ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಶುರು ಮಾಡಿದೆ. 73ನೇ ದಿನಕ್ಕೆ ಕಾಲಿಟ್ಟ ಬಿಗ್ಬಾಸ್ ಸೀಸನ್ 11 ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಎರಡನೇ ಬಾರಿಗೆ ಬಿಗ್ಬಾಸ್ ಮನೆಯಲ್ಲಿ ಜೋಡಿ ಸ್ಪರ್ಧಿಗಳು ಕಳಪೆ ಪಟ್ಟ ಸ್ವೀಕರಿಸಿದ್ದಾರೆ.
ಕಲರ್ಸ್ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಮನೆ ಮಂದಿ ಕಳಪೆ ಪಟ್ಟಕ್ಕೆ ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರಗೆ ಕೊಟ್ಟಿದ್ದಾರೆ. ಈ ವಾರ ಬಿಗ್ಬಾಸ್ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ರಚನೆ ಮಾಡಿದ್ದರು.
ಒಂದು ತಂಡಕ್ಕೆ ಜವಾರಿ ಮಂದಿ, ಮತ್ತೊಂದು ತಂಡಕ್ಕೆ 11ರ ಅಬ್ಬರ ಅಂತ ಇಡಲಾಗಿತ್ತು. ಆದರೆ ಈ ಎರಡು ತಂಡಗಳ ಪೈಕಿ ಜವಾರಿ ಮಂದಿ ಅಂದರೆ ಹನುಮಂತ ಟೀಮ್ ಬಿಗ್ಬಾಸ್ ಮೂರು ಟಾಸ್ಕ್ನಲ್ಲಿ ಗೆದ್ದುಕೊಂಡು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದರು.
ಆದರೆ ಬಿಗ್ಬಾಸ್ ಕೊಟ್ಟ ಟಾಸ್ಕ್ನಲ್ಲಿ ಗೌತಮಿ ತಂಡ ಹೀನಾಯವಾಗಿ ಸೋಲನ್ನು ಕಂಡಿದೆ. ಹೀಗಾಗಿ ಇದೇ ತಂಡ ಇಬ್ಬರು ಸ್ಪರ್ಧಿಗಳನ್ನು ಮನೆ ಮಂದಿ ಕಳಪೆ ಪಟ್ಟಕ್ಕೆ ಕಳುಹಿಸಿದ್ದಾರೆ.
ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಇಬ್ಬರಿಗೂ ಸಮವಾಗಿ ಕಳಪೆ ಸಿಕ್ಕಿದ್ದು, ಹೀಗಾಗಿ ಈ ಇಬ್ಬರು ಜೈಲಿಗೆ ಹೋಗಿದ್ದಾರೆ. ಅಲ್ಲದೇ ಜೈಲಿನಲ್ಲೇ ಇದ್ದುಕೊಂಡೆ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಉಳಿದ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ನಾವು ಬಿಗ್ಬಾಸ್ ರೂಲ್ಸ್ ಬ್ರೇಕ್ ಮಾಡ್ತೀವಿ ನೋಡಿ ಅಂತ ಹೆದರಿಸಿದ್ದಾರೆ.