spot_img
spot_img

ಭೂಪಟದಲ್ಲಿ ಗುರುತೇ ಹೊಂದಿರದ ಗ್ರಾಮ ನಿವಾಸಿಗಳ ಹೋರಾಟ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಅದಿಲಾಬಾದ್(ತೆಲಂಗಾಣ)​: ಅಕ್ಕಪಕ್ಕದ ಯಾವುದೇ ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಸೇರದೆ ಕಳೆದ 18 ವರ್ಷಗಳಿಂದ ಇಲ್ಲಿನ ಜನರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂಥದ್ದೊಂದು ಗ್ರಾಮ ಪಕ್ಕದ ತೆಲಂಗಾಣದಲ್ಲಿದೆ.

ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯ ಇಂದ್ರವೆಲ್ಲಿ ಮಂಡಲದಲ್ಲಿ ಸುಂದರ್​ನಗರ ಎಂಬ ಪುಟ್ಟ ಗ್ರಾಮವಿದೆ. 500 ಜನರಿರುವ ಈ ಗ್ರಾಮ ಯಾವುದೇ ಆಡಳಿತಕ್ಕೆ ಒಳಪಟ್ಟಿಲ್ಲ ಎಂಬುದು ಅಚ್ಚರಿ. ಸುತ್ತಮುತ್ತಲು ಹತ್ತಾರು ಗ್ರಾಮ ಪಂಚಾಯಿತಿಗಳಿದ್ದರೂ, ಈ ಊರು ಅನಾಥವಾಗಿದೆ.

ಯಾವುದೇ ಪಂಚಾಯಿತಿಯ ಆಡಳಿತಕ್ಕೆ ಸೇರದೆ ಕಳೆದ 18 ವರ್ಷಗಳಿಂದಲೂ ಇಲ್ಲಿನ ಜನರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.

ಆಡಳಿತದ ಕೊರತೆ, ಅಭಿವೃದ್ಧಿ ಮರೀಚಿಕೆ. ಪಿಂಚಣಿ, ರೇಷನ್​ ಕಾರ್ಡ್​​ ಅಥವಾ ಸಬ್ಸಿಡಿ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ವಂಚಿತ. ಗ್ರಾಮದಲ್ಲಿ ರಸ್ತೆ, ಶಾಲೆ, ಕಾಲುವೆ ಅಥವಾ ಇತರೆ ಮೂಲಸೌಕರ್ಯಗಳಿಲ್ಲ. ಸಾವು ಅಥವಾ ಜನನ ಕುರಿತು ಯಾವುದೇ ಪ್ರಮಾಣ ಪತ್ರ ಲಭ್ಯವಾಗುತ್ತಿಲ್ಲ. ಈ ಗ್ರಾಮ ಯಾವುದೇ ಪಂಚಾಯತಿ ವ್ಯಾಪ್ತಿಯಲ್ಲಿ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದಿದ್ದಾರೆ.

ಸುಂದರ್​ನಗರ್​​ ಗ್ರಾಮ ಯಾವುದೇ ಆಡಳಿತಾತ್ಮಕ ಪರಿಸ್ಥಿತಿಯನ್ನು ಹೊಂದಿಲ್ಲ. ಇದು ಇಂದ್ರವೆಲ್ಲಿ ಮತ್ತು ಯೆಮೈಕುಂಟಾ ಗ್ರಾಮಗಳಿಗೆ ಸಮೀಪವಿದ್ದರೂ ಯಾವುದೇ ಗ್ರಾಮ ಪಂಚಾಯಿತಿಗೆ ಸೇರಿಲ್ಲ. 2006ರಲ್ಲಿ ಇಂದ್ರವೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಮ್ನೆ ನಾಂದೇವ್ ಬಳಿ 90 ವಸತಿರಹಿತ ಕುಟುಂಬಗಳಿಗೆ ಸರಕಾರ 4.20 ಎಕರೆ ಜಾಗ ನೀಡಿತ್ತು. ಇದೇ ಜಾಗ ಕಾಲಾನಂತರದಲ್ಲಿ ಸುಂದರ್‌ನಗರ್‌ ಅಗಿ ನಿರ್ಮಾಣವಾಗಿದೆ. ಆದರೆ, ಪಂಚಾಯತ್​ ಸೌಲಭ್ಯದಿಂದ ವಂಚಿತವಾಗಿದೆ.

ಉಟ್ನೂರು ಐಟಿಡಿಎ ಅಧಿಕಾರಿಗಳು ಎರಡು ಕೊಳವೆಬಾವಿಗಳನ್ನು ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ಒದಗಿಸಿದ್ದು ಬಿಟ್ಟರೆ ಬೇರೇನೂ ಇಲ್ಲಿ ಕಂಡುಬರುವುದಿಲ್ಲ. 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದರೂ ಕಂದಾಯ ಪಂಚಾಯತಿ ಇಲ್ಲದಿರುವುದರಿಂದ ಅಭಿವೃದ್ಧಿ ಉಪಕ್ರಮಗಳು ಮುಂದುವರೆದಿಲ್ಲ ಎಂದಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...