ಮೈಸೂರು: ಗೊಮ್ಮಟಗಿರಿಯಲ್ಲಿ ಶುಕ್ರವಾರ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಸೋಮವಾರದವರೆಗೆ ನಡೆಯಲಿದೆ.
ಗೊಮ್ಮಟಗಿರಿ ಕ್ಷೇತ್ರದಲ್ಲಿ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರೆಯ ವೇಳೆ ಏನೆಲ್ಲ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂಬುದರ ಕುರಿತಂತೆ ಸಮಿತಿ ಅಧ್ಯಕ್ಷ ಮನ್ಮಥ್ ರಾಜ್ ಅವರು ಮಾಹಿತಿಗಳನ್ನು ನೀಡಿದ್ದು. ಡಿ.12ರಂದು ಪೂರ್ವಭಾವಿ ಸಭೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ.
ಡಿ.13, 14, 15ರ ಮೂರೂ ದಿನ ಬೆಳಗ್ಗೆ 11ಕ್ಕೆ ಮಹಾ ಮಸ್ತಕಾಭಿಷೇಕ ಜರುಗಲಿದೆ ಎಂದು ತಿಳಿಸಿದ್ದಾರೆ.
ಡಿ.13 ರಿಂದ ಪ್ರಾರಂಭಗೊಂಡಿದ್ದು 15ರ ವರೆಗೆ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಜರುಗಲಿದೆ.
75ನೇ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರೆಯು ಡಿ.12ರಿಂದ ಆರಂಭವಾಗಿ 15ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿದ್ದು ದೂರದ ಊರುಗಳಿಂದ ಭಕ್ತರು ಆಗಮಿಸಲಾರಂಭಿಸಿದ್ದಾರೆ.
ಗೊಮ್ಮಟಗಿರಿ ಸೇವಾ ಸಮಿತಿಯು ಕಾರ್ಯಕ್ರಮವನ್ನು ಅದ್ಧೂರಿ ಮತ್ತು ಯಶಸ್ವಿಯಾಗಿ ನಡೆಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಹುಣಸೂರು ತಾಲ್ಲೂಕಿನ ಪ್ರಸಿದ್ಧ ಜೈನ ಕ್ಷೇತ್ರ ಗೊಮ್ಮಟಗಿರಿಯಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ 75ನೇ ಮಹಾಮಸ್ತಕಾಭಿಷೇಕ ಅದ್ಧೂರಿಯಾಗಿ ಶುಕ್ರವಾರ ಆರಂಭವಾಯಿತು.
ಈ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ಹಾಗೂ ಕನ್ನಡಿಗರಾದ ಸಿ. ಹೆಚ್. ವಿಜಯ್ ಶಂಕರ್, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಗಳು, ಕನಕಗಿರಿಯ ಸ್ವಸ್ತೀ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಅಪಾರ ಭಕ್ತರು ಜತೆಗೆ ವಿವಿಧ ಧಾರ್ಮಿಕ ಸ್ವಾಮೀಜಿಗಳು ಭಾಗವಹಿಸಿದ್ದರು.
ವಿವಿಧ ರೀತಿಯ ದ್ರವ್ಯಗಳನ್ನು ತುಂಬಿದ 108 ಕಳಶಗಳಲ್ಲಿ ಜೈನ ಸಂಪ್ರದಾಯದಂತೆ, ಮಂತ್ರ ಪಠಣ, ಘೋಷಗಳೊಂದಿಗೆ ಮಹಾಮಸ್ತಕಾಭಿಷೇಕ ನೆರವೇರಿತು. ಇದರ ಜತೆಗೆ ಎಳನೀರು, ಕಬ್ಬಿನಹಾಲಿನ ಅಭಿಷೇಕ, ಕ್ಷೀರಾಭಿಷೇಕ, ಅರಿಶಿನ- ಕುಂಕುಮ ಅಭಿಷೇಕ, ಕೇಸರಿ- ಶ್ರೀಗಂಧದ ಅಭಿಷೇಕಗಳು ನೆರವೇರಿದವು.
ದೇಶದ ಹಲವು ಕಡೆಗಳಿಂದ ಆಗಮಿಸಿದ ಜೈನ ಭಕ್ತರು ಮೂರು ದಿನದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗೊಮ್ಮಟಗಿರಿ ಕ್ಷೇತ್ರಕ್ಕೆ ಮೈಸೂರು ಕಡೆಯಿಂದ ತೆರಳುವವರು ಮೈಸೂರಿನಿಂದ ಹುಣಸೂರು ರಸ್ತೆಯಲ್ಲಿ ತೆರಳಿ ಇಲವಾಲ ದಾಟಿ ಮುಂದೆ ಸಾಗಿದರೆ ಬಲಬದಿಯಲ್ಲಿ ಗೊಮ್ಮಟಗಿರಿಗೆ ತೆರಳುವ ಮಾರ್ಗ ಸಿಗುತ್ತದೆ. ಅದರಲ್ಲಿ ಸಾಗಿದರೆ ಕ್ಷೇತ್ರವನ್ನು ತಲುಪಬಹುದು.
ಹಾಗೆಯೇ ಮಂಗಳೂರು, ಕೊಡಗು ಹಾಸನ ಕಡೆಯಿಂದ ಬರುವವರು ಬಿಳಿಕೆರೆ ದಾಟಿ ಮುಂದೆ ಬಂದರೆ ಮನುಗನಹಳ್ಳಿ ಸಿಗುತ್ತದೆ.
ಇಲ್ಲಿ ಎಡಕ್ಕೆ ಗೊಮ್ಮಟಗಿರಿ ಕ್ಷೇತ್ರಕ್ಕೆ ಸ್ವಾಗತ ನೀಡುವ ಸ್ವಾಗತಫಲಕದ ರಸ್ತೆಯಲ್ಲಿ ಸಾಗಿದರೆ ಕ್ಷೇತ್ರವನ್ನು ತಲುಪಲು ಸಾಧ್ಯವಾಗುತ್ತದೆ.