಿಡುವಂತೆ ಸಚಿವ ಸಾಜಿ ಚೆರಿಯನ್​ ಸೂಚನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕೊಝಿಕ್ಕೋಡ್​: ಚಿತ್ರರಂಗದಲ್ಲಿನ ದೌರ್ಜನ್ಯ ಕುರಿತು ನ್ಯಾ.ಹೇಮಾ ಸಮಿತಿಯ ನೀಡಿರುವ ವರದಿಯಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ರಾಜ್ಯ ಮಾಹಿತಿ ಆಯೋಗ ಬಿಡುಗಡೆ ಮಾಡದಂತೆ ಸೂಚಿಸಿರುವ ಭಾಗವನ್ನು ಮಾತ್ರವೇ ಕೈಬಿಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮಲಯಾಳಂ ಸಿನಿ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ನ್ಯಾ.ಹೇಮಾ ಸಮಿತಿ ನೀಡಿರುವ ವರದಿಯಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಕೇರಳ ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್​ ತಿಳಿಸಿದ್ದಾರೆ. ಅಲ್ಲದೇ, ಸಮಿತಿ ನೀಡಿರುವ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರವು ನ್ಯಾಯಾಲಯದ ನಿರ್ದೇಶನಕ್ಕೆ ಕಟ್ಟಿಬದ್ಧವಾಗಿದೆ. ಸದ್ಯ ಈ ಪ್ರಕರಣ ಹೈಕೋರ್ಟ್ ಮುಂದಿದೆ. ರಾಜ್ಯ ಮಾಹಿತಿ ಆಯೋಗ ಬಿಡುಗಡೆ ಮಾಡದಂತೆ ಸೂಚಿಸಿರುವ ಭಾಗವನ್ನು ಮಾತ್ರವೇ ಕೈಬಿಡಲಾಗುವುದು. ಆಯೋಗವೂ ಈ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸೂಚಿಸಿದರೆ, ನಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರವೂ ಚಲನಚಿತ್ರ ನೀತಿ ಕುರಿತು ಕರಡು ಸಿದ್ಧಪಡಿಸಲಿದೆ ಎಂದ ಅವರು ಸರ್ಕಾರವೂ ಕಾನೂನು ಮಿತಿಯೊಳಗೆ ಎಲ್ಲಾ ಕ್ರಮ ನಡೆಸಿದೆ. ಇದೇ ವೇಳೆ ಲೋಪದೋಷದ ಆರೋಪ ತಳ್ಳಿ ಹಾಕಿದ ಅವರು, ವರದಿ ಬಿಡುಗಡೆ ಸಂಬಂಧ ನಮಗೆ ಯಾವುದೇ ಭಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿನಿಮಾ ಉದ್ಯಮದಲ್ಲಿ ಮಹಿಳೆಯರು ಎದುರಿಸಿದ ಸಮಸ್ಯೆಗಳ ಕುರಿತು ತಿಳಿಸಲು ಸರ್ಕಾರವೂ ಬದ್ಧವಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ಒಂದು ಸಮಿತಿಯನ್ನು ರಚಿಸಲಾಗಿದೆ. ವರದಿ ಸಂಬಂಧಿಸಿದಂತೆ ರಾಜ್ಯ ಮಾಹಿತಿ ಆಯೋಗ ನಿರ್ದೇಶನಂತೆ ನಾವು ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸಿದ್ದು, ಇದು ಪಾರದರ್ಶಕವಾಗಿದೆ. ಚಲನಚಿತ್ರ ನೀತಿ ಸೇರಿದಂತೆ ಹೇಮಾ ಸಮಿತಿ ಶಿಫಾರಸನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದರು.
ಕೇರಳ ಚಲನಚಿತ್ರ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆದಿವೆ ಎನ್ನಲಾದ ವ್ಯಾಪಕ ದೌರ್ಜನ್ಯಗಳ ವರದಿ ತಯಾರಿಸಲು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು 2017ರಲ್ಲಿ ನೇಮಿಸಿತ್ತು. ಈ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

CHALLENGING PRIYANKAS ELECTION – ಕೇರಳ ಹೈಕೋರ್ಟ್ ಮೊರೆ ಹೋದ ವಯನಾಡು ಬಿಜೆಪಿ ಅಭ್ಯರ್ಥಿ

Kochi, Kerala News: ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್​ ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ...

DEVEGOWDA FAMILY WORSHIPS KALARAM – ಮಾಜಿ ಪ್ರಧಾನಿ ದೇವೇಗೌಡ ಕುಟುಂಬದಿಂದ ಕಲಾರಾಮ್, ತ್ರಯಂಬಕೇಶ್ವರನಿಗೆ ಪೂಜೆ

Nashik (Maharashtra) News : ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಕುಟುಂಬ ಮಹಾರಾಷ್ಟ್ರದ ಕಾಲಾರಾಮ್​​ ಮತ್ತು ತ್ರಯಂಬಕೇಶ್ವರದ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು....

KANNADA SAHITYA SAMMELANA : ಮುಂದಿನ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿರುತ್ತದೆ.

Mandya News: ಬರುವ ವರ್ಷ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲು ನಿನ್ನೆ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಭೆಯಲ್ಲಿ ನಿರ್ಧರಿಸಲಾಗಿದೆ....

Centenary of the session : ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ

Bangalore News: ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್...