spot_img
spot_img

ಮಹೀಂದ್ರಾ ಥಾರ್​ ಮೇಲೆ 3 ಲಕ್ಷಕ್ಕೂ ಹೆಚ್ಚು ಡಿಸ್ಕೌಂಟ್

spot_img
spot_img

Share post:

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್​ಗೆ ಕ್ರೇಜ್​ ಇರುವುದು ಗೊತ್ತಿರುವ ಸಂಗತಿ. ಈ ಎಸ್‌ಯುವಿ ಖರೀದಿಸಲು ಜನ ಸಾಲುಗಟ್ಟಿ ನಿಂತಿದ್ದಾರೆ. ನೀವು ಸಹ ಮಹೀಂದ್ರ ಥಾರ್ ಅನ್ನು ಖರೀದಿಸಲು ಯೋಜಿಸುತ್ತಿದ್ರೆ, ಈ ಅವಕಾಶ ನಿಮಗೆ ಹೇಳಿ ಮಾಡಿಸಿದಂತಿದೆ. ಕಂಪನಿಯು ಈ ಜನಪ್ರಿಯ ಆಫ್‌ರೋಡರ್‌ನಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್​ ನೀಡುತ್ತಿದೆ.
ಈ ವರ್ಷ ಮಾಡಿದ ಮಾದರಿಗಳ ದಾಸ್ತಾನುಗಳನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಲು ಕಂಪನಿಯು 3-ಡೋರ್ ಥಾರ್ ಮೇಲೆ ಭಾರೀ ಡಿಸ್ಕೌಂಟ್​ ನೀಡುತ್ತಿದೆ. ಮಹೀಂದ್ರ ಥಾರ್‌ನ 3-ಡೋರ್ ಮಾದರಿಯ 2WD ರೂಪಾಂತರಗಳ ಮೇಲೆ ಗ್ರಾಹಕರು ವಿಭಿನ್ನ ರಿಯಾಯಿತಿಗಳನ್ನು ಪಡೆಯಲಿದ್ದಾರೆ. ಥಾರ್ ಆರ್‌ಡಬ್ಲ್ಯೂಡಿ 1.5 ಲೀಟರ್ ಡೀಸೆಲ್ ರೂಪಾಂತರದ ಮೇಲೆ ಕಡಿಮೆ ಡಿಸ್ಕೌಂಟ್​ ಲಭ್ಯವಿದೆ. ಇದು ಸುಮಾರು ರೂ 56 ಸಾವಿರದವರೆಗೆ ರಿಯಾಯಿತಿ ಇದೆ.
ಮಹೀಂದ್ರ ಥಾರ್‌ನ ಡೀಸೆಲ್ ಎಂಜಿನ್‌ಗಳು 2184 cc ಮತ್ತು 1497 cc ಆಗಿವೆ. ಆದರೆ ಪೆಟ್ರೋಲ್ ಎಂಜಿನ್ 1997 cc ಇದೆ. ಇದು ಆಟೋಮೆಟಿಕ್​ ಮತ್ತು ಮಾನ್ಯುವಲ್​ ಟ್ರಾನ್ಸ್​ಮಿಷನ್​ನೊಂದಿಗೆ ಲಭ್ಯವಿದೆ. ವೆರಿಯಂಟ್​ ಮತ್ತು ಫ್ಯೂಯಿಲ್​ ಪ್ರಕಾರವನ್ನು ಅವಲಂಬಿಸಿ, ಥಾರ್ ಮೈಲೇಜ್ 15.2 ಕಿಮೀ/ಲೀಟರ್ ಆಗಿದೆ. ಥಾರ್ 4 ಆಸನಗಳು ಮತ್ತು ಉದ್ದ 3985 ಮಿ.ಮೀ., ಅಗಲ 1820 ಎಂ.ಎಂ. ಮತ್ತು ವೀಲ್‌ಬೇಸ್ 2450 ಮಿ.ಮೀ. ಹೊಂದಿದೆ.
ಪೆಟ್ರೋಲ್ ಎಂಜಿನ್ ಆಪ್ಷನ್​ನಲ್ಲಿ ರಿಯರ್​ ವ್ಹೀಲ್​ ಡ್ರೈವ್​ ವೆರಿಯಂಟ್ಸ್​ನಲ್ಲಿ ನೀವು ರೂ 1 ಲಕ್ಷದ 31 ಸಾವಿರದವರೆಗೆ ಡಿಸ್ಕೌಂಟ್​ ಪಡೆಯಬಹುದು. ಇದರೊಂದಿಗೆ, ಮಹೀಂದ್ರ ಥಾರ್‌ನ ಅರ್ಥ್ ಆವೃತ್ತಿಯಲ್ಲಿ ಅತ್ಯಧಿಕ ರಿಯಾಯಿತಿ ಲಭ್ಯವಿದೆ. LX ಟ್ರಿಪ್ ರೂಪಾಂತರಗಳಲ್ಲಿ ನೀವು 3 ಲಕ್ಷಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆಯುತ್ತೀರಿ.
ಹೊಸ ವರ್ಷದಿಂದ ಅಂದರೆ 2025 ರಿಂದ ಕಂಪನಿಯು ತನ್ನ ಉತ್ಪನ್ನಗಳನ್ನು ಸುಮಾರು 3 ಪ್ರತಿಶತದಷ್ಟು ಹೆಚ್ಚಿಸಬಹುದು. ವೆಚ್ಚದಲ್ಲಿನ ಹೆಚ್ಚಳ ಸೇರಿದಂತೆ ಇನ್ನಿತ ಕಾರಣದಿಂದಾಗಿ ಬೆಲೆಯನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಈಗಾಗಲೇ ಮಹೀಂದ್ರಾ ಹೇಳಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣ ಹಣದುಬ್ಬರ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಮುಂಬರುವ ತಿಂಗಳುಗಳಲ್ಲಿ XEV 7e, BE.07, BE.09 ಮತ್ತು XUV 400 ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದಲ್ಲದೆ, ಕಂಪನಿಯು EV ಶ್ರೇಣಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...