ಜನಪ್ರಿಯ ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಸಂಘವನ್ನು ಹಾಗೂ ಈ ನಾಡಿಗೆ ನೀಡಿದ ಕೊಡುಗೆಗಳನ್ನು ನೀಡಿದ್ದಾರೆ.
ಎಸ್ಎಂ ಕಷ್ಣ ಅಗಲಿಗೆಯ ನೋವಿನಲ್ಲಿರುವ ಮಾಜಿ ಸಚಿವೆ ಮೋಟಮ್ಮ, ನ್ಯೂಸ್ಫಸ್ಟ್ ಜೊತೆ ಮಾತನಾಡಿದರು. ಈ ವೇಳೆ ಅವರು ಹೇಗೆ ಸ್ತ್ರೀ ಶಕ್ತಿ ಯೋಜನೆಯನ್ನು ಜಾರಿಗೆ ತಂದರು ಅನ್ನೋದನ್ನು ವಿವರಿಸಿದ್ದಾರೆ. ಮೋಟಮ್ಮ ಅವರೇ ಹೇಳುವಂತೆ.. ಅವರಿಗೆ (ಎಸ್ಎಂ ಕೃಷ್ಣ) ಹೆಣ್ಮಕ್ಕಳ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವ ಇತ್ತು. ಹೆಣ್ಮಕ್ಕಳನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ತಿದ್ದರು. ಅವರು ನನ್ನನ್ನು ಸಚಿವೆಯನ್ನಾಗಿ ಮಾಡುತ್ತಾರೆ ಅಂದು ಕೊಂಡಿರಲಿಲ್ಲ. ನನಗೆ ಅವರ ಮಂತ್ರಿ ಮಂಡಳಿದಲ್ಲಿ ಸ್ಥಾನ ನೀಡಿದ್ದೇ ಅಚ್ಚರಿ ತಂದಿತ್ತು.
ನನ್ನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯನ್ನಾಗಿ ಮಾಡಿದ ಮೇಲೆ ನಾನು ಒಮ್ಮೆ ಅವರನ್ನು ಭೇಟಿಯಾದೆ. ಈ ವೇಳೆ ನಾನು ಅವರ ಜೊತೆ ಮಾತನಾಡುತ್ತಾ ನಲಿದಾಡುತ್ತಿದ್ದರು ಎಂದು ನೆನಪಿಸಿಕೊಂಡರು.
ಅದರಂತೆ ಸ್ತ್ರೀ ಶಕ್ತಿ ಯೋಜನೆಗೆ ಮುಂದಾದರು. ಬಾಂಗ್ಲಾದೇಶದಲ್ಲಿ ಈ ಸ್ತ್ರೀ ಶಕ್ತಿ ಯೋಜನೆ ಜಾರಿಯಲ್ಲಿ ಇತ್ತಂತೆ. ಇಲ್ಲಿಂದ ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಅದರ ಬಗ್ಗೆ ಸ್ಟಡಿ ಮಾಡಿಸಿದರು. ನಂತರ ಕರ್ನಾಟಕದಲ್ಲಿ ಅದನ್ನು ಜಾರಿಗೆ ತಂದರು. ಅದಕ್ಕೆ ಸಹಾಯ ದನ ನೀಡಿದರು. ಅದೇ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನುದಾನ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿಶೇಷ ಸ್ಥಾನ ಬಂದಿದ್ದೇ ಕೃಷ್ಣ ಅವರ ಕಾಲದಲ್ಲಿ ಎಂದು ಮೋಟಮ್ಮ ನೆನಪಿಸಿಕೊಂಡು ಸ್ಮರಿಸಿದ್ದಾರೆ.
ಅದಕ್ಕೆ ಅವರು ನನ್ನನ್ನು ರೇಗಿಸಿದ್ದರು. ಮೋಟಮ್ಮ ಅವರೇ ವಿಧಾನಸೌಧದ ಮೂರನೇ ಮಹಡಿಯಿಂದ ನೀರು ಇಳಿಯುತ್ತಿದೆಯಲ್ಲ. ಅದೇ ಕಣ್ಣೀರು ಅಲ್ವಾ ಎಂದು ರೇಗಿಸಿದ್ದರು. ಕೊನೆಗೆ ನಾನು ಇಲ್ಲ ಸರ್ ನಾನು ತುಂಬಾ ಸೀರಿಯಸ್ ಆಗಿ ಹೇಳ್ತಿದ್ದೇನೆ ಅಂದೆ. ಅದಕ್ಕೆ ಕೃಷ್ಣ ಹೇಳಿದ್ದರು, ಮೇಡಂ ಅವರೇ ನಿಮ್ಮ ನೋವು ನನಗೆ ಗೊತ್ತಾಗಿದೆ. ಅದಕ್ಕೆ ಯಾವುದಾದರೂ ಸ್ಕೀಮ್ ತರೋಣ ಎಂದು ಭರವಸೆ ನೀಡಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now