spot_img
spot_img

DELHIS AIR QUALITY – ತೀವ್ರ ಮಾಲಿನ್ಯದಿಂದ ಹೆಚ್ಚಿದ ಆರೋಗ್ಯ ಸಮಸ್ಯೆ

spot_img
spot_img

Share post:

New Delhi :

ದೆಹಲಿಯಲ್ಲಿ ಬುಧವಾರ 5 ಡಿಗ್ರಿ ತಾಪಾಮಾನ ದಾಖಲಾಗಿದ್ದು, ಮಂಗಳವಾರ ಮಧ್ಯ ರಾತ್ರಿ 2.30ರ ಸುಮಾರಿಗೆ 7.4 ಡಿಗ್ರಿ ತಾಪಮಾನ ದಾಖಲಾಗಿತ್ತು ಎಂದು ಐಎಂಡಿ ತಿಳಿಸಿದೆ. ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅನುಸಾರ, ಬುಧವಾರ ಬೆಳಗ್ಗೆ 7ಕ್ಕೆ ಎಕ್ಯೂಐ 442 ದಾಖಲಾಗಿದ್ದು, ಮಂಗಳವಾರ ಇದೇ ಹೊತ್ತಿಗೆ ಎಕ್ಯೂಐ 421 ಇತ್ತು.

ಐಟಿಒದಲ್ಲಿ ವಾಯುಗುಣಮಟ್ಟ 458 ದಾಖಲಾಗುವ ಮೂಲಕ ತೀವ್ರ ಕಳಪೆ ಹಂತದಲ್ಲಿದೆ.  ರಾಷ್ಟ್ರ ರಾಜಧಾನಿಯಲ್ಲಿ ಚಳಿಯ ತೀವ್ರತೆ ಅಧಿಕವಾಗಿದ್ದು, ನಗರದಲ್ಲಿ ದಟ್ಟ ಮಂಜು ಕವಿದ ವಾತಾವರಣವಿದ್ದು, ವೀಕ್ಷಣಾ ಪ್ರಮಾಣ ಕುಸಿದಿದೆ.

ಈ ನಡುವೆ ವಾಯುಗುಣಮಟ್ಟ ತೀವ್ರ ಕಳಪೆ ಹಂತದಲ್ಲಿ ಮುಂದುವರೆದಿದೆ.ದೆಹಲಿಯಲ್ಲಿ ಬುಧವಾರ 5 ಡಿಗ್ರಿ ತಾಪಾಮಾನ ದಾಖಲಾಗಿದ್ದು, ಮಂಗಳವಾರ ಮಧ್ಯ ರಾತ್ರಿ 2.30ರ ಸುಮಾರಿಗೆ 7.4 ಡಿಗ್ರಿ ತಾಪಮಾನ ದಾಖಲಾಗಿತ್ತು ಎಂದು ಐಎಂಡಿ ತಿಳಿಸಿದೆ.

ಇನ್ನು ಆಲಿಪುರ್​ನಲ್ಲಿ 471, ಜವಾಹರ್​ಲಾಲ್​ ನೆಹರು ಸ್ಟೇಡಿಯಂನಲ್ಲಿ 443, ಡಿಟಿಯುನಲ್ಲಿ 432, ಐಜಿಐ ವಿಮಾನ ನಿಲ್ದಾಣದಲ್ಲಿ 418, ಆರ್​ಕೆ ಪುರಂನಲ್ಲಿ 464, ಡಿಯು ಉತ್ತರ ಕ್ಯಾಂಪಸ್​ನಲ್ಲಿ 436 ದಾಖಲಾಗಿದೆ.ಚಾಂದಿನಿ ಚೌಕ್​ನಲ್ಲಿ ಎಕ್ಯೂಐ 374, ಲೋದಿ ರೋಡ್​ನಲ್ಲಿ 348, ದಿಲ್ಶದ್​ ಗಾರ್ಡನ್​ನಲ್ಲಿ 344, ಎನ್​ಎಸ್​ಐಟಿ ದ್ವಾರಕಾದಲ್ಲಿ 367 ದಾಖಲಾಗಿದೆ.

ಈ ತೀವ್ರ ಚಳಿಯ ನಡುವೆಯೇ ವಾಯು ಸೇನಾ ಸಿಬ್ಬಂದಿ 78ನೇ ಗಣರಾಜ್ಯೋತ್ಸ ಪರೇಡ್​ಗೆ ಕರ್ತವ್ಯ ಪಥ್​ನಲ್ಲಿ ರಿಹರ್ಸಲ್​ ನಡೆಸಿದ್ದಾರೆ.ಈ ನಡುವೆ ಕೆಲವು ಪ್ರದೇಶದಲ್ಲಿ ತೀವ್ರ ಕಳಪೆ ಬದಲಾಗಿ ಎಕ್ಯೂಐ ಕಳಪೆ ವರ್ಗದಲ್ಲಿ ಕಂಡಿದೆ.

Deteriorating people’s health problem:

ನಗರದ ನಿವಾಸಿ ಭಗತ್​ ಸಿಂಗ್​ ಮಾತನಾಡಿ, ಮಾಲಿನ್ಯದಿಂದಾಗಿ ಉಸಿರಾಟದ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪಾರ್ಕ್​ಗೆ ವಾಕಿಂಗ್​ ಬರುವವರ ಸಂಖ್ಯೆ ಕುಸಿತಗೊಂಡಿದೆ ಎಂದಿದ್ದಾರೆ. ಕಳೆದೆರಡು ದಿನಗಳಿಂದ ಮಾಲಿನ್ಯ ಹೆಚ್ಚಿದ್ದು, ಉಸಿರಾಟ ಕಷ್ಟವಾಗುತ್ತಿದೆ ಎಂದಿದ್ದಾರೆ.

ಈ ನಡುವೆ ಮಹಾರಾಷ್ಟ್ರದಿಂದ ಇಂಡಿಯಾ ಗೇಟ್​ ವೀಕ್ಷಣೆಗೆ ಬಂದಿದ್ದ ಅವಿನಾಶ್​ ಎಂಬ ವ್ಯಕ್ತಿ ಮಾಲಿನ್ಯದಿಂದ ಉಸಿರಾಟದ ಸಮಸ್ಯೆ ಅನುಭವಿಸಿರುವ ವರದಿಯಾಗಿದೆ. ಈ ಕುರಿತು ಮಾತನಾಡಿರುವ ಅವರು, ನಾನು ಬೈಕ್​ನಲ್ಲಿ ದೆಹಲಿಗೆ ಬಂದಿದ್ದು, ಗುರುಗ್ರಾಮ್​ಗೆ ಹೋಗುವಾಗ ಉಸಿರಾಟದ ಸಮಸ್ಯೆ ಅನುಭವಿಸಿರುವುದಾಗಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಡಿಸೆಂಬರ್​ 16ರಿಂದ ಜಿಆರ್​ಎಪಿ ಹಂತ ನಾಲ್ಕನ್ನು ಜಾರಿಗೆ ತರಲಾಗಿದೆ. ದೆಹಲಿ ಎಕ್ಯೂಐ ಮಟ್ಟ 400 ಗಡಿ ದಾಟಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಯಿತು.

ಇಂಡಿಯಾ ಗೇಟ್​ ಭೇಟಿಗೆ ಬಂದಿದ್ದ ಅನಂತ್​ ಕುಮಾರ್​, ದಿಢೀರ್​ ಆಗಿ ಮಾಲಿನ್ಯ ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಈ ಮೊದಲು ಕೊಂಚ ನಿರಾಳವಾದಂತೆ ಕಂಡಿದ್ದರೂ, ಇದೀಗ ಮತ್ತೆ ಮಾಲಿನ್ಯ ಸಮಸ್ಯೆ ಹೆಚ್ಚಿದೆ. ಈ ಸಂಬಂದ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...