spot_img
spot_img

ನವ ಮಂಗಳೂರು ಬಂದರಿಗೆ ಈ ಋತುವಿನ ಮೊದಲ ವಿಹಾರ ನೌಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಂಗಳೂರು(ದಕ್ಷಣ ಕನ್ನಡ): ಈ ಋತುವಿನ ಮೊದಲ ವಿಹಾರ ನೌಕೆ MS SILVER WHISPER (ಎಂಎಸ್ ಸಿಲ್ವರ್ ವಿಸ್ಪರ್) ನವ ಮಂಗಳೂರು ಬಂದರಿಗೆ ಮಂಗಳವಾರ ಆಗಮಿಸಿತು. ಐಷಾರಾಮಿ ಹಡಗು ಮುಂಬೈನಿಂದ ಆಗಮಿಸಿದ್ದು, 299 ಪ್ರಯಾಣಿಕರು ಮತ್ತು 296 ಸಿಬ್ಬಂದಿ ಇದ್ದರು.
ಪ್ರಯಾಣಿಕರು ಮೂಡುಬಿದಿರೆಯ ಸಾವಿರಗಂಬದ ಬಸದಿ, ಕದ್ರಿ ಮಂಜುನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್ ಮತ್ತು ಪಿಲಿಕುಳದ ನಿಸರ್ಗಧಾಮಕ್ಕೆ ಭೇಟಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್​ ಅವರು ಹಡಗಿನ ಕ್ಯಾಪ್ಟನ್‌ಗೆ ಸ್ಮರಣಿಕೆ ನೀಡುವ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ಈ ಹಡಗು 186 ಮೀಟರ್ ಉದ್ದ, 6.20 ಮೀಟರ್ ಡ್ರಾಫ್ಟ್ ಮತ್ತು 28,258 ಟನ್‌ ತೂಕ ಹೊಂದಿದೆ. ಅಂತಾರಾಷ್ಟ್ರೀಯ ಪ್ರವಾಸದಲ್ಲಿರುವ ಹಡಗು ಕೇಪ್​ಟೌನ್, ಮುಂಬೈ, ಮಂಗಳೂರು, ಕೊಲಂಬೊ ಮತ್ತು ಇತರೆ ಸ್ಥಳಗಳಿಗೆ ಪ್ರಯಾಣಿಸುತ್ತದೆ.
ಪ್ರಯಾಣಿಕರ ಅನುಕೂಲತೆಗಾಗಿ 14 ಇಮಿಗ್ರೇಷನ್ ಕೌಂಟರ್‌ಗಳು, 2 ಕಸ್ಟಮ್ಸ್ ಕೌಂಟರ್‌ಗಳು, ವೈದ್ಯಕೀಯ ತಪಾಸಣಾ ಕೇಂದ್ರಗಳು, ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ ಮತ್ತು ಯಕ್ಷಗಾನದ ಚಿತ್ರಣ ಹೊಂದಿರುವ ಸೆಲ್ಫಿ ಸ್ಟ್ಯಾಂಡ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಹಡಗಿನಲ್ಲಿ ಕಾಣಬಹುದು. ಈ ಪ್ರಥಮ ಕ್ರೂಸ್ ಹಡಗು, ನವ ಮಂಗಳೂರು ಬಂದರನ್ನು ಭಾರತದ ಪ್ರಮುಖ ಕ್ರೂಸ್ ತಾಣವಾಗಿ ಗುರುತಿಸಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಸಿಎಂ ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಗುರುವಾರ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳು, ತಾಲೂಕುಗಳಲ್ಲಿ ಮತ್ತು ಹಿರೇಬಾಗೇವಾಡಿ ಹಾಗೂ ಹತ್ತರಗಿ ಟೋಲ್ ನಾಕಾಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ...

ಆರ್ಥಿಕ ಮಂದಗತಿಗೆ ರೆಪೋ ದರ ಏರಿಕೆಯೊಂದೇ ಕಾರಣವಲ್ಲ: ಶಕ್ತಿಕಾಂತ್‌ ದಾಸ್‌

ಮುಂಬಯಿ: ಆರ್ಥಿಕ ಹಿಂಜರಿತ ಹಲವು ಕಾರಣಗಳಿಂದ ಆಗಿದೆಯೇ ಹೊರತು ಆರ್‌ಬಿಐ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವುದಕ್ಕಲ್ಲ ಎಂದು ನಿರ್ಗಮಿತ ಗವರ್ನರ್‌ ಶಕ್ತಿಕಾಂತ ದಾಸ್‌ ಸ್ಪಷ್ಟಪಡಿಸಿದ್ದಾರೆ....

ರೈಲ್ವೆ ತಿದ್ದುಪಡಿ ಮಸೂದೆ : ಖಾಸಗೀಕರಣಕ್ಕೆ ಅವಕಾಶ ಇಲ್ಲ : ಅಶ್ವಿನಿ ವೈಷ್ಣವ್

ನವದೆಹಲಿ: ರೈಲ್ವೆ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ತಿದ್ದುಪಡಿಯು ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತದೆ ಎಂಬ ನಕಲಿ ನಿರೂಪಣೆಯನ್ನು...

ರೈತರ ಬದುಕಿಗೆ ಆರ್ಥಿಕ ಚೇತರಿಕೆ ಕೊಟ್ಟ ಎಸ್ ಎಂ ಕೃಷ್ಣ

ಮಂಡ್ಯ: ಮೈಸೂರು-ಬೆಂಗಳೂರು ಚತುಷ್ಪಥ ಹೆದ್ದಾರಿಯ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗಾಗಿ ಬಿಸಿಯೂಟ ಕಾರ‍್ಯಕ್ರಮ, ಮಂಡ್ಯ ಜಿಲ್ಲೆಯಲ್ಲೇ ಎಪಿಡಿಪಿ ಕಾರ‍್ಯಕ್ರಮದ ಮೂಲಕ ವಿದ್ಯುತ್‌ ಗುಣಮಟ್ಟ ಸುಧಾರಿಸುವ ಕಾರ‍್ಯಕ್ರಮಕ್ಕೆ...