spot_img

ಜೋಳದ ಕಟಾವಿಗೆ ತೊಡಕಾದ ಮಳೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ತುಮಕೂರು: ತುಮಕೂರಿನಲ್ಲಿ ಸುಮಾರು 29,940 ಹೆಕ್ಟೇರ್‌ ಮುಸುಕಿನ ಜೋಳ ಬೆಳೆದಿದ್ದು ದಿನಂಪ್ರತಿ ಸುರಿಯುತ್ತಿರುವ ಜಡಿ ಮಳೆಯಿಂದ ಜೋಳದ ಬೆಳೆ ಕಟಾವಿಗೆ ತೊಡಕಾಗಿದೆ. ಜೋಳ ಬಿತ್ತನೆ ಮಾಡಿ ಐದು ತಿಂಗಳು ಕಳೆದಿದ್ದು ಕಟಾವಿಗೆ ತಯಾರಾಗಿದೆ. ಆದರೆ, ಕಳೆದ 15 ದಿನಗಳಿಂದ ತುಂತುರು ಮಳೆ ಸುರಿಯುತ್ತಿರುವ ಪರಿಣಾಮ ಐದು ತಿಂಗಳು ಕಳೆದಿರುವುದರಿಂದ ಗಿಡಗಳಲ್ಲಿಯೇ ಜೋಳದ ತೆನೆ ಒಣಗಿದ್ದು ಸರಿಯಾದ ಸಮಯದಲ್ಲಿ ಕಟಾವು ಮಾಡದ ಕಾರಣ ಗಿಡದಲ್ಲಿ ಮೊಳಕೆ ಒಡೆಯುತ್ತಿದೆ. ರೈತರು ತೆನೆ ಕಟಾವಿಗೆ ಮುಂದಾದರೂ ಕಟಾವು ಮಾಡುವ ಸಂದರ್ಭದಲ್ಲಿ ಮಳೆಯಾಗುತ್ತಿರುವುದರಿಂದ ಶೀತ ವಾತಾವರಣದಿಂದ ಕಾಡು ಬೇರ್ಪಡಿಸಲು ಸಾಹಸ ಪಡಬೇಕಾಗುತ್ತದೆ.
ಜೋಳ ಬಿತ್ತನೆ ಮಾಡಿದ ಸುಮಾರು 4 ತಿಂಗಳ ನಂತರ ತೆನೆಗಳನ್ನು ಕಟಾವು ಮಾಡಬೇಕು. ಬಿತ್ತನೆ ಮಾಡಿದ ಸಂದರ್ಭದಲ್ಲಿ ಭಾರಿ ಮಳೆಗೆ ತುತ್ತಾಗಿತ್ತು. ನಂತರದ ದಿನಗಳಲ್ಲಿ ಅಳಿದುಳಿದು ಹುಟ್ಟಿದ ಗಿಡಗಳಿಗೆ ರೋಗರುಜಿನಗಳು ಎದುರಾಗಿವೆ. ಕೀಟನಾಶಕಗಳನ್ನು ಸಿಂಪಡಿಸಿ ಗಿಡಗಳನ್ನು ಉಳಿಸಿಕೊಂಡರು ಕೆಲ ರೈತರು ಕಟಾವು ಮಾಡಿದಾಗ ತುಂತುರು ಮಳೆಯಾಗಿ ಜೋಳ ಬಿಡಿಸಲು ಸಾಧ್ಯವಾಗದೆ ಇದ್ದಲ್ಲೇ ಬಲೆಗಟ್ಟುತ್ತಿದೆ. ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂದೇನು ಎಂಬ ಪ್ರಶ್ನೆ ರೈತರಲ್ಲಿಕಾಡುತ್ತಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಜಡಿ ಮಳೆಯಿಂದ ಮುಸುಕಿನ ಜೋಳ ಬೆಳೆ ನಶಿಸುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ. ಹೌದು, ಜಿಲ್ಲೆಯಲ್ಲಿ ಸುಮಾರು 29,940 ಹೆಕ್ಟೇರ್‌ ಮುಸುಕಿನ ಜೋಳ ಬೆಳೆದಿದ್ದು ದಿನಂಪ್ರತಿ ಸುರಿಯುತ್ತಿರುವ ಜಡಿ ಮಳೆಯಿಂದ ಜೋಳದ ಬೆಳೆ ಕಟಾವಿಗೆ ತೊಡಕಾಗಿದೆ. ಜೋಳ ಬಿತ್ತನೆ ಮಾಡಿ ಐದು ತಿಂಗಳು ಕಳೆದಿದ್ದು ಕಟಾವಿಗೆ ತಯಾರಾಗಿದೆ. ಆದರೆ, ಕಳೆದ 15 ದಿನಗಳಿಂದ ತುಂತುರು ಮಳೆ ಸುರಿಯುತ್ತಿರುವ ಪರಿಣಾಮ ಐದು ತಿಂಗಳು ಕಳೆದಿರುವುದರಿಂದ ಗಿಡಗಳಲ್ಲಿಯೇ ಜೋಳದ ತೆನೆ ಒಣಗಿದ್ದು ಸರಿಯಾದ ಸಮಯದಲ್ಲಿ ಕಟಾವು ಮಾಡದ ಕಾರಣ ಗಿಡದಲ್ಲಿ ಮೊಳಕೆ ಒಡೆಯುತ್ತಿದೆ. ರೈತರು ತೆನೆ ಕಟಾವಿಗೆ ಮುಂದಾದರೂ ಕಟಾವು ಮಾಡುವ ಸಂದರ್ಭದಲ್ಲಿ ಮಳೆಯಾಗುತ್ತಿರುವುದರಿಂದ ಶೀತ ವಾತಾವರಣದಿಂದ ಕಾಡು ಬೇರ್ಪಡಿಸಲು ಸಾಹಸ ಪಡಬೇಕಾಗುತ್ತದೆ.
ಜೋಳ ಬಿತ್ತನೆ ಮಾಡಿದ್ದಾಗಿನಿಂದ ಕೊಯ್ಲು ಮಾಡುವವರೆಗೂ ಹವಾಮಾನ ವ್ಯತ್ಯಾಸದಿಂದ ಕಾಲಕ್ಕೆ ಸರಿಯಾಗಿ ಮಳೆಯಾಗದೆ, ಇಳುವರಿ ಕುಂಠಿತವಾಗಿ ಕೃಷಿಗೆ ಖರ್ಚು ಮಾಡಿದ ಹಣವೂ ವಾಪಸ್‌ ಬಾರದಂತಾಗಿದೆ. ಪ್ರತಿ ಎಕರೆಗೆ 20 ಸಾವಿರ ರೂ. ಖರ್ಚು ತಗುಲಿದೆ. ಶೇ.30ರಷ್ಟು ಬೆಳೆ ಕೈಗೆ ಸಿಗುವ ನಿರೀಕ್ಷೆಯಿದೆ.
ಮಧುಗಿರಿ ಉಪವಿಭಾಗ ವ್ಯಾಪ್ತಿಯಲ್ಲಿ ಹೆಚ್ಚು ಮುಸುಕಿನ ಜೋಳ ಬೆಳೆಯಲಾಗಿದೆ. ಜಿಲ್ಲೆಯ ಬರಪೀಡಿತ ತಾಲೂಕುಗಳಾದ ಕೊರಟಗೆರೆ 13,380 ಹೆಕ್ಟೇರ್‌, ಮಧುಗಿರಿ 11,800 ಹೆಕ್ಟೇರ್‌ನಷ್ಟು ಮುಸುಕಿನ ಜೋಳ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮುಸುಕಿನ ಜೋಳ ಬೆಳೆಯುವ ತಾಲೂಕುಗಳಲ್ಲಿ ಜಡಿ ಮಳೆಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಬೆಳೆ ಕೈಹಿಡಿಯದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಕೊರಟಗೆರೆ ಮತ್ತು ಮಧುಗಿರಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಮುಸುಕಿನ ಜೋಳ ಬೆಳೆಯಲಾಗಿದೆ. ಮಳೆಯಿಂದ ನಷ್ಟವಾಗಿರುವ ಬಗ್ಗೆ ವರದಿಯಾಗಿದ್ದರೆ ಅದಕ್ಕೆ ನಮ್ಮ ಇಲಾಖೆ ಹಾಗೂ ವಿಮೆ ಕಂಪನಿ ಪ್ರತಿನಿಧಿ ಭೇಟಿಯಾಗಿ ಪರಿಶೀಲನೆ ಮಾಡಲಾಗುವುದು. ನಷ್ಟವಾಗಿರುವುದು ಕಂಡು ಬಂದಲ್ಲಿ ಎಸ್‌ಡಿಆರ್‌ಎಫ್‌ ನಿಯಮಾವಳಿಯಂತೆ ಸರಕಾರ ಪರಿಹಾರ ನೀಡುತ್ತದೆ.
ಮಳೆ ತಡವಾದ ಪರಿಣಾಮ ಬೆಳೆ ಏರುಪೇರಾಗಿದೆ. ಜೋಳ ಉತ್ತಮವಾಗಿ ಒಣಗದಿದ್ದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಳೆ ಸಿಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈಗಾಗಲೇ ಮೆಕ್ಕೆಜೋಳ ಹಾನಿಯಾಗಿರುವ ರೈತರಿಗೆ ಸರಕಾರ ಪರಿಹಾರ ಘೋಷಣೆ ಮಾಡಬೇಕು.
ತಾಲೂಕಿನಲ್ಲಿ ಇದುವರೆಗೂ ಮುಸುಕಿನ ಜೋಳ ನಷ್ಟ ಆಗಿರುವ ಬಗ್ಗೆ ವರದಿ ಬಂದಿಲ್ಲ. ತಾಲೂಕಿನಲ್ಲಿ ಎಲ್ಲಾದರೂ ಮುಸುಕಿನ ಜೋಳ ಬೆಳೆ ನಾಶವಾಗಿರುವ ಬಗ್ಗೆ ಅರ್ಜಿ ಬಂದರೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

APPLE SIRI DATA : ಬಳಕೆದಾರರ Siri ಡೇಟಾ ಮಾರಾಟ ಮಾಡಿಲ್ಲ ಆ್ಯಪಲ್ ಸ್ಪಷ್ಟನೆ

New Delhi News: ಬಳಕೆದಾರರ ಸಿರಿ ಡೇಟಾವನ್ನು ಯಾರಿಗೂ ಮಾರಾಟ ಮಾಡಿಲ್ಲ ಎಂದು APPLE ಹೇಳಿಕೊಂಡಿದೆ.ಮಾರ್ಕೆಟಿಂಗ್ ಪ್ರೊಫೈಲ್​ಗಳನ್ನು ನಿರ್ಮಿಸಲು ಸಿರಿ ಡೇಟಾ ಬಳಸಿಲ್ಲ, ಯಾವುದೇ ಜಾಹೀರಾತಿಗೂ...

P JAYACHANDRAN NO MORE : ಸುಪ್ರಸಿದ್ಧ ಭಾವ ಗಾಯಕ ಪಿ.ಜಯಚಂದ್ರನ್ ವಿಧಿವಶ

Thrissur (Kerala) News: P JAYACHANDRAN ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು. ಈ ಮೂಲಕ...

CANCER PREVENTION FOODS : ಈ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆ

Cancer Preventive Foods News: ಆಹಾರ ಹಾಗೂ ಜೀವನಶೈಲಿಯ ಬದಲಾವಣೆಯಿಂದCANCER ಉಂಟಾಗುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ. ತಜ್ಞರು ತಿಳಿಸುವಂತಹ ಈ ಆಹಾರ ಸೇವಿಸುವುದರಿಂದ CANCER...

POLIO CERTIFICATE : ‘ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ’

Islamabad News: ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ POLIO CERTIFICATEವನ್ನು ಕಡ್ಡಾಯಗೊಳಿಸಿದೆ.ಈ ನಿರ್ದೇಶನ ಉಲ್ಲಂಘಿಸುವವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾದ ಜನರಲ್...