ನವದೆಹಲಿ: 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪ್ರಮುಖವಾಗಿ ಆತ್ಮಹತ್ಯೆಗೂ ಅತುಲ್ ಸುಭಾಷ್ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಕೌಟುಂಬಿಕ ಹಿಂಸಾಚಾರ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಕಾನೂನುಗಳ “ಸಮಗ್ರ ದುರುಪಯೋಗ”ದ ಕುರಿತು ಕಾನೂನು ತಜ್ಞರು ಕಳವಳ ವ್ಯಕ್ತಪಡಿಸಿದ್ದು, “ಸರಿಯಾದ ಶೋಧನಾ ಕಾರ್ಯವಿಧಾನ”, ಹೊಸ ಲಿಂಗ-ತಟಸ್ಥ ಕಾನೂನುಗಳು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ತಡೆಯಲು ಪೊಲೀಸರನ್ನು ಸಂವೇದನಾಶೀಲಗೊಳಿಸುವಂತೆ ಕರೆ ನೀಡಿದ್ದಾರೆ.
ಡೆತ್ ನೋಟ್ ನಲ್ಲಿ ಅತುಲ್ ಆರೋಪಿಸಿರುವವರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವರ ಪತ್ನಿ, ಆಕೆಯ ಸಂಬಂಧಿಕರು ಮತ್ತು ಉತ್ತರ ಪ್ರದೇಶ ಮೂಲದ ನ್ಯಾಯಾಧೀಶರಿಂದ ಕಿರುಕುಳ ಆರೋಪವಿದೆ.
ಹಿರಿಯ ವಕೀಲ ವಿಕಾಸ್ ಪಹ್ವಾ ಅವರು ಈ ಸಮಸ್ಯೆಯನ್ನು “ಅತ್ಯಂತ ಗಂಭೀರ” ಎಂದು ವಿಶ್ಲೇಷಿಸಿದ್ದು, ಸೂಕ್ತವಾದ ಪರಿಹಾರದ ಅಗತ್ಯವಿದೆ.
“ಹಲವಾರು ವರ್ಷಗಳಿಂದ ಈ ಕಾನೂನುಗಳನ್ನು ಅನೇಕ ಜನರು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಇದು ತುಂಬಾ ಗಂಭೀರವಾದ ವಿಷಯವಾಗಿದೆ ಮತ್ತು ನಾವು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ನನ್ನ ಸ್ವಂತ ಅಭಿಪ್ರಾಯವೆಂದರೆ ಈ ಸೆಕ್ಷನ್ ಜಾಮೀನು ನೀಡುವುದು. ಅಲ್ಲದೆ, ಸುಳ್ಳು ದೂರು ಇದ್ದರೆ ದಾಖಲಾಗಿದ್ದು, ತಪ್ಪಿತಸ್ಥ ದೂರುದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಂತ ಹೆಂಡತಿ, ಅತ್ತಿಗೆ, ನಾದಿನಿಯರೇ ಗೌರವಕ್ಕೆ ಧಕ್ಕೆಯಾಗಿದೆ ಎಂದು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದನ್ನು ನಾವು ಪ್ರತಿದಿನ ನೋಡುತ್ತೇವೆ. ನ್ಯಾಯಾಲಯಗಳು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಬೇಕು. ಪೊಲೀಸರು ಜಾಗೃತರಾಗಬೇಕು. ಅಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಅವರು ಅನುಕೂಲ ಮಾಡಿಕೊಡಬಾರದು ಎಂದು ಪಹ್ವಾ ಹೇಳಿದರು.
ಸಮಸ್ಯೆ ಮಹಿಳಾ ರಕ್ಷಣಾ ಕಾನೂನುಗಳಿಂದಲ್ಲ, ಆದರೆ ಅವುಗಳ ದುರುಪಯೋಗವಾಗುತ್ತಿದೆ. ನಮ್ಮ ಕಾನೂನು ಮತ್ತು ಆಡಳಿತಾತ್ಮಕ ವಾತಾವರಣದಲ್ಲಿ ಸರಿಯಾದ ಶೋಧನೆ ಕಾರ್ಯವಿಧಾನದಿಂದ ಇದನ್ನು ತಡೆಯಬಹುದು. “ವಿಚಾರಣೆ ಅಥವಾ ತನಿಖೆಯನ್ನು ಪ್ರಾರಂಭಿಸುವ ಮೊದಲು ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.
34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪ್ರಮುಖವಾಗಿ ಆತ್ಮಹತ್ಯೆಗೂ ಅತುಲ್ ಸುಭಾಷ್ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ತಮ್ಮ ವೈವಾಹಿಕ ಜೀವನದಲ್ಲಿ ವರ್ಷಗಳ ಕಾಲದ ಭಾವನಾತ್ಮಕ ಯಾತನೆ ಎಂದು ಆರೋಪಿಸಿದ ಬಗ್ಗೆ ವ್ಯಾಪಕವಾದ ವಿವರಗಳನ್ನು ನೀಡಿದ್ದಾರೆ.
ಲಿಂಗ-ತಟಸ್ಥ ಕಾನೂನುಗಳ ಅವಶ್ಯಕತೆಯಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವನಿ ದುಬೆ ಹೇಳಿದ್ದು, “ಸೆಕ್ಷನ್ 498A ಯ ಸಂಪೂರ್ಣ ಪ್ರಮೇಯವು ಮಹಿಳೆಯರನ್ನು ಶೋಷಣೆ, ಕಿರುಕುಳ ಅಥವಾ ದೈಹಿಕವಾಗಿ ಅಥವಾ ಮಾನಸಿಕವಾಗಿ ನಿಂದನೆಯಿಂದ ರಕ್ಷಿಸುವುದು. ಆದಾಗ್ಯೂ, ಈ ನಿಯಂತ್ರಣವು ಸಮಾಜದಲ್ಲಿ ಪುರುಷರಿಗೆ ಪಿಡುಗಾಗಿ ಪರಿಣಮಿಸಿರುವ ಹಲವಾರು ನಿದರ್ಶನಗಳಿವೆ.
ಹೀಗಾಗಿ ಇದೀಗ ಲಿಂಗ ತಟಸ್ಥ ಕಾನೂನುಗಳ ಸಮಯ ಬಂದಿದೆ. ಅಲ್ಲದೆ, ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಮತ್ತು ಅಮಾಯಕ ಕುಟುಂಬ ಸದಸ್ಯರಿಗೆ ಅನಗತ್ಯ ತೊಂದರೆ ತಪ್ಪಿಸಲು ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಹಲವಾರು ಕೌಟುಂಬಿಕ ಹಿಂಸಾಚಾರ ಮತ್ತು ವರದಕ್ಷಿಣೆ ಸಂಬಂಧಿತ ಪ್ರಕರಣಗಳನ್ನು ನಿರ್ವಹಿಸಿದ ಅನುಭವ ಇರುವ ವಕೀಲರಾದ ಸಂವೇದನಾ ವರ್ಮಾ ಅವರು ಮಾತನಾಡಿ, ‘ಮಹಿಳಾ ಸ್ನೇಹಿ ಕಾನೂನುಗಳ ಹಿಂದಿನ ಶಾಸಕಾಂಗ ಉದ್ದೇಶವು “ಸಮಾಜದ ದುರ್ಬಲ ವರ್ಗವೆಂದು ಪರಿಗಣಿಸಲ್ಪಟ್ಟಿರುವ” ಮಹಿಳೆಯರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಕಾಪಾಡುವುದಾಗಿದೆ.
ಕೌಟುಂಬಿಕ ಕಲಹ, ಕೌಟುಂಬಿಕ ಹಿಂಸಾಚಾರ ಮತ್ತು ಆರ್ಥಿಕ ಸಂಕಷ್ಟಗಳಿಂದಾಗುವ ದೌರ್ಜನ್ಯಗಳಿಂದ ಮಹಿಳೆಯರನ್ನು ರಕ್ಷಿಸುವುದು ಈ ಕಾನೂನುಗಳ ಉದ್ದೇಶವಾಗಿದೆ. ಆದರೆ, ಕೆಲವು ಮಹಿಳೆಯರು ವಿಚ್ಛೇದನದ ಹತೋಟಿ ಪಡೆಯಲು ಪುರುಷರು ಮತ್ತು ಅವರ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡಲು ಈ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.