spot_img
spot_img

KIA ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಕಳೆದ ತಿಂಗಳು ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ಎನ್‌ಎಚ್‌ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಈ ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಕುರಿತು ಸಭೆ ನಡೆಸಿದ್ದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಮುಂದುವರೆಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ.
ಹೆಬ್ಬಾಳದಲ್ಲಿ ಎನ್‌ಎಚ್‌ಎಐ ರಸ್ತೆ ಪ್ರಾರಂಭವಾಗುತ್ತದೆ. ವಾಹನ ಸವಾರರು ವಿಮಾನ ನಿಲ್ದಾಣದ ಮೇಲ್ಸೇತುವೆ ಬಳಸಿ ಸಾದಹಳ್ಳಿಯಲ್ಲಿರುವ ಟೋಲ್ ಪ್ಲಾಜಾ ತಲುಪುತ್ತಿದ್ದಾರೆ. ಇದರಿಂದ ಟೋಲ್ ಪ್ಲಾಜಾದ ಬಳಿಯಿರುವ ಜಂಕ್ಷನ್’ನಲ್ಲಿ ಅಡಚಣೆಯಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ (ಕರ್ನಾಟಕ) ವಿಲಾಸ್ ಪಿ ಬ್ರಹ್ಮಂಕರ್ ಅವರು ಹೇಳಿದ್ದಾರೆ.
ಕಳೆದ ತಿಂಗಳು ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ಎನ್‌ಎಚ್‌ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಈ ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಕುರಿತು ಸಭೆ ನಡೆಸಿದ್ದರು.
ಸಮಸ್ಯೆ ಪರಿಹಾರಕ್ಕಾಗಿ ಎನ್‌ಎಚ್‌ಎಐ ಮೇಲ್ಸೇತುವೆಯನ್ನು ನಿರ್ಮಿಸಲಿದೆ. ಈ ಮೇಲ್ಸೇತುವೆಯಿಂದ ರಸ್ತೆಯು ಸಿಗ್ನಲ್ ಮುಕ್ತವಾಗಲಿದೆ. ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಿ, ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ಯಾಬೂ್ ಚಾಲಕ ಪ್ರಮೋದ್ ಅವರು ಮಾತನಾಡಿ, ಪ್ರತಿನಿತ್ಯ ಸಾವಿರಾರು ಜನರು ಹೆಬ್ಬಾಳ ರಸ್ತೆಯ ಮೂಲಕ ವಿಮಾನ ನಿಲ್ದಾಣ ರಸ್ತೆಗೆ ಬರುತ್ತಾರೆ. ಇದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಮತ್ತು ಮೇಖ್ರಿ ವೃತ್ತದ ಬಳಿ ಹೆಬ್ಬಾಳ ಕಡೆಗೆ ಸಾಗುವ ರಸ್ತೆಯಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಎದುರಾಗುತ್ತಿದೆ. ಹೆಬ್ಬಾಳದ ನಂತರ ವಿಮಾನ ನಿಲ್ದಾಣದ ರಸ್ತೆಯ ಮೇಲ್ಸೇತುವೆಯನ್ನು ಪ್ರವೇಶಿಸಿದರೆ, ಸಾದಹಳ್ಳಿಯ ಟ್ರಾಫಿಕ್ ಸಿಗ್ನಲ್ ಅನ್ನು ಸ್ವಲ್ಪ ಸಮಯದಲ್ಲೇ ತಲುಪುತ್ತೇವೆ. ಆದರೆ, ಅಲ್ಲಿಂದ ವೇಗವಾಗಿ ಬಂದರೂ, ಆ ಸಮಯ ಟ್ರಾಫಿಕ್ ಸಿಗ್ನಲ್ ನಿಂದ ವ್ಯರ್ಥಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೇಲ್ಸೇತುವೆ ನಿರ್ಮಿಸುವ ಎನ್‌ಎಚ್‌ಎಐ ಯೋಜನೆಯನ್ನು ಸ್ವಾಗತಿಸಿದ ಅವರು, ಕೆಐಎ ಕಡೆಗೆ ಮತ್ತು ಮುಂದೆ ಬಳ್ಳಾರಿ ರಸ್ತೆಯಲ್ಲಿ ಸುಗಮ ಸಂಚಾರವನ್ನು ಇದು ಖಚಿತಪಡಿಸುತ್ತದೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬೆಳಗಾವಿ ಕೇಂದ್ರಾಡಳಿತ ಪ್ರದೇಶ : ಆದಿತ್ಯ ಠಾಕ್ರೆ ಆಗ್ರಹ

ಮುಂಬೈ: ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ವೊರ್ಲಿ ಕ್ಷೇತ್ರದ ಶಾಸಕ ಆದಿತ್ಯ ಠಾಕ್ರೆ ಅವರು ಕೇಂದ್ರ ಸರ್ಕಾರಕ್ಕೆ...

ಮಾನವ ತೊಳೆಯುವ ಯಂತ್ರ : ಬಟನ್ ಒತ್ತಿದ್ರೆ ಸ್ನಾನ ಮಾಡಿಸುವ ಯಂತ್ರ

ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಶಿನ್ ಕಂಡು ಹಿಡಿದಿದ್ದಾರೆ. ತಂತ್ರಜ್ಞಾನದಲ್ಲಿ ಜಪಾನ್ ಬಹಳಷ್ಟು...

12 ಸಾಧಕೀಯರು ‘ದೇವಿ’ ಪ್ರಶಸ್ತಿ ಪ್ರದಾನ ಇಂದು

ವಿವಿಧ ವೃತ್ತಿ ಹಿನ್ನೆಲೆಯ 12 ಮಹಿಳೆಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನವೆಂಬರ್ 30ರಂದು ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಸಮಾಜಕ್ಕೆ ನೀಡಿರುವ...

ಜ್ಞಾನ ಭಾರತಿ ಕ್ಯಾಂಪಸ್‌ : ‘ನಾಗಲೋಕ ಶಿಲ್ಪವನ’ ಅನಾವರಣ

ಬೆಂಗಳೂರು: ಸಂವಿಧಾನ ಕತೃ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಕೊಡುಗೆಗಳ ಬಗ್ಗೆ ಹಲವರಿಗೆ ತಿಳಿದಿದ್ದರೂ ಸಹ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸ್‌ನ...