ವಿಜಯಪುರ: ಮಂಗಳಮುಖಿ ಎಂದು ಭಿಕ್ಷೆ ಬೇಡುತ್ತಿದ್ದಬಡ ಯುವತಿಯನ್ನು ನಗ್ನಗೊಳಿಸಿ ಸುಮಾರು ಏಳೆಂಟು ಮಂಗಳಮುಖಿಯರು ಸೇರಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ನಾನು ಮಂಗಳಮುಖಿ ಎಂದು ಭಿಕ್ಷೆ ಬೇಡುತಿದ್ದ ಮಹಿಳೆಯನ್ನು ಗಮನಿಸಿದ ಮಂಗಳಮುಖಿಯರ ತಂಡ ಯುವತಿ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದೆ. ಮರ್ಮಾಂಗಕ್ಕೆ ಒದ್ದು, ಕಾರದಪುಡಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರ ಎದುರಲ್ಲೇ ಏಳೆಂಟು ಮಂಗಳಮುಖಿಯರು ದರ್ಪ ಮೆರೆಯುತಿದ್ದರೂ ಸರ್ವ್ಜನಿಕರು ಮುಖ ಪ್ರೇಕ್ಷಕರಂತೆ ನೋಡುತ್ತಿದ್ದರು ಯಾರೂ ಸಹಾಯಕ್ಕೆ ಧಾವಿಸಲಿಲ್ಲ .
ವಿವಸ್ತ್ರಗೊಳಿಸಿ ಹಲ್ಲೆ ಮಾಡುವ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆಯೋ ಇಲ್ಲೋ ಇನ್ನು ತಿಳಿದು ಬಂದಿಲ್ಲ